ಅಂಕೋಲಾ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕು ಘಟಕದ ಉದ್ಘಾಟನಾ ಸಮಾರಂಭ, ಸದಸ್ಯರ ಕಾರ್ಡ್ ಬಿಡುಗಡೆ ಹಾಗೂ ವಿದ್ಯಾರ್ಥಿ ಯುವಜನರಲ್ಲಿ ಮಾನಸಿಕ ಸನೃಢತೆಗೆ ಜಾಗೃತಿ ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ಪಿ.ಎಂ. ಜ್ಯೂನಿಯರ್ ಕಾಲೇಜಿನ ಸಹಯೋಗದಲ್ಲಿ ಕಾಲೇಜು ಸಭಾಭವನದಲ್ಲಿ ನಡೆಯಲಿದೆ.
ಅಂಕೋಲಾ ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರು ಸದಸ್ಯರ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ “ಸಮಸ್ಯೆಗಳಿಗೂ ಸಾವಿದೆ, ಆತ್ಮಹತ್ಯೆ ಆಯ್ಕೆಯೇ ಅಲ್ಲ” ಎಂಬ ವಿಷಯದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯಕ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ, ಕರಾವಳಿಯ ಉಸ್ತುವಾರಿ ಕುಮಾರ ನಾಯ್ಕ ಹಾಗೂ ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ ಅವರ ಗೌರವ ಉಪಸ್ಥಿತಿ ಇರಲಿದೆ.
ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಸಂಘಟನೆಯ ಅಂಕೋಲಾ ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ, ಕಾರ್ಯದರ್ಶಿ ಕಿರಣ ಗಾಂವಕರ್ ಮತ್ತು ಸದಸ್ಯರುಗಳಾದ ಸುಪ್ರಿಯಾ ನಾಯ್ಕ, ವಿಲಾಸ್ ನಾಯಕ್, ವಿದ್ಯಾಧರ ಮೊರಬ, ನಾಗರಾಜ ಶೆಟ್ಟಿ ಅವರು ಕೋರಿದ್ದಾರೆ..
ವರದಿ: ಕಿರಣ ಚಂದ್ರಹಾಸ ಗಾಂವಕರ

