ಕಾರವಾರದ ಪ್ರತಿಷ್ಠಿತ ರೆವಿಂಟೊ ಲೈಫ್ ಸೈನ್ಸಸ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಶಿರವಾಡದಲ್ಲಿ ಮೊಳಗಿದ ದೇಶಭಕ್ತಿ..

News Desk
1 Min Read

ಕಾರವಾರ ತಾಲ್ಲೂಕಿನ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಆಯುರ್ವೇದ ಔಷಧಿ ತಯಾರಿಕಾ ಕಂಪೆನಿಯಾದ ರೆವಿಂಟೊ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ  80 ನೇ ಸ್ವಾತಂತ್ರ್ಯ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಕಂಪೆನಿಯ  ಬಿಜಿನೆಸ್ ಡೆವಲಪ್ಮೆಂಟ್  ಅಧಿಕಾರಿ ಸುಮಲತಾ ಶೇಟಿಗಾರ ಅವರು ಧ್ವಜಾರೋಹಣವನ್ನು ನೆರವೇರಿಸಿ ಎಲ್ಲರಿಗೂ  ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿ ಈ ದಿನದ  ಮಹತ್ವ  ಬಗ್ಗೆ  ಮಾತನಾಡಿದರು. 

ನಂತರ ಈ ಸಂಸ್ಥೆಯ  ಮುಖ್ಯ ಮ್ಯಾನೇಜಿಂಗ್  ಡೈರೆಕ್ಟರ್  ಡಾ: ಜಿತೇಂದ್ರ ಶೆಟ್ಟಿ ಅವರು ಶುಭಾಶಯಗಳು ಕೋರಿ    ಮಾತನಾಡಿದರು.  ಡೈರೆಕ್ಟರ್ ಪ್ರಖ್ಯಾತ ಶೆಟ್ಟಿ  ಅವರು  80 ನೇ  ಸುದೀರ್ಘ ಸ್ವಾತಂತ್ರ್ಯ ದಿನಾಚರಣೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. 

   

ಪ್ರದೀಪ ಗುನಗಿ ಅವರು ಉತ್ತಮ ಕವಾಯತು ನಡೆಸಿ ಕೊಡುವ ಜೊತೆಗೆ ಸುಮಧುರ ಕಂಠದಿಂದ  ದೇಶಭಕ್ತಿ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಕಂಪನಿಯ D.G.M  ಮುಖ್ಯ ಮ್ಯಾನೇಜರ್ ಪವನ ಶೆಟ್ಟಿ   ಪ್ರೊಡಕ್ಷನ್ ಹೆಡ್ ಆಫೀಸರ್ ಕಿರಣ ಗೌಡ  ಲ್ಯಾಬ್ ಹೆಡ್ ಆಫೀಸರ್ ವೈಭವ ನಾಯ್ಕ  ಶಶಿಕುಮಾರ   ಪರ್ಚೇಸ್ ಮ್ಯಾನೇಜರ್ ಪ್ರದೀಪ ಗುನಗಿ  ಅಕೌಂಟ್ ಮ್ಯಾನೇಜರ್ ಸಾಯಿ ಪ್ರಸಾದಹಾಗೂ ಪ್ರೀತಿಶ ಬಾಂದೇಕರ  ಅನಂತ ನಾಯ್ಕ  ಸತೀಶ ಆಚಾರಿ  ಶುಭಂ ನಾಯ್ಕ ರೂಪೇಶ ನಾಯ್ಕ   ಹಾಗೂ ಕಾರ್ಮಿಕರು ಸಿಬ್ಬಂದಿ ವರ್ಗದವರು ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This Article