ವಿಕಾಸ ವಾಹಿನಿ “ಬಿಗ್ ಇಂಪ್ಯಾಕ್ಟ್” : ಅಂಕೋಲಾ ಹೆದ್ದಾರಿ ಅಂಚಿನ ಕಸದ ಸಮಸ್ಯೆಗೆ 24 ಗಂಟೆಯೊಳಗೆ ಪರಿಹಾರ ಕ್ರಮ ಆರಂಭ..

News Desk
1 Min Read

ಅಂಕೋಲಾದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಂಚಿನಲ್ಲಿ ಕಸ ಸಂಗ್ರಹವಾಗಿದ್ದು ಹಾಗೂ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ವಿಕಾಸ ವಾಹಿನಿ ವರದಿ ಮಾಡಿದ್ದಕ್ಕೆ ಸ್ಪಂದನೆ ವ್ಯಕ್ತವಾಗಿದೆ.

ವರದಿ ಪ್ರಸಾರವಾದ ಕೇವಲ 24 ಗಂಟೆಗಳೊಳಗೆ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಸ್ಥಳೀಯ ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಕಂಪನಿ ಸುರಕ್ಷತಾ ಮುಚ್ಚಳ ಇಲ್ಲದೆ ಬಿಟ್ಟಿದ್ದ ಕಾಂಕ್ರೀಟ್ ಚರಂಡಿಗಳು ಹಾಗೂ ಅಲ್ಲಲ್ಲಿ ಜಮೆಯಾಗಿದ್ದ ಪ್ಲಾಸ್ಟಿಕ್ ಮತ್ತು ಇತರ ಘನತ್ಯಾಜ್ಯಗಳ ಬಗ್ಗೆ ವಿಕಾಸ ವಾಹಿನಿ ವರದಿ ಮಾಡಿತ್ತು. ಈ ವರದಿಯ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟಿಕೊಂಡಿದ್ದು, ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವರದಿ ಪ್ರಸಾರವಾದ ನಂತರ ಚರಂಡಿಯಲ್ಲಿ ಜಮೆಯಾಗಿದ್ದ ಕಸವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಇದಲ್ಲದೆ, ರಸ್ತೆ ಬದಿಯಲ್ಲಿ ಮೇಲಕ್ಕೆ ಎದ್ದು ಕಾಣುತ್ತಿದ್ದ ಅಪಾಯಕಾರಿ ಕಬ್ಬಿಣದ ಸರಳುಗಳನ್ನು ಕೆಳಕ್ಕೆ ಬಾಗಿಸಿ ಇಟ್ಟಿದ್ದಾರೆ. ಇದರ ಜೊತೆಗೆ ರಸ್ತೆ ಬದಿಯಲ್ಲಿರುವ ಹೊಂಡವನ್ನು ಸರಿಪಡಿಸಬೇಕಿದೆ.

ಒಟ್ಟಿನಲ್ಲಿ, ಸಾರ್ವಜನಿಕ ಸಮಸ್ಯೆಯನ್ನು ಬೆಳಕಿಗೆ ತಂದ ವಿಕಾಸ ವಾಹಿನಿಯ ವರದಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, “ಬಿಗ್ ಇಂಪ್ಯಾಕ್ಟ್” ಮೂಲಕ ಸಮಸ್ಯೆಗೆ ಪರಿಹಾರ ಕಂಡುಬರುವ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ.

Share This Article
Leave a Comment