ಅಂಕೋಲಾದಲ್ಲಿ ಧರ್ಮ-ಒಗ್ಗಟ್ಟಿನ ಸಂಕೇತವಾಗಿ ಆಟೋರಿಕ್ಷಾ ಚಾಲಕರ ಗಣೇಶನಿಗೆ ಶ್ರೀ ಗಜಾನನ ಟ್ಯಾಕ್ಸಿ ಸಂಘದ ಸೇವೆ..

News Desk
2 Min Read

ಅಂಕೋಲಾ : ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಗಣೇಶೋತ್ಸವ ಸಮಿತಿಯ ಗಣಪನಿಗೆ, ಶ್ರೀ ಗಜಾನನ ಟ್ಯಾಕ್ಸಿ ಮಾಲಕರ ಹಾಗೂ ಚಾಲಕರ ಸಂಘ(ರಿ) ವತಿಯಿಂದ ನಿನ್ನೆ (2/09/2025) ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಬಾರಿ ಗಣೇಶನಿಗೆ ವಿವಿಧ ಜಾತಿಯ ಹೂವಿನಿಂದ ಮಾಡಿದ ಅಲಂಕಾರ ಭಕ್ತರನ್ನು ಕಣ್ಮನ ಸೆಳೆಯುವಂತೆ ಮಾಡಿತು. ಈ ವೈಭವ ಗತಕಾಲದ ನೆನಪುಗಳನ್ನು ಮರುಕಳಿಸಿತು. ಪೂಜೆಗೆ ಆಗಮಿಸಿದ ಭಕ್ತರಿಗೆ ಕೇಸರಿ ಬಾತ ಹಾಗೂ ಪಂಚಕಜ್ಜಾಯ ಪ್ರಸಾದ ವಿತರಿಸಲಾಯಿತು.

ಹಿಂದೂ, ಮುಸ್ಲಿಂ, ಕ್ರೈಸ್ತ – ಮೂರು ಧರ್ಮದವರನ್ನೂ ಒಳಗೊಂಡ ಗಜಾನನ ಟ್ಯಾಕ್ಸಿ ಸಂಘದವರು, ಧರ್ಮ ಬೇದಭಾವವಿಲ್ಲದೆ ಆತ್ಮಶುದ್ಧಿಯಿಂದ ಗಣೇಶನಿಗೆ ಪ್ರತಿ ವರ್ಷ ಸೇವೆ ಸಲ್ಲಿಸುತ್ತಿದ್ದು, ಈ ವರ್ಷವೂ ಶ್ರೀ ವಿಘ್ನ ನಿವಾರಕನ ಕೃಪೆಗೆ ಪಾತ್ರರಾದರು.

36ನೇ ವರ್ಷದ ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಗಣೇಶೋತ್ಸವ ಸಮಿತಿ, ಇದೇ ಬರುವ ಶುಕ್ರವಾರ (5/09/2025) ಭವ್ಯ ಮೆರವಣಿಗೆಯೊಂದಿಗೆ ಅಂಕೋಲಾ ಪಟ್ಟಣದಿಂದ ಸಾಗಿಸಿ ಕೇಣಿಯಲ್ಲಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಕ್ಷಯ್ ಅಂಕೋಲೆಕರ್, ಕಾರ್ಯದರ್ಶಿ ಸತೀಶ್ ಬಿ. ಕಾಮತ್, ಖಜಾಂಚಿ ವಿವೇಕ್ ನಾಯ್ಕ, ಸಹ ಕಾರ್ಯದರ್ಶಿ ಪ್ರವೀಣ್ ಕೆಣಿಕರ್, ಕೋಶಾಧಿಕಾರಿ ಅಶೋಕ ನಾಯ್ಕ ಹಾಗೂ ಸದಸ್ಯರಾದ ರಫೀಕ್ ಶೇಖ, ಚಂದ್ರಕಾಂತ ಎಂ. ನಾಯ್ಕ, ಶ್ರೀನಿವಾಸ್ ಗಾಂವಕರ, ಪ್ರದೀಪ ಬಂಟ್, ರಾಜೇಶ್ ಪಿ. ನಾಯ್ಕ ಸೇರಿದಂತೆ ಅನೇಕ ಮಾಲಕರು ಮತ್ತು ಚಾಲಕರು ಹಾಜರಿದ್ದರು..

Share This Article