ನಿವೃತ್ತಿಯಾದ ಡಾ. ಸದಾನಂದ ಪೈರನ್ನು ಗೌರವಿಸಿದ ಕರ್ನಾಟಕ ರಣಧೀರರ ವೇದಿಕೆ ಕುಮಟಾ ಘಟಕ – ಮರೆಯದ ಚಾರಿತ್ರಿಕ ವೈದ್ಯರು ಸದಾನಂದ ಪೈ : ಮಂಜುನಾಥ ಗಾಂವ್ಕರ್ ಬರ್ಗಿ..

News Desk
1 Min Read

ಕುಮಟಾ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಜನಪ್ರಿಯ ವೈದ್ಯಾಧಿಕಾರಿಗಳಾದ ಡಾ. ಸದಾನಂದ ಪೈರವರನ್ನು ವಯೋ ನಿವೃತ್ತಿಗೊಂಡ ಪ್ರಯುಕ್ತ ಆಯೋಜಿಸಿದ ಬೀಳ್ಕೊಡುಗೆಯ ಸಮಾರಂಭದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದಿಂದ ಆಪ್ತವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರು, ಸದಾನಂದ ಪೈರವರು ತಮ್ಮ ಸಜ್ಜನಿಕೆಯ ಜನಮುಖಿ ಸೇವೆಯ ಮೂಲಕ ಕುಮಟಾ ಮರೆಯಲಾಗದ ಅಪರೂಪದ ವೈದ್ಯರಾಗಿ ಚರಿತ್ರೆಯನ್ನು ಸಲ್ಲಿಸಿರುವ ಕುರಿತು ಅವರನ್ನು ಅಭಿನಂದಿಸಿ, ಆಲೇಖ ಪತ್ರವನ್ನು ಸಮರ್ಪಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ವಹಿಸಿದ್ದರು.

ಕರ್ನಾಟಕ ರಣಧೀರ ವೇದಿಕೆಯ ತಾಲೂಕಾಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರು, ಸಂತ ಸೇವಾಲಾಲ ಸಂಘದ ಅಧ್ಯಕ್ಷರಾದ ಶಿವಚಂದ್ರ, ಡಾ. ಲಕ್ಷ್ಮೀಶ ನಾಯ್ಕ, ಡಾಕ್ಟರ್ ನಾಗರತ್ನಾ, ಡಾ. ಸತೀಶ, ಡಾ.ಪ್ರಸನ್ನ ನಾಯ್ಕ, ಡಾ. ಶಿವಾನಂದ ಹೆಗಡೆ ಭಾರತಿ ಬೆಲ್ಲದ, ಉಷಾ ಸದಾನಂದ ಹಾಗೂ ಕಿರಣಸಿಂಹ ಚಿತ್ರದುರ್ಗ ಮೊದಲಾದವರಿದ್ದರು.

Share This Article