‘ಕ್ರಿಕೆಟ್ ಸಂಗ್ರಾಮ-2026’: ಅಂಕೋಲಾದಲ್ಲಿ ಏಪ್ರಿಲ್ 13 ರಿಂದ ಬೃಹತ್ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ..

News Desk
2 Min Read

ಅಂಕೋಲಾ: ಅಂಕೋಲಾ ತಾಲುಕು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಇದೇ ಏಪ್ರಿಲ್ 13 ರಿಂದ 16 ರವರೆಗೆ ತಾಲ್ಲೂಕಿನ ಸಮಸ್ತ ಜನತೆ ಹಾಗೂ ಯುವ ಪ್ರತಿಭೆಗಳಿಗಾಗಿ ‘ಕ್ರಿಕೆಟ್ ಸಂಗ್ರಾಮ-2026’ ಬೃಹತ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಗಜು ಆರ್. ನಾಯ್ಕ ತಿಳಿಸಿದರು. ಇಂದು ಪಟ್ಟಣದ ಶ್ರೀ ಮಹಾಗಣಪತಿ ರಿಕ್ಷಾ ನಿಲ್ದಾಣದಲ್ಲಿ ಪಂದ್ಯಾವಳಿಯ ಕುರಿತು ಪತ್ರಿಕಾ ಹೇಳಿಕೆ ನೀಡಿ, ಹೆಚ್ಚಿನ ವಿವರಗಳನ್ನು ಹಂಚಿಕೊಂಡರು.

ಪಂದ್ಯಾವಳಿಯ ಪ್ರಮುಖ ಅಂಶಗಳು: ಯಾರಿಗೆ ಅವಕಾಶ?: ಈ ಪಂದ್ಯಾವಳಿಯಲ್ಲಿ ತಾಲ್ಲೂಕಿನಾದ್ಯಂತ ಇರುವ ಗ್ರಾಮ ಪಂಚಾಯತ್‌ಗಳು ಮತ್ತು ಪುರಸಭೆಯ ವಾರ್ಡ್‌ಗಳ ತಂಡಗಳು ಭಾಗವಹಿಸಲಿವೆ. ತಾಲ್ಲೂಕಿನ ಯುವ ಕ್ರೀಡಾಪಟುಗಳಿಗೆ ಇದೊಂದು ಉತ್ತಮ ವೇದಿಕೆಯಾಗಲಿದೆ.

ಸ್ಥಳ ಮತ್ತು ನೇರ ಪ್ರಸಾರ: ಕ್ರೀಡಾಕೂಟವು ಅಂಕೋಲಾದ ಐತಿಹಾಸಿಕ ಜೈಹಿಂದ್ ಮೈದಾನದಲ್ಲಿ ನಡೆಯಲಿದ್ದು, ಪ್ರತಿಯೊಂದು ಪಂದ್ಯವೂ YouTube Live ಮೂಲಕ ನೇರ ಪ್ರಸಾರವಾಗಲಿದೆ. ಪ್ರಪಂಚದಾದ್ಯಂತ ಇರುವ ಕ್ರೀಡಾಭಿಮಾನಿಗಳು ಇದನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು.

ಸನ್ಮಾನ ಮತ್ತು ಹಗ್ಗ-ಜಗ್ಗಾಟ: ಪಂದ್ಯಾವಳಿಯ ಮುಕ್ತಾಯದ ದಿನದಂದು ತಾಲ್ಲೂಕಿನ ಹಿರಿಯ ಮತ್ತು ಸಾಧಕ ರಿಕ್ಷಾ ಚಾಲಕರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ, ಅದೇ ದಿನ ರಿಕ್ಷಾ ಚಾಲಕರು, ಕಾರು ಚಾಲಕರು ಮತ್ತು ಸಗಟು (Goods) ರಿಕ್ಷಾ ಚಾಲಕರಿಗಾಗಿ ಆಕರ್ಷಕ ‘ಹಗ್ಗ-ಜಗ್ಗಾಟ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನೋಂದಣಿ ಕೊನೆಯ ದಿನ: ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಏಪ್ರಿಲ್ 11, 2026 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 78993 26235, 92416 17130, 98443 88399 ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ತಾಲ್ಲೂಕು ರಿಕ್ಷಾ ಯೂನಿಯನ್ ಗೌರವಾಧ್ಯಕ್ಷರಾದ ಶ್ರೀ ಬೈರವ ಡಿ. ನಾಯ್ಕ್, ಅಧ್ಯಕ್ಷರಾದ ಶ್ರೀ ಗಜು ಆರ್. ನಾಯ್ಕ್, ಜಿಲ್ಲಾ ರಿಕ್ಷಾ ಯೂನಿಯನ್ ಉಪಾಧ್ಯಕ್ಷರಾದ ಶ್ರೀ ಮಹೇಶ ನಾಯ್ಕ್, ತಾಲ್ಲೂಕು ಯೂನಿಯನ್ ಉಪಾಧ್ಯಕ್ಷರಾದ ಶ್ರೀ ಗಂಗಾಧರ ಗಾಂವಕರ, ಸದಸ್ಯರುಗಳಾದ ಶ್ರೀ ರಮಾಕಂತ ಜಿ. ಗಾಂವಕರ, ಶ್ರೀ ಅಮರ ನಾಯ್ಕ್, ಶ್ರೀ ಸಂತೋಷ ನಾಯ್ಕ್, ಶ್ರೀ ನಂದಾ ಎಲ್. ನಾಯ್ಕ್, ಶ್ರೀ ಮೃತ್ಯುಂಜಯ ನಾಯ್ಕ್, ಶ್ರೀ ಪರವೇಜ್ ಶೇಖ್, ಶ್ರೀ ಅರವಿಂದ ನಾಯ್ಕ್, ಶ್ರೀ ಗಣಪತಿ ನಾಯ್ಕ್ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.

……………….

Share This Article
Leave a Comment