ಅಂಕೋಲಾದಿಂದ ಯಲ್ಲಾಪುರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ (NH-52) ಕಳೆದ ಕೆಲವು ತಿಂಗಳಿಂದ ಸಂಪೂರ್ಣ ಹಾಳಾಗಿ, ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದ ಹೊಂಡಗಳು ಮತ್ತು ಗುಂಡಿಗಳು ಉಂಟಾಗಿದೆ. ಇದರಿಂದ ವಾಹನ ಸವಾರರು ಪ್ರತಿದಿನವೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದೆ, ಸಾರ್ವಜನಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ.
ಯಾವುದೇ ಕ್ರಮ ಕೈಗೊಳ್ಳದಿರುವ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಆತಂಕ ಹೆಚ್ಚಾಗಿದ್ದು ಸಾರ್ವಜನಿಕರು ಕೂಡಲೇ ರಸ್ತೆ ದುರಸ್ತಿ ಕಾರ್ಯವನ್ನು ತಕ್ಷಣ ಮಾಡುವಂತೆ ಒತ್ತಾಯಿಸುತ್ತಿದ್ದಾರೆ,ಹಲವಾರು ಸಂಘಗಳು ಮತ್ತು ಸ್ಥಳೀಯ ವಾಹನ ಮಾಲಕರ ಸಂಘಗಳು ರಸ್ತೆ ಹಾಳಾದ ಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಲು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಈ ಸಂದರ್ಭಗಳಲ್ಲಿ, ಸರಕಾರ ಎಚ್ಚರಿಕೆ ನೀಡುವಂತೆ “ಹೆದ್ದಾರಿ ಯಲ್ಲಿ ಏಡಿಗಳನ್ನು ಬಿಟ್ಟು ಪ್ರತಿಭಟಿಸಲಾಗಿದೆ.
ದೂರದ ಹುಬ್ಬಳ್ಳಿ, ಕಾರವಾರ, ಮಣಿಪಾಲ, ಮಂಗಳೂರು ಕಡೆ ಬರುವ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕರ ಕಷ್ಟವನ್ನು ಗಮನ ಸೆಳೆಯಲು ಆಂಬುಲೆನ್ಸ್ ಮೂಲಕ ನಾಟಕೀಯ ಪ್ರದರ್ಶನವನ್ನೂ ನಡೆಸಲಾಗಿದೆ.
ನಿನ್ನೆ ನಡೆದ ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದು. ತೀವ್ರ ಹದಗೆಟ್ಟ ರಸ್ತೆಯ ಬಗ್ಗೆ ಜಾನಪದ ಹಾಡಿನ ಮೂಲಕ ಬೀದಿನಾಟಕ ಪ್ರದರ್ಶನ ಮಾಡಿ ಜನಸಾಮಾನ್ಯರ ಪ್ರತಿನಿತ್ಯದ ಗೋಳನ್ನು ಹೇಳಿ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಚಾಟಿ ಬೀಸಿದರು.
ಈ ಹೋರಾಟದಲ್ಲಿ ಪ್ರಮುಖರಾದ ಮಾಧವ ನಾಯ್ಕ್, ಗಣಪತಿ ಮೂಲಿಮನೆ, ಅಲಗೇರಿಯ ಕಲಾವಿದರು, ಲಾರಿ ಸಂಘದ ಸದಸ್ಯರು ಹಾಗೂ ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ರಮಾಕಾಂತ್ ಎಂ. ನಾಯ್ಕ (ಗಜು), ಉಪಾಧ್ಯಕ್ಷ ಅಕ್ಷಯ್ ಅಂಕೋಲೆಕರ್, ಖಜಾಂಚಿ ವಿವೇಕ್ ನಾಯ್ಕ, ಸಹ ಕಾರ್ಯದರ್ಶಿ ಪ್ರವೀಣ್ ಕೆಣಿಕರ್. ಸದಸ್ಯರ ಪಟ್ಟಿಯಲ್ಲಿ: ಶ್ರೀನಿವಾಸ್ ಗಾಂವಕರ, ಪ್ರದೀಪ ಬಂಟ, ಪ್ರವೀಣ್ ಎಮ್. ನಾಯ್ಕ್, ಉದಯ ಎನ್. ನಾಯ್ಕ್, ರಾಘವೇಂದ್ರ ನಾಯ್ಕ ಕಣಗಿಲ್, ಗುರುಪ್ರಸಾದ್ ಗುನಗಾ, ಗಣೇಶ್ ನಾಯ್ಕ್, ಭಾಸ್ಕರ್ ಹರಿಕಂತ್ರ, ಆನಂದು ಗಾಂವಕರ, ಗಣೇಶ್ ಗೌಡ, ವಿಘ್ನೇಶ್ವರ ಡಿ. ನಾಯ್ಕ್, ರಾಘವೇಂದ್ರ ಜಿ. ನಾಯ್ಕ್, ಸಂಜೀವ ಆರ್. ನಾಯಕ, ರಾಘವೇಂದ್ರ ಗಾಂವಕರ, ಗೋಪಾಲ ಪಿ. ನಾಯ್ಕ್, ಚಂದ್ರಶೇಖರ ಪ್ರಕಾಶ್ ನಾಯ್ಕ್. ಭಾಗವಹಿಸಿದರು.

ಈ ಪ್ರತಿಭಟನೆಗೆ ಅಂಕೋಲಾ ಸಿ.ಪಿ.ಐ ಚಂದ್ರಶೇಖರ್ ಮಠಪತಿ, ಪಿಎಸ್ಐ ಗಳು. ಇನ್ನಿತರ ಪೊಲೀಸ್ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ಆಗದಂತೆ ಬಿಗಿ ಬಂದೋಬಸ್ತನ್ನು ನೀಡಿದರು.
ವರದಿ: ಕಿರಣ ಗಾವಂಕರ

