ಹೊನ್ನಾವರ : ದಿನಾಂಕ 2/10.2026ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ನಿವೃತ್ತ ಸರ್ಕಾರಿ ನೌಕರರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಮುಕ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊನ್ನಾವರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ನವೀನ್ ಕೋಪರ್ಡೆ, ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ತಹಶೀಲ್ದಾರ್, ಆರ್‌ಟಿಒ, ಕೃಷಿ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೆಮಭಿವೃದಡಿ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುದೀಶ್ ನಾಯ್ಕ, ಸಹಾಯಕ ಕೃಷಿ ಅಧಿಕಾರಿ ಪುನೀತಾ ಎಸ್ ಬಿ ರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಶುಭ ಹಾರೈಸಿದ ನ್ಯಾಯಾಧೀಶ ನವೀನ್ ಕೋಪರ್ಡೆ ಅವರು, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಶುಭ ಹಾರೈಸಿದರು.ಪ್ರೇರಣ ನುಡಿ ಹೇಳಲು ಬಂದ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಅವರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳು, ಸಾಧನೆಗೆ ಅಗತ್ಯವಾದ ಪರಿಶ್ರಮ, ಶಿಸ್ತು ಮತ್ತು ಗುರಿಯ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.

ಮಾನ್ಯ ತಹಸೀಲ್ದಾರ್ ರವರು ಮಾತನಾಡಿ
ನೌಕರರ ಸಂಘವು ಉತ್ತಮ ವಾಗಿ ಕೆಲಸ ಮಾಡುತ್ತಿದ್ದು, ನಾನು ಕೂಡ ಈ ಹಿಂದೆ ಸಂಘದ ಅಧ್ಯಕ್ಷ ಆಗಿ ಕೆಲಸ ಮಾಡಿದ್ದೂ ಹೊನ್ನಾವರ ದ ಸಂಘ ಜಿಲ್ಲೆಯಲ್ಲಿ ಯೇ ಉತ್ತಮ ವಾಗಿ ಕೆಲಸ ಮಾಡುತ್ತ ಇದೆ, ಹೊನ್ನಾವರ ದಲ್ಲಿ ಎಲ್ಲವೂ ಇದೆ ಉತ್ತಮ ತಾಲೂಕ ಇದು ಎಂದು ತಿಳಿಸುತ್ತ ವಿದ್ಯಾರ್ಥಿಗಳಿಗೆ ಹಿತ ನೀಡಿ ಹೇಳಿದರು, ಸಂಘಟನೆ ಉತ್ತಮ ಕೆಲಸ ಮಾಡಿದೆ ಇದೆ ರೀತಿಯ ಕೆಲಸ ಮುಂದುವರಿಯಲಿ ಎಂದು ತಿಳಿಸಿ ಎಲರಿಗೂ ಧನ್ಯವಾದಗಳು ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಅವರು ಸಂಘ ನಡೆದು ಬಂದ ಹಾದಿ, ತಾಲೂಕಿನಲ್ಲಿ ಸಂಘ ಕೈಗೊಂಡಿರುವ ವಿವಿಧ ಉತ್ತಮ ಕಾರ್ಯಗಳು ಹಾಗೂ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಕಾರ್ಯಕ್ರಮಕ್ಕೆ ಸಹಕರಿಸಿದ ಮತ್ತು ಕಾರ್ಯಕ್ರಮ ಕ್ಕೆ ಪ್ರಯೋಜಾಕತ್ವ ನೀಡಿದ pld ಬ್ಯಾಂಕ್ ಸೆಂಟ್ ಮಿಲಗ್ರಿಸ್ ಬ್ಯಾಂಕ್ ಕೆನರಾ ಬ್ಯಾಂಕ್ ಆನಂದ, ಇಂದನ, om ಪ್ಲೆಕ್ಸ್ ಇವರಿಗೆ ಧನ್ಯವಾದ ಹೇಳಿದರು ಸಂಘಕ್ಕೆ ಕಟ್ಟದ ಇಲ್ಲದೆ ಇರುವ ಬಗ್ಗೆ ಸಭೆಯಲ್ಲಿ ಮಾತನಾಡಿದರು,ಹಾಗೂ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮಾತನಾಡಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂಘದ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್ ಮಾತನಾಡಿ,
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಅವರ ಕ್ರಿಯಾಶೀಲತೆ ಹಾಗೂ ನೌಕರರ ಹಿತಾಸಕ್ತಿಯ ಮೇಲಿನ ಕಾಳಜಿಯನ್ನು ಶ್ಲಾಘಿಸಿದರು. ನಿವೃತ್ತ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕ್ರೀಡಾ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿರುವುದು ವಿಶೇಷವಾಗಿದ್ದು, ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಸಾಧಕ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವು ನೌಕರರ ಸಂಘದ ಕ್ರಿಯಾಶೀಲತೆ ಹಾಗೂ ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಯಿತು. ಕಾರ್ಯಕ್ರಮ ದಲ್ಲಿ ಭಾಗವದವರಿಗೆಸಂಘದ ನಿರ್ದೇಶಕರು ಪ್ರಾಥಮಿಕ ಶಾಲ್ ಶಿಕ್ಷಕರ ಸಂಘದ ಅಧ್ಯಕ್ಷರು ಸುಧೀಸ್ ನಾಯ್ಕ್ ಸ್ವಾಗತ ಮಾಡಿದರು, ಪ್ರಸಾವಿಕ ನುಡಿ ಯನ್ನ ಸಂಘದ ಖಜಾಂಜಿ ಯದ್ ನಾಗಪ್ಪ ಕೊಟ್ಟೂರು ಮಾಡಿದರು,ವಡಾನಾರ್ಪಣೆ ಸಂಘದ ಜಂಟಿ ಕಾರ್ಯದರ್ಶಿ ಆದ ಕಿಶೋರ್ ನಾಯ್ಕ್ ಅವರು ಮಾಡಿದರು ಕಾರ್ಯಕ್ರಮ ನಿರೂಪಣೆ ಯನ್ನ ಸಂಘದ ಜಂಟಿ ಕಾರ್ಯದರ್ಶಿ ಆದ ಶ್ರೀ ಪ್ರಕಾಶ್ ನಾಯ್ಕ್ ಮಾಡಿದರು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಗಣಪಯ್ಯ ಗೌಡ ನಡೆಸಿ ಕೊಟ್ಟರು.

sslc ಮಕ್ಕಳ ಪ್ರತಿಬ್ ಪುರಸ್ಕಾರ ಕಲ್ಪನಾ ಹೆಗಡೆ ನಡೆಸಿ ಕೊಟ್ಟರೆ, puc ವಿದ್ಯಾರ್ಥಿಗಳಿಗ ಉದಯ ನಾಯ್ಕ್ ನಡೆಸಿ ಕೊಟ್ಟರು, ಸಂಘದ ರಾಜ್ಯ ಪರಿಷತ್ ಸದಸ್ಯರಾಧ ರಘುನಾಥ ನಾಯ್ಕ್ pಕಾರ್ಯಕ್ರಮ ದ ಉಸ್ತುವಾರಿ ವಹಿಸಿ ಕೊಂಡು ನಡೆಸಿ ಕೊಟ್ಟದ್ರು, ಸಂಘದ ಎಲ್ಲ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದು ತಮಗೆ ವಹಿಸಿ ದ ಎಲ್ಲ ಕೆಲಸ ಅಚ್ಚುಕಟ್ಟಾಗಿ ನಡೆಸಿ ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಿದ್ರು ವೇದಿಕೆ ಯಲ್ಲಿ ಕ್ರಷಿ ಅಧಿಕಾರಿ ಪುನೀತ್ sb, Rto ರವೀಂದ್ರ ಕೆ ಎಸ್,ಬಿಸಿಎಂ ಅಧಿಕಾರಿ, kk ಗಣಪತಿ, ಸಂಘದ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.


