ಕುಶಲಕರ್ಮಿ ಜನಾರ್ಧನ ಗಾಂವಕರ್ ಗೆ ರೋಟರಿ ಸನ್ಮಾನ

News Desk
1 Min Read

ಅಂಕೋಲಾ : ಕಳೆದ ಸರಿ ಸುಮಾರು 30 ವರ್ಷದಿಂದ ಸಾರ್ವಜನಿಕರ ಸೇವೆಯನ್ನು ಮಾಡುತ್ತಾ ಬಂದಿರುವ ಜೈ ಹಿಂದ್ ಮೈದಾನದ ಎದುರು ಗಡೆ ಇರುವ ಕುಶಲಕರ್ಮಿ ಜನಾರ್ಧನ ಗಾಂವಕರ್, ಇವರಿಗೆ ಅಂಕೋಲಾ ರೂರಲ್ ಕ್ಲಬ್ ವತಿಯಿಂದ ವೊಕೇಶನಲ್ ಅವಾರ್ಡ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸನ್ಮಾನ ಸ್ವೀಕರಿಸಿದ ಜನಾರ್ದನ ಮಾತನಾಡಿ ಇಷ್ಟು ವರ್ಷ ಸೇವೆ ಸಲ್ಲಿಸಿದಕ್ಕೆ ರೋಟರಿ ಸಂಸ್ಥೆ ಗುರುತಿಸಿದಕ್ಕೆ ತನಗೆ ಧನ್ಯತೆ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೋಟರಿಯ ರವಿ ನಾಯಕ, ಸಂತೋಷ ಕೇಣಿಕರ್, ಹರ್ಷ ನಾಯಕ, ರಘು ಭಟ್ , ಪುಷ್ಪಲತಾ ನಾಯಕ, ಶಿವಾನಂದ ನಾಯಕ, ಡಾ.ಸಂಜು ನಾಯಕ, ಕೌಸ್ತುಭ ನಾಯಕ, ಮಹೇಶ ಪೈ, ಸದಾನಂದ ನಾಯಕ, ವಿ.ಜಿ.ಶೆಟ್ಟಿ ಮತ್ತು ತುಳಸಿದಾಸ ಕಾಮತ ಉಪಸ್ತಿತರಿದ್ದರು.

Share This Article