ಶಿಥಿಲಾವಸ್ತೆ ಯಲ್ಲಿರುವ ಶಾಲೆಯ ಕಟ್ಟಡವನ್ನು ತೆರೆವುಗೊಳಿಸುವಂತೆ ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಗ್ರಹ..

News Desk
2 Min Read

ಅಂಕೋಲಾ ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೆಲೆಕೇರಿಯಲ್ಲಿ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ನೆಲೆಸಮ ಗೊಳಿಸುವ ಕುರಿತು 16/05/2022 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾದಿಂದ ಶಾಲೆಗೆ ಜ್ಞಾಪನವನ್ನು ಹೊರಡಿಸಿದ್ದು. ಅದರಂತೆ ಶಾಲೆಯವರು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ಅಡಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಕ್ಕೆ ಕಳಿಸಿಕೊಟ್ಟಿದ್ದು, ಮೂರು ವರ್ಷ ಕಳೆಯುತ್ತಾ ಬಂದರೂ ಕೂಡ ಸದರಿ ಕಟ್ಟಡವನ್ನು ನೆಲಸಮಗೊಳಿಸಿಲ್ಲ.

ಸಹಾಯಕ ಕಾರ್ಯನಿರ್ವಾಹಕರ ಅಭಿಯಂತರರ ವರದಿಯನ್ನು ಆಧರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾದಿಂದ ಹೊರಡಿಸಿದ್ದ ಜ್ಞಾಪನ ಪತ್ರ ದಲ್ಲಿ 2022 ರ ಮಳೆಗಾಲ ಪ್ರಾರಂಭವಾಗುವ ಮೊದಲು ತುರ್ತಾಗಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸ ಬೇಕಾದ ಸಂಬಂಧ 3 ದಿನಗಳ ಒಳಗಾಗಿ ಸಂಬಂಧಿಸಿದ ಮುಖ್ಯೋಧ್ಯಾಪಕರು ಸಲ್ಲಿಸಬೇಕಾದ ದಾಖಲೆಗಳ ಅಡಕಗಳ ಬಗ್ಗೆ ಪತ್ರದಲ್ಲಿ ಸೂಚಿಸಿದ್ದು. ಅಂದೇ ವರದಿಯನ್ನು ಸಲ್ಲಿಸಿದ ಶಾಲೆಯ ಮುಖ್ಯೋದ್ಯಾಪಕರು / ಎಸ್ ಡಿ ಎಮ್ ಸಿ ಅಧ್ಯಕ್ಷರ ಆಡಳಿತ ಮಂಡಳಿಯ ಒಳಗೊಂಡಂತೆ ಪ್ರಸ್ತಾವನೆ ಸಲ್ಲಿಸಿದ್ದು.

2022ನೇ ವರ್ಷ ಮುಗಿದು ಈಗಾಗಲೇ 2025ನೇ ವರ್ಷಕ್ಕೆ ಕಾಲಿಟ್ಟಿದ್ದು ಸದರಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಜ್ಞಾಪನ ಹೊರಡಿಸಿದಾದ ನಂತರ ಸಂಬಂಧಪಟ್ಟ ಶಾಲೆಯಿಂದ ವರದಿ ಪಡೆದುಕೊಂಡ ಮೇಲು ಯಾವುದೇ ಕ್ರಮವನ್ನು ಕೈಗೊಳ್ಳದ ಸಂಬಂಧಿಸಿದ ಅಧಿಕಾರಿಗಳ ಕಾರ್ಯಕ್ಷಮತೆ, ಕರ್ತವ್ಯ ಬದ್ಧತೆ ಯಾವ ಮಟ್ಟಿಗೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜ್ಞಾಪನ ಪತ್ರವೇ ಇದಕ್ಕೆ ಉತ್ತಮ ಸಾಕ್ಷಿಯಾಗಿದೆ.

ಕಟ್ಟಡ ಕುಸಿದರೆ ಶಾಲೆಯ ಮಕ್ಕಳ ಜೀವಕ್ಕೆ ಆಪತ್ತು :

2022 ರಲ್ಲಿ ನೆಲೆಸಮವಾಗಬೇಕಾದ ಶಿಥಿಲ ವಸ್ಥೆಯಲ್ಲಿರುವ ಕಟ್ಟಡ ಅಧಿಕಾರಿಗಳ ಕರ್ತವ್ಯ ಲೋಪದಿಂದ ಇನ್ನುವರೆಗೂ ನೆಲ ಸಮವಾಗದೆ ಯಾವ ಸಂದರ್ಭದಲ್ಲಿಯೂ ಬಿಳುವ ಹಂತದಲ್ಲಿದೆ. ಶಾಲೆ ಮಕ್ಕಳು ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡದ ಸುತ್ತಮುತ್ತ ಆಟವಾಡಲು ತೆರಳುತ್ತಾರೆ. ನಾಳೆ ಸದರಿ ಕಟ್ಟಡವು ಪುಟ್ಟ ಕಂದಮಗಳ ಮೇಲೆ ಬಿದ್ದು ಪ್ರಾಣ ಹಾನಿ ಸಂಭವಿಸುವ ಬಗ್ಗೆ ಸದರಿ ಶಾಲೆಯಲ್ಲಿ ದಾಖಲಾಗಿರುವ ಮಕ್ಕಳ ಪಾಲಕರು ಆತಂಕ ಕೊಳಗಾಗಿದ್ದಾರೆ.

ಒಂದು ವೇಳೆ ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡ ಕುಸಿದು ಬಿದ್ದರೆ ಅದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇರ ಹೊಣೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಖಾರ್ವಿವಾಡ್ ಬೇಲಿಕೆರಿ ಶಾಲೆಯ ಮಕ್ಕಳ ಪಾಲಕ ಪೋಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ,ವಿಕಾಸ ವಾಹಿನಿ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಗೆ ತ್ವರಿತವಾಗಿ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ವರದಿ: ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment