ಅಂಕೋಲಾ ತಾಲೂಕಿನ ಕಲ್ಲೇಶ್ವರದಲ್ಲಿ ಕಡವೆ ಬೇಟೆ; ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವೇಳೆ ಓರ್ವ ಬಲೆಗೆ, ಐವರು ಪರಾರಿ..

ಅಂಕೋಲಾ: ತಾಲೂಕಿನ ಕಲ್ಲೇಶ್ವರ ಗ್ರಾಮದ ಅಡಿಕೆ ತೋಟವೊಂದರಲ್ಲಿ ರಾತ್ರೋರಾತ್ರಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ಪಾಪಿಗಳ ತಂಡದ ಮೇಲೆ ರಾಮನಗುಳಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕೃತ್ಯವೆಸಗಿದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಐವರು ಪಾಪಿಗಳು ಕತ್ತಲಲ್ಲಿ ತಲೆಮರೆಸಿಕೊಂಡಿದ್ದಾರೆ. ಅಕ್ಟೋಬರ್ 16ರಂದು ರಾತ್ರಿ ಗಸ್ತು ತಿರುಗುತ್ತಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಸಿಬ್ಬಂದಿಗಳು ಈ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಕಲ್ಲೇಶ್ವರ ಗ್ರಾಮದ ಸರ್ವೆ ನಂಬರ್ 30ಅ ರಲ್ಲಿರುವ ಲಕ್ಷ್ಮಣ ಬಾಬು ಸಿದ್ದಿ ಎಂಬುವವರ ಅಡಿಕೆ…

News Desk

ಪೂಜಗೇರಿ ಸೇತುವೆಯಲ್ಲಿ ಹೈಟ್ ಬ್ಯಾರಿಕೇಡ್ ಮಾಯ: ನಿಷೇಧವಿದ್ದರೂ ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿ ಯಮಸ್ವರೂಪಿ ವಾಹನಗಳ ಸಂಚಾರ..

ಅಂಕೋಲಾ: ತಾಲೂಕಿನ ಪ್ರಮುಖ ಸಂಪರ್ಕ ಸೇತುವೆಯಾಗಿರುವ ಪೂಜಗೇರಿ ಸೇತುವೆ ತೀವ್ರವಾಗಿ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಭಾರಿ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳು ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಕೆಲವೇ ದಿನ ಸೀಮಿತವಾಗಿದ್ದು, ಬೃಹತ್ ವಾಹನಗಳ ಪ್ರವೇಶ ತಡೆಯಲು ಅಳವಡಿಸಲಾಗಿದ್ದ ಹೈಟ್ ಬ್ಯಾರಿಕೇಡ್ ಕಬ್ಬಿಣದ ಆ್ಯಂಗಲ್ ಅನ್ನೇ ಕತ್ತರಿಸಿ ಹಾಕಿ, ಯಮಸ್ವರೂಪಿ ಬೃಹತ್ ವಾಹನಗಳ ಓಡಾಟಕ್ಕೆ ರಾಜಮಾರ್ಗ ಸೃಷ್ಟಿಸಿಕೊಂಡಿದ್ದಾರೆ. ಸೇತುವೆಯ ದುಸ್ಥಿತಿಯನ್ನು ಅರಿತು, ಜಿಲ್ಲಾಡಳಿತದ…

News Desk

ಮೂಲ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿದೆಯೇ, ವಿಭೂತಿ ಜಲಪಾತದ ಪ್ರವಾಸೋದ್ಯಮ.?

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಪ್ರಕೃತಿ ಸಿರಿಯಿಂದ ಕಂಗೊಳಿಸುವ ಸುಂದರ 'ವಿಭೂತಿ ಜಲಪಾತ'ವು ಪ್ರವಾಸಿಗರ ಹಾಟ್ ಫೇವರಿಟ್ ತಾಣ. ಆದರೆ, ಹಸಿರು ಪರಿಸರ ಹಾಗೂ ಮನಮೋಹಕ ಜಲಧಾರೆಯಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ತಾಣ, ಇಂದು ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಸೊರಗುತ್ತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳಿದ್ದರೂ, ಸೂಕ್ತ ರಸ್ತೆ ಸಂಪರ್ಕ, ಶೌಚಾಲಯ, ಕುಡಿಯುವ ನೀರು ಹಾಗೂ ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದು ಪ್ರವಾಸಿಗರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ. ಗುಂಡಿಮಯ…

News Desk

ಅಂಕೋಲಾದಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಆತಂಕ: ಸಮುದ್ರ ತೀರದಲ್ಲೇ ಗಾಂಜಾ ಏರಿಸಿಕೊಂಡಿದ್ದ ವ್ಯಕ್ತಿ ಅಂದರ್..!!

ಅಂಕೋಲಾ: ತಾಲೂಕಿನ ಬೊಬ್ರುವಾಡದ ನದಿಭಾಗ ಸಮುದ್ರ ತೀರದಲ್ಲಿ ಸಾರ್ವಜನಿಕವಾಗಿ ಗಾಂಜಾ (ಮಾದಕ ವಸ್ತು) ಸೇವನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯಲಾದ ಆರೋಪಿಯನ್ನು ಶಿರಗುಂಜಿ ಗ್ರಾಮದ ಬಲಿಗದ್ದೆ ನಿವಾಸಿ, 48 ವರ್ಷದ ರೈತ ಯಂಕು ರೋಮು ಗೌಡ ಎಂದು ಗುರುತಿಸಲಾಗಿದೆ. ಶನಿವಾರ (ಅ. 10) ಸಂಜೆ ಸುಮಾರು 6:50ರ ಹೊತ್ತಿಗೆ ಅಂಕೋಲಾ ಪೊಲೀಸ್ ಠಾಣೆಯ ಉಪ-ನಿರೀಕ್ಷಕ (ಪಿಎಸ್‌ಐ) ಗುರುನಾಥ ಹಾದಿಮನಿ ಅವರು ಗಸ್ತಿನಲ್ಲಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನದಿಭಾಗ ಕಡಲತೀರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಯಂಕು ಗೌಡ ಮಾದಕ…

News Desk

ಮೃತ್ಯುಕೂಪವಾದ ಕಾರವಾರ-ಇಳಕಲ್ ರಾಜ್ಯ ರಸ್ತೆ: ಶೀಘ್ರ ದುರಸ್ತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ..

ಕಾರವಾರ: ಕಾರವಾರ-ಇಳಕಲ್ ಕೈಗಾ ಸಂಪರ್ಕ ಕಲ್ಪಿಸುವ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್ ವರೆಗಿನ ರಸ್ತೆಯ ಒಂದು ಬದಿ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರವಾರ ನಗರ ಘಟಕದ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ವಾಟ್ಸಪ್ ಹಾಗೂ ಇ-ಮೇಲ್ ಮೂಲಕ ಸೋಮವಾರ ಮನವಿ ಸಲ್ಲಿಸಿದ್ದಾರೆ. ಕರವೇ ಜಿಲ್ಲಾ ಹಾಗೂ ತಾಲೂಕು ಘಟಕದ ಮಾರ್ಗದರ್ಶನದಲ್ಲಿ ಈ ಮನವಿ ಸಲ್ಲಿಕೆಯಾಗಿದೆ. ಕಳಪೆ ಕಾಮಗಾರಿ…

News Desk

ನಿವೃತ್ತ ನೌಕರರು, ಪ್ರಶಸ್ತಿ ಪುರಸ್ಕೃತ ಶಿಕ್ಷಕರು,ಕ್ರೀಡಾ ಸಾಧಕರಿಗೆ,ವಿದ್ಯಾರ್ಥಿಗಳಿಗೆ ಸನ್ಮಾನ..

ಹೊನ್ನಾವರ : ದಿನಾಂಕ 2/10.2026ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ನಿವೃತ್ತ ಸರ್ಕಾರಿ ನೌಕರರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಮುಕ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊನ್ನಾವರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ನವೀನ್ ಕೋಪರ್ಡೆ, ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ತಹಶೀಲ್ದಾರ್, ಆರ್‌ಟಿಒ, ಕೃಷಿ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಶಿಕ್ಷಕರ ಸಂಘದ…

News Desk

ಕಡವಾಡ ಸ್ಮಶಾನದ ದುರವಸ್ಥೆ: ಅಧಿಕಾರಿಗಳ ಜಡತ್ವದ ವಿರುದ್ಧ ಕರವೇ ಅಧ್ಯಕ್ಷ ರಾಜಾ ನಾಯ್ಕ ಆಕ್ರೋಶ..

ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದ ಸಾರ್ವಜನಿಕ ಸ್ಮಶಾನವು ಸಂಪೂರ್ಣವಾಗಿ ದುರವಸ್ಥೆಗೆ ತಲುಪಿದ್ದು, ಮೃತರ ಅಂತಿಮ ಸಂಸ್ಕಾರ ನೆರವೇರಿಸಲು ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯಕ್ಕೆ ಈ ಸ್ಮಶಾನವೇ ಜೀವಂತ ಸಾಕ್ಷಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಕಡವಾಡ ಸ್ಮಶಾನದಲ್ಲಿ ಶವ ದಹನ ಮಾಡುವ ಜಾಗದ ಕಬ್ಬಿಣದ ಕಂಬಗಳು ಹಾಗೂ ಸಲಾಕೆಗಳು ಸಂಪೂರ್ಣವಾಗಿ ತುಕ್ಕು ಹಿಡಿದು…

News Desk

ಅಂಕೋಲಾ: ಟೋಲ್ ವಸೂಲಾತಿಯಲ್ಲಿ ಇರೋ ಆತುರ, ಹೈವೇ ಕೆಲಸ ಮುಗಿಸುವಲ್ಲಿ ಇಲ್ಲ ; ಈ ಅಡ್ಡಾದಿಡ್ಡಿ ರಸ್ತೆಗೆ ಇನ್ನೆಷ್ಟು ಜೀವ ಬಲಿ ಬೇಕು?

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ಅಕೌಂಟ್‌ನಿಂದ ಫಾಸ್ಟ್‌ಟ್ಯಾಗ್ ಮೂಲಕ ದುಡ್ಡು ಕತ್ತರಿಸಿಕೊಳ್ಳುವ ವ್ಯವಸ್ಥೆ ಎಷ್ಟು "ಸೂಪರ್ ಫಾಸ್ಟ್" ಆಗಿ ಕೆಲಸ ಮಾಡುತ್ತಿದೆಯೋ, ಅದೇ ಹೆದ್ದಾರಿಯ ಕಾಮಗಾರಿ ಮಾತ್ರ ಅಷ್ಟೇ "ಸೂಪರ್ ಸ್ಲೋ" ಆಗಿ ಸಾಗುತ್ತಿದೆ! ದಶಕ ಕಳೆದರೂ ಮುಗಿಯದ ಅಂಕೋಲಾ ವ್ಯಾಪ್ತಿಯ ಚತುಷ್ಪಥ ಹೆದ್ದಾರಿ ಕಾಮಗಾರಿ ಹಾಗೂ ಹೆಜ್ಜೆಗೊಂದಿರುವ ಅವೈಜ್ಞಾನಿಕ ಡೈವರ್ಷನ್‌ಗಳು ವಾಹನ ಸವಾರರ ಪಾಲಿಗೆ ಅಕ್ಷರಶಃ ಮರಣಶಾಸನವಾಗಿ ಪರಿಣಮಿಸಿವೆ. ಫಾಸ್ಟ್‌ಟ್ಯಾಗ್‌ಗೆ ಇರುವ ಬೆಲೆ ಪ್ರಾಣಕ್ಕಿಲ್ಲ! ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರ ಖಾತೆಯಲ್ಲಿ ಒಂದು ರೂಪಾಯಿ ಕಡಿಮೆಯಿದ್ದರೂ ಗೇಟ್ ಮೇಲೇಳುವುದಿಲ್ಲ. ಈ ವಿಷಯಗಳಲ್ಲಿ…

News Desk

ಅಂಕೋಲಾದ ಬೆಳಸೆ (ಹಂದಿಗದ್ದೆ) ಬಳಿ ಕೆಎಸ್‌ಆರ್‌ಟಿಸಿ ಬಸ್-ಟ್ರಕ್ ಭೀಕರ ಡಿಕ್ಕಿ: ಸ್ಥಳದಲ್ಲೇ ಕಂದಮ್ಮ ಸಾವು, ಹಲವರಿಗೆ ಗಾಯ..

ಅಂಕೋಲಾ: ತಾಲೂಕಿನ ಬೆಳಸೆ (ಹಂದಿಗದ್ದೆ) ಸಮೀಪದ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಢಿಕ್ಕಿಯಲ್ಲಿ ಚಿಕ್ಕ ಗಂಡು ಮಗುವೊಂದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕುಮಟಾ ಕಡೆಯಿಂದ ಅಂಕೋಲಾ ಮಾರ್ಗವಾಗಿ ಬರುತ್ತಿದ್ದ ಕೆಎಸ್‌‌ಆರ್‌ಟಿಸಿ ಬಸ್ ಹಾಗೂ ಎದುರುಗಡೆಯಿಂದ ಟ್ರಕ್ ನಡುವೆ ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ದುರಂತದ ತೀವ್ರತೆಗೆ ಹಸುಗೂಸೊಂದು ಸ್ಥಳದಲ್ಲೇ…

News Desk

ಮದುವೆ ಸಂಭ್ರಮದಲ್ಲಿದ್ದ ಪ್ರೇಮಿಗಳಿಗೆ ಬಿಗ್ ಶಾಕ್: ಮೊಬೈಲ್‌ನಲ್ಲಿದ್ದ ‘ಖಾಸಗಿ ವಿಡಿಯೋ’ ಕದ್ದ ಖದೀಮ; ಪ್ರಕರಣ ದಾಖಲು..!!

ಮದುವೆಗೆ ಸಿದ್ಧತೆಯಲ್ಲಿದ್ದ ಪ್ರೇಮಿಗಳಿಬ್ಬರ ಮೊಬೈಲ್‌ನಲ್ಲಿದ್ದ ಅತ್ಯಂತ ಖಾಸಗಿ ಹಾಗೂ ವೈಯಕ್ತಿಕ ವಿಡಿಯೋಗಳನ್ನು ಅವರ ಅರಿವಿಲ್ಲದಂತೆ ಕಳವು ಮಾಡಿ, ಅಕ್ರಮವಾಗಿ ಬೇರೊಂದು ಮೊಬೈಲ್‌ಗೆ ವರ್ಗಾಯಿಸಿ ಕೊಳ್ಳಲಾಗಿದೆ ಎನ್ನಲಾದ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹದ ಹೊಸ್ತಿಲಲ್ಲಿದ್ದ ಜೋಡಿಯ ಖಾಸಗಿತನಕ್ಕೆ ಕನ್ನ ಹಾಕಿರುವ ಈ ಗಂಭೀರ ಆರೋಪದ ಕುರಿತು ಇದೀಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಿ(ಪೂ* ನಾಯ್ಕ) ಹಾಗೂ ಯುವಕ (ನಾ*ರಾಜ ಪ್ರ* ನಾಯ್ಕ) ಅವರ ವಿವಾಹ ಇತ್ತೀಚೆಗಷ್ಟೇ ನಿಶ್ಚಯವಾಗಿತ್ತು. ಈ ಜೋಡಿಯು…

News Desk
- Sponsored -
Ad imageAd image
Weather
27°C
Karnataka
overcast clouds
27° _ 27°
66%
1 km/h
Sun
27 °C
Mon
25 °C
Tue
30 °C
Wed
29 °C
Thu
29 °C

Follow US

Most Read

Discover Categories

ಪಡಿತರ ಚೀಟಿ ಇ-ಕೆವೈಸಿ ಮರು-ನವೀಕರಣಕ್ಕೆ ಅಕ್ಟೋಬರ್ 20 ಅಂತಿಮ ಗಡುವು..

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮರು-ನವೀಕರಿಸಿಕೊಳ್ಳುವಂತೆ ಆಹಾರ, ನಾಗರಿಕ…

News Desk

ಅಂಕೋಲಾ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ ಕುಮಾರ್ ನಾಯಕ್ ನಿಧನ..

ಅಂಕೋಲಾ: ಇಲ್ಲಿನ ಪುರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ ಕುಮಾರ್ ನಾಯಕ್ ಅವರು…

News Desk

ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಗೃಹ ಸಚಿವರೊಂದಿಗೆ ಚರ್ಚೆ: ಅಭಯ ನೀಡಿದ ಸಿಎಂ. ಡಿ.ಕೆ. ಶಿವಕುಮಾರ್..

ಬೆಂಗಳೂರು: ಕೋಣನಕುಂಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ…

News Desk

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸೆ. 21ರಿಂದ ಪಿಡಿಒಗಳಿಂದ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ..

ಕಾರವಾರ : ತಮ್ಮ ದೀರ್ಘಕಾಲದ ಮತ್ತು ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್…

News Desk

ಅಂಕೋಲಾದ ಅಚವೆ ಗ್ರಾಮದಲ್ಲಿ ಮಗಳ ಮನೆಯಿಂದ ಹೊರಟಿದ್ದ ವೃದ್ಧ ನಾಪತ್ತೆ..!!

ಅಂಕೋಲಾ: ತಾಲೂಕಿನ ಅಚವೆ ಗ್ರಾಮದ ಹೊಸಕೇರಿಯಲ್ಲಿ ವೃದ್ಧರೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಕುರಿತು…

News Desk

ಅಂಕೋಲಾ: ಹೈವೇಯಲ್ಲಿ ಡೀಸೆಲ್ ಆಟ ಬಯಲು: ಹೆದ್ದಾರಿ ಪಕ್ಕ ಅಪಾಯಕಾರಿ ಸಂಗ್ರಹ, ಪ್ರಕರಣ ದಾಖಲು..

ಅಂಕೋಲಾ ತಾಲೂಕಿನ ರಾಮನಗುಳಿ ದುಗ್ಗನಬೈಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಡೀಸೆಲ್ ಸಂಗ್ರಹಿಸುತ್ತಿದ್ದ ಅಡ್ಡೆಯ ಮೇಲೆ…

News Desk

ರಸ್ತೆ ಬದಿಯ ಗೋವುಗಳೇ ಟಾರ್ಗೆಟ್: ಮಧ್ಯರಾತ್ರಿ ಎರ್ಟಿಗಾ ಕಾರಿನಲ್ಲಿ ಬಂದು ದನ ಕದ್ದ ಖದೀಮನ ಹೆಡೆಮುರಿ ಕಟ್ಟಿದ ಕುಮಟಾ ಪೊಲೀಸರು..

ಕುಮಟಾ ಪಟ್ಟಣದಲ್ಲಿ ರಸ್ತೆ ಬದಿ ಮಲಗಿದ್ದ ದನವನ್ನು ಕಾರಿನಲ್ಲಿ ಬಂದು ಕದ್ದೊಯ್ದಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕುಮಟಾ…

News Desk