ಅಂಕೋಲಾ : ವೈ. ಆರ್ ಸದಾಶಿವ ರೆಡ್ಡಿಯ ಮೇಲೆ ಹಲ್ಲೆ ತಾಲೂಕ ವಕೀಲರ ಸಂಘ ಖಂಡನೆ, ವಕೀಲರ ಸಂರಕ್ಷಣಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಆಗ್ರಹ..

News Desk
2 Min Read

ಅಂಕೋಲಾ :ಭಾರತೀಯ ವಕೀಲ ಪರಿಷತ್ತಿನ ಸದಸ್ಯರು. ಪದಾಂಕಿತ ಹಿರಿಯ ವಕೀಲರಾದ ವೈ ಆರ್ ಸದಾಶಿವ ರೆಡ್ಡಿ ಅವರ ಕಚೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ. ಸೋಮವಾರ ಅಂಕೋಲಾ ವಕೀಲರ ಸಂಘದ ಎಲ್ಲಾ ಸದಸ್ಯರು ನ್ಯಾಯಾಲಯದ ಕಾರ್ಯಕ್ರಮದಿಂದ ದೂರ ಉಳಿಯುವುದರೊಂದಿಗೆ ನಂತರ ಅಂಕೋಲಾದ ಪ್ರಮುಖ ರಸ್ತೆಯಿಂದ ಕಾಲ್ನಡಿಗೆ ಮೂಲಕ ರಸ್ತೆ ಯುದ್ಧಕ್ಕೂ ಘೋಷಣೆಯನ್ನು ಕೂಗಿ ಅಂಕೋಲಾ ತಹಶೀಲ್ದಾರರ ಕಚೇರಿಗೆ ಬಂದು ವಕೀಲ ಸಂಘದ ಪ್ರಮುಖರು ಮೊದಲು ವಕೀಲರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದು ನಂತರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಿದರು . ತಹಶೀಲ್ದಾರರ ಪರವಾಗಿ ಗಿರೀಶ ಜಾಂಬ್ಳೆಕರ್ ಮನವಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗಾನಂದ ಬಂಟ ವಕೀಲರು ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಇವರ ಮೇಲಿನ ಹಲ್ಲೆಯನ್ನು ಅಂಕೋಲಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ವಕೀಲರ ರಕ್ಷಣೆಯನ್ನು ನೀಡಲು ಕಾಯ್ದೆ ಪಾಸಾಗಿದ್ದು. ಆದರೂ ಸಹ ವಕೀಲರ ಮೇಲೆ ಹಲ್ಲ್ಲೆಯಾಗುವುದನ್ನು ತಡಿಲಿಕ್ಕೆ ಸಾಧ್ಯವಾಗುತ್ತಿಲ್ಲ . ಮಾರಣಾಂತಿಕ ಹಲ್ಲೆ ಮಾಡುವ ಅಮಾನುಷ ಕೃತ್ಯಗಳನ್ನು ಪದೇ ಪದೇ ಮಾಡುತ್ತಿದ್ದು, ವಿಶೇಷವಾಗಿ ನಮ್ಮ ವಕೀಲರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸುತ್ತೇವೆ. ವೈ.ಆರ್ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು..

ಹಿರಿಯ ವಕೀಲ ಉಮೇಶ್ ನಾಯ್ಕರು ಮಾತನಾಡಿ ಕರ್ನಾಟಕ ಸರ್ಕಾರ ವಕೀಲರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ವಕೀಲ ರಕ್ಷಣೆ ಗೋಸ್ಕರ ಮಾಡಿರುವ ಕಾಯ್ದೆ ಇದ್ದರು ಸರಿಯಾಗಿ ಜಾರಿಗೆ ಬರದೆ ವಕೀಲರಿಗೆ ರಕ್ಷಣೆ ಇಲ್ಲದಾಗಿದೆ.. ಕೂಡಲೇ ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂದಿಸಬೇಕು ಎಂದರು.

ವಕೀಲ ಬಿ. ಡಿ.ನಾಯ್ಕ್ ಮಾತನಾಡಿ ವೈ.ಆರ್. ಸದಾಶಿವ ರೆಡ್ಡಿಯವರ ಮೇಲೆ ಆಗಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.. ವಕೀಲ ರಕ್ಷಣೆಗೆ ಇರುವ ಕಾಯ್ದೆ ಜಾರಿಗೆ ಇದ್ದರೂ ಅದು ಇನ್ನು ಪೂರ್ತಿ ಆಗದೆ ಇರುವುದರಿಂದ ವಕೀಲರ ಮೇಲೆ ಇನ್ನು ಹಲ್ಲೆಯಾಗುತ್ತಿದೆ. ಈ ಕಾಯ್ದೆ ಶೀಘ್ರವಾಗಿ ಜಾರಿಗೆ ಬರುವಂತೆ ಹಾಗೂ ವೈ. ಆರ್ ಸದಾಶಿವರೆಡ್ಡಿ ಹಿರಿಯ ವಕೀಲರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದರು..

ವಕೀಲರ ಸಂಘದ ಅಧ್ಯಕ್ಷ ದೀಕ್ಷಿತ ನಾಯಕ ಮಾತನಾಡಿ ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವುದು. ನಾವು ಪ್ರತಿಭಟನೆ ಮಾಡುತ್ತಿರುವುದಾಗಿದೆ, ಆದರೆ ನಮಗೆ ರಕ್ಷಣೆ ಇಲ್ಲ . ಈ ಕೂಡಲೇ ಸರ್ಕಾರ ವಕೀಲರ ಸುರಕ್ಷತೆ ಮತ್ತು ರಕ್ಷಣೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು….

ವಕೀಲರ ಸಂಘದ ಹಿರಿಯ ಸದಸ್ಯ ವಿ ಎಸ್ ನಾಯಕ . ಹಾಗೂ ಸಂತೋಷ್ ನಾಯ್ಕ್. ವೈ ಆರ್ ಸದಾಶಿವ ರೆಡ್ಡಿ ಇವರ ಮೇಲೆ ಆದ ಹಲ್ಲೆಯನ್ನು ಖಂಡಿಸಿ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಅಂಕೋಲಾ ವಕೀಲರ ಸಂಘದ ಆರ್ ಟಿ ಗೌಡ, ನಿತ್ಯಾನಂದ ಕವರಿ ,ವಿನೋದ ಶಾನಭಾಗ, ಸಂತೋಷ ನಾಯ್ಕ ಬೆಲೆಕೇರಿ, ಸುರೇಶ ಬಾನಾವಳಿಕರ್, ಗುರುನಾಯ್ಕ, ಗಜಾನನಾ ನಾಯ್ಕ, ಮಮತಾ ಕೆರೆಮನೆ, ಮೋನಿಷ, ಬಿಟಿ ನಾಯಕ, ರಾಜು ಹರಿಕಂತ್ರ, ಪ್ರಸನ್ನ .ತೇಜು ಬಂಟ್, ಪ್ರಕೃತಿ ನಾಯಕ, ದೇವಿ ಗೌಡ, ಪ್ರಸಾದ ನಾಯಕ ಮತ್ತು ಲೇಖನಾ ಬಾಡಕರ್ ಭಾಗವಹಿಸಿದ್ದರು.

Share This Article
Leave a Comment