
16 Aug 2024, 10:37 am, 1088 reads
ನಗರ ಪ್ರದೇಶದಿಂದ 10 ಕಿಲೋಮೀಟರ್ ದೂರದ ಒಂದು ಪ್ರದೇಶದಲ್ಲಿ ಒಬ್ಬಾಕೆ ಹುಡುಗಿ ತಾನು ಕಷ್ಟಪಟ್ಟು ಓದಿ, ತನ್ನೂರಿನಲ್ಲಿಯೇ ಚಿಕ್ಕದೊಂದು ನರ್ಸರಿ ಶಾಲೆಯನ್ನು ತೆರೆದು ಒಂದು ಸುಸಜ್ಜಿತ ಕಟ್ಟಡವನ್ನು ಬಾಡಿಗೆಗೆ ಪಡೆದು ಶಿಕ್ಷಣ ಸಂಸ್ಥೆಯನ್ನು ಕಟ್ಟುತ್ತಾಳೆ. ಎಲ್ ಕೆ ಜಿ ಇಂದ ತರಗತಿ ಪ್ರಾರಂಭಿಸಿದಾಗ ಅಲ್ಲಿನ ಪುಟಾಣಿ ಕಂದ ಮಗಳು ಶಾಲೆಗೆ ದಾಖಲಾಗುತ್ತದೆ. ಆ ಯುವತಿ ಯುಕೆಜಿ ಯನ್ನು ಪ್ರಾರಂಭಿಸಲು ಹೊರಟಾಗ ಅವಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರ್ಮಿಷನ್ ಅವಶ್ಯಕತೆ ಇರುತ್ತದೆ..
ಯುಕೆಜಿಯನ್ನು ಪ್ರಾರಂಭಿಸಲು ಪರ್ಮಿಷನ್ ನೀಡಿದರೇ ಕ್ಷೇತ್ರ ಶಿಕ್ಷಣಾಧಿಕಾರಿಗಳು? ಅಲ್ಲಿ ನಡೆದಿದ್ದಾರೂ ಏನು?
ಯುಕೆಜಿ ಅನ್ನು ಪ್ರಾರಂಭಿಸಲು ಹೊರಟ ಯುವತಿಗೆ 5 ಮುಖ್ಯವಾದ ದಾಖಲೆಗಳನ್ನು ತರಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸುತ್ತಾರೆ. ಆ ಯುವತಿ ಕೂಡಲೇ ಸಂಬಂಧಿಸಿದ ಪ್ರಾಧಿಕಾರದಿಂದ 5 ಮುಖ್ಯವಾದ ದಾಖಲೆಗಳನ್ನು ತರುತ್ತಾರೆ.ಅದರಲ್ಲಿ ಅಗ್ನಿ ಸುರಕ್ಷತೆ ,ಹಾಗೂ ಕಟ್ಟಡದ ಪಿಟ್ನೆಸ್, ಪ್ರಮಾಣ ಪತ್ರವು ಪ್ರಮುಖವಾಗಿದೆ.
ಯುವತಿ ಯುಕೆಜಿ ಯನ್ನು ಪ್ರಾರಂಭಿಸುವ ವಿಷಯ ತಿಳಿದ. ಅದಾಗಲೇ ಕಟ್ಟಡ 30 ವರ್ಷಕ್ಕೆ ಲೀಸ್ ನೀಡಿದ. ಕಟ್ಟಡ ಮಾಲೀಕನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಪ್ರಭಾವ. ಪರವಾನಿಗೆ ನೀಡದಂತೆ ತಡೆ .
ಯುವತಿ ತಾಲೂಕಿನ ಪುಟ್ಟ ಗ್ರಾಮದಲ್ಲಿ ಪ್ರಥಮ ವಾಗಿ ಯುಕೆಜಿ ಒಂದನ್ನು ಪ್ರಾರಂಭಿಸಲು ಪ್ರಮುಖವಾಗಿ ಅಗ್ನಿ ಸುರಕ್ಷತೆ. ಕಟ್ಟಡ ಪ್ರಮಾಣ ಪತ್ರವನ್ನು ಪೂರೈಸಿದ್ದಳು.. ಆದರೆ ಶಾಲೆ ನಡೆಸುತ್ತಿರುವ ಕಟ್ಟಡವನ್ನು 30 ವರ್ಷಗಳವರೆಗೆ ಲೀಸ್ ಆದರ ಮೇಲೆ ನೀಡಿದ್ದ ಕಟ್ಟಡ ಮಾಲೀಕನೇ ಹೋಗಿ ತಕರಾರನ್ನು ಸಲ್ಲಿಸಿದನು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಪ್ರಭಾವ ಬೀರಿದ ಕಟ್ಟಡ ಮಾಲೀಕನು ಯುವತಿಗೆ ಯು ಕೆ ಜಿ ಯನ್ನು ನಡೆಸದಂತೆ ಪರವಾನಿಗೆ ನೀಡದಂತೆ ತಡೆಯುವಲ್ಲಿ ಯಶಸ್ವಿಯಾದನು. ಯುವತಿಯ ಕನಸಿಗೆ ಎಳ್ಳು ನೀರು ಬಿಡುವ ಪ್ರಸಂಗ ಎದುರಾಯಿತು..

ದೃತಿಗೆಡದ ಯುವತಿ ಮಾಹಿತಿ ಹಕ್ಕು ಬಳಸಿ ಹೊರಟಕ್ಕೆ ಸಜ್ಜಾದಳು.. ನಂತರ ನ್ಯಾಯ ಸಿಕ್ಕಿತೇ ಯುವತಿಗೆ .?
ಅಧಿಕೃತವಾಗಿ ಶಾಲೆಯ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಲಿಸಿಗೆ ನೀಡಿದ ವ್ಯಕ್ತಿಗೆ ಅದನ್ನು ಏಕಾ ಏಕಿ ಹಿಂಪಡೆಯುವ ಅಧಿಕಾರ ಪ್ರಾಪ್ತವಾಗುವುದಿಲ್ಲ.. ಕಾನೂನಿನ ತೊಡಕುಗಳು ಏರ್ಪಡುತ್ತದೆ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸುತ್ತಾ ಹೋಗುತ್ತಾಳೆ. ಜೊತೆಗೆ ಏನಾದರೂ ಆಗಲಿ ಅದೇ ಕಟ್ಟಡದಲ್ಲಿ ಎಲ್ ಕೆ ಜಿ ಯನ್ನು ಪ್ರಾರಂಭಿಸುವದು ಮುಂದುವರೆಯುತ್ತದೆ. ಮುಂದೇನಾದರೂ ತನಗೆ ಹಾಗೂ ಶಾಲೆಯಲ್ಲಿ ದಾಖಲೆ ಪಡೆದ ಪುಟ್ಟ ಕಂದಮ್ಮ್ ಗಳಿಗೆ ಏನಾದರೂ ತೊಂದರೆ ಆಗಬಹುದೆಂದು ಉಹಿಸಿ ಕಟ್ಟಡ ಸುತ್ತಮುತ್ತಲು ಸಿಸಿ ಟಿವಿ ಕ್ಯಾಮರವನ್ನು ಅಳವಡಿಸುತ್ತಾಳೆ..
ವೃತ್ತಿಯಲ್ಲಿ ಕಟ್ಟಡವನ್ನು ಯುವತಿಗೆ ಬಾಡಿಗೆ ನೀಡಿದ್ದ ಕಟ್ಟಡ ಮಾಲೀಕ ಶಿಕ್ಷಕನಾಗಿದ್ದು.. ಶಾಲೆ ಪ್ರಾರಂಭಿಸಿದ್ದಕ್ಕೆ ದ್ವೇಷದಿಂದ ಶಾಲೆಯ ಮುಂದಿನ ಧ್ವಜ ಸ್ತಂಭ ಉರುಳಿಸಿ ದೇಶದ್ರೋಹ ಮಾಡಿದನೇ ?
ಒಂದು ದಿನ ಕಟ್ಟಡದ ಮಾಲೀಕ ವೃತ್ತಿಯಲ್ಲಿ ಶಿಕ್ಷಕ ಈತನು ಬುಲ್ಡೋಜರನ್ನು ತರಿಸಿ ಕೈಯಲ್ಲಿ ಕತ್ತಿಯನ್ನು ಹಿಡಿದು. ಪವಿತ್ರವಾದ ಧ್ವಜ ಸ್ತಂಭವನ್ನು ಕಿತ್ತುಹಾಕಿ ನೆಲೆಸಮಗೊಳಿಸುತ್ತಾನೆ.. ಈ ದೃಶ್ಯಾವಳಿ ಸಿಸಿಟಿವಿಲಿ ದಾಖಲಾಗಿದೆ…. ಕಟ್ಟಡದ ಮಾಲೀಕನ ಅಟ್ಟಹಾಸಕ್ಕೆ ನಲುಗಿದ ಯುವತಿ ಹತ್ತಿರದ ಸಿಸಿಟಿವಿಯಲ್ಲಿ ದಾಖಲದ ದೃಶ್ಯಾವಳಿಗಳನ್ನು ತಾಲೂಕಿನ ಪೊಲೀಸ್ ಠಾಣೆಗೆ ನೀಡಿದ್ದಾಳೆ. ಆರೋಪಿತರ ಮೇಲೆ ಕ್ರಿಮಿನಲ್ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗುತ್ತದೆ.
ಪೊಲೀಸ್ ತನಿಕಾ ಅಧಿಕಾರಿ ಧ್ವಜಸ್ತಂಬ ಕಿತ್ತು ಹಾಕಿದ ಪ್ರಕರಣ ” ಬಿ ” ರಿಪೋರ್ಟ ಹಾಕಿ ಮುಚ್ಚಿ ಹಾಕುವ ಪ್ರಯತ್ನ ನಡೆಸಿದರೆ?
ಯುವತಿಯ ದೂರಿಗೆ ಸಂಬಂಧಿಸಿದ ಧ್ವಜ ಸ್ತಂಭ ಕಿತ್ತು ಹಾಕಿದ ಪ್ರಕರಣವನ್ನು ಸರಿಯಾದ ಸಾಕ್ಷಿ . ಆಧಾರ್ ಇಲ್ಲವೆಂದು ಪೊಲೀಸ್ ಠಾಣೆಯಿಂದ ಮಾನ್ಯ ನ್ಯಾಯಾಲಯಕ್ಕೆ ” ಬಿ ” ರಿಪೋರ್ಟ್ ಸಲ್ಲಿಕೆಯಾಗುತ್ತದೆ. ಪೊಲೀಸರು ಆರೋಪಿಯ ಪ್ರಬಾವಕ್ಕೆ ಒಳಗಾಗಿ ಇರುವ ಶಂಕೆ ಯ ಮೇಲೆ ಯುವತಿ ಪೋಲಿಷ ಠಾಣೆಯ ಸಿಸಿಟಿವಿ ದೃಶ್ಯ ಪುರೈಸುವಂತೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕುತ್ತಾಳೆ..ಸದ್ರಿ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಟ್ಟಡ ಮಾಲೀಕನಿಂದ ಹಣ ಪಡೆದು. ಪಿಎಸ್ಐ ಹಣ ಹಂಚುತ್ತಿರುವ ವಿಡಿಯೋ ಚಿತ್ರಣ ಯುವತಿಗೆ ಸಿಗುತ್ತದೆ. ಸದರಿ ಧ್ವಜಸ್ತಂಬ ಕಿತ್ತು ಹಾಕಿದ ಪ್ರಕರಣವನ್ನು ರಾಜ್ಯಮಟ್ಟದ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತದೆ.. ಈ ಸುದ್ದಿಯನ್ನು ತಿಳಿದ ಪೊಲೀಸರು ಸುದ್ದಿ ವಾಹಿನಿಗಳ ವರದಿಗಾರರ ಮೇಲೆ ಡಿ ಪರ್ಮೇಶನ್ ( ಮಾನಹಾನಿ ) ಕೇಸನ್ನು ದಾಖಲಿಸುವುದಾಗಿ ಎಚ್ಚರಿಸುತ್ತಾರೆ.

ನ್ಯಾಯಾಲಯದ ಮೆಟ್ಟಿಲು ಏರಿದ ಯುವತಿಗೆ ಕೊನೆಗೆ ನ್ಯಾಯ ಸಿಕ್ಕಿತೇ? ಯಾವ ಹಂತದಲ್ಲಿ ಪ್ರಕರಣ ಇದೆ.
ಯುವತಿ ಮೇಲಿಂದ ಮೇಲೆ ತನಗಾದ ಅನ್ಯಾಯಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಕಾನೂನು ಸಮರವನ್ನು ಸಾರಿದ್ದಾಳೆ… ಈಗಾಗಲೇ ಪ್ರತಿನಿತ್ಯ ಬೆಳಿಗ್ಗೆ ಬಸ್ಸಿಗೆ ಹೊರಟು ನ್ಯಾಯಾಲಯ. ಎಸ್ ಪಿ ಕಚೇರಿ. ಡಿಎಸ್ಪಿ ಕಚೇರಿ. ಎಲ್ಲಾ ಕಡೆ ಸುತ್ತಾಡಿ ಸಂಜೆ ಆದಂತೆ ಮನೆಗೆ ಬಂದು. ಸೇರುತ್ತಾಳೆ.. ಪೊಲೀಸ್ ಠಾಣೆಯಲ್ಲಿ ಇವಳಿಗೆ ಪರಿಚಯವಿಲ್ಲದ ಅಧಿಕಾರಿಯೇ ಇಲ್ಲ. ಅಂತೂ 2 ದಿನದ ಹಿಂದೆ ಐದು ಜನ ಕಾನೂನು ರಕ್ಷಕರ ವಿರುದ್ಧ ಖಾಸಗಿ ದೂರನ್ನು ನ್ಯಾಯಾಲಯದಲ್ಲಿ ಸಲಿಸಿದ್ದಾಳೆ.. ನ್ಯಾಯಾಲಯವು ಸದರಿ ಪ್ರಕರಣವನ್ನು ರಜಿಸ್ಟರ್ ಮಾಡಿಕೊಂಡಿದೆ. ಯುವತಿ ತನ್ನ ಶಾಲೆಯನ್ನು ಬಂದ್ ಮಾಡಿ ಪ್ರತಿನಿತ್ಯ ಆತಂಕದಲ್ಲಿ ಇದ್ದಾಳೆ.. ಬದಲಾದ ಪರಿಸ್ಥಿತಿ… ದುಷ್ಟರ ಅಟ್ಟಹಾಸ ಎದುರಿಸಲು ಸಜ್ಜಾಗಿ ನಿಂತಿದ್ದಾಳೆ..
ತನಗೆ ವಂಚನೆ ಮಾಡಿದ ಪೊಲೀಸರ ವಿರುದ್ಧ ಯುವತಿ ಹೇಳುವುದಾದರೂ ಏನು?
ಕಾನೂನನ್ನು ಪರಿಪಾಲನೆ ಮಾಡುವ ಬದಲು ದೇಶದ ಘನತೆ. ಗೌರವಕ್ಕೆ ಧಕ್ಕೆ ತಂದಿರುವ ಆರೋಪಿತ ಭ್ರಷ್ಟ ಸರ್ಕಾರಿ ನೌಕರರು ಭಾರತ ಸರ್ಕಾರದಿಂದಾಗಲಿ ಕರ್ನಾಟಕ ಸರ್ಕಾರದಿಂದಾಗಲಿ,ಸಂಬಳವನ್ನು ಪಡೆದು,ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಟಕ್ಕರನ್ನು ನೀಡಿ. ದೇಶಪ್ರೇಮಿ ಅಧಿಕಾರಿಗಳಿಗೆ ಸರಿಸಾಟಿಯಾಗಿ ನೌಕರಿಯನ್ನು ಮುಂದುವರೆಸಿಕೊಂಡು ಹೋಗಲು” ಅನರ್ಹರು ” ಹೀಗಾಗಿ ದೇಶದ ಘನತೆ ಗೌರವಕ್ಕೆ ಕಪ್ಪು ಚುಕ್ಕೆಯಾದ ಆರೋಪಿತ ಪೊಲೀಸರು ಹಾಗೂ ಆರೋಪಿತ ಶಿಕ್ಷಕರನ್ನು ಸೇವೆಯಿಂದ ವಜಾ ಗೊಳಿಸಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಛಲಗಾತಿ ಯುವತಿ ಆಗ್ರಹಿಸುತ್ತಾಳೆ.
ಆ ಪೋಲಿಸ್ ಅಧಿಕಾರಿಗಳಾದರೂ ಯಾರು?ಯಾವ ಪೊಲೀಸ್ ಠಾಣೆ. ಹಾಗೂ ಕಾನೂನು ಹೋರಾಟಕ್ಕೆ ಸಿದ್ಧವಾಗಿರುವ ಛಲಗಾತಿ ಯುವತಿಯ್ ಹೆಸರು ತಿಳಿದುಕೊಳ್ಳುವ ಕುತೂಹಲವೇ..? ಇಲ್ಲಿದೆ ನೋಡಿ.
ತಾವು ಮೇಲಿನಿಂದ ಲೇಖನವನ್ನು ತುಂಬಾ ಕುತೂಲದಿಂದ ಓದುತ್ತಾ ಬಂದಿದ್ದೀರಿ ಎಂದು ತಿಳಿಯಿತು.. ಯಾರಿವ ವರದಿಗಾರ ಯುವತಿಯ ಹಾಗೂ ಪೋಲೀಸರ ಹೆಸರು ಹೇಳುವುದನ್ನು ಬಿಟ್ಟು ಕಥೆಯನ್ನು ಬರೆದಿದ್ದಾನೆ.. ಕೊನೆವರೆಗೂ ನೋಡಿ ಎಂದಿದ್ದಾನೆ ಎಂದು ಅನಿಸಿರಬಹುದು.. ನಿಜವಾಗಿಯೂ ಈ ಲೇಖನದಲ್ಲಿರುವ ಪ್ರತಿಯೊಂದು ವಿಷಯವು ಸತ್ಯ… ನ್ಯಾಯಾಲಯ ಛಲಗಾತಿ ಯುವತಿಯ ಪ್ರಕರಣವನ್ನು ಕೈಗತ್ತಿಕೊಂಡಿದೆ.. ಇನ್ನು ಅರ್ಜಿದಾರ ಯುವತಿಯನ್ನು ಹಾಗೂ ಆರೋಪಿತ ಸ್ಥಾನದಲ್ಲಿರುವ ಪೊಲೀಸರ ವಿಚಾರಣೆ ನಡೆದು ನಂತರ ಎಫ್ಐಆರ್ ಆಗುವ ಸಂಭವ ಜಾಸ್ತಿ ಇದೆ ಎಂದು ಯುವತಿ ತಿಳಿಸಿದ್ದಾಳೆ .. ಅದಕ್ಕೂ ಮುಂಚೆ ವರದಿಗಾರನಾದ ನಾನು ಕಾನೂನು ತೊಡಕಿನಿಂದ ಕಾನೂನು ರಕ್ಷಕರ ಸ್ವ ವಿವರವನ್ನು ಪ್ರಕಟಿಸಲು ಸಮಸ್ಯೆಯಾಗಿದೆ.. ಒಂದು ವೇಳೆ ಭ್ರಷ್ಟ ಕಾನೂನು ರಕ್ಷಕರ ಫೋಟೋವನ್ನು ಇದೇ ವರದಿಯಲ್ಲಿ ಪ್ರಕಟಿಸಿದ್ದಲ್ಲಿ ವರದಿಗಾರನಾದ ನಾನು ಪೊಲೀಸ್ ಠಾಣೆಯಲ್ಲಿ ಫೋಟೋ ಆಗುವುದರಲ್ಲಿ ಸಂದೇಹವಿಲ್ಲ.. ಸದರಿ ಭ್ರಷ್ಟ ಅಧಿಕಾರಿಗಳ ಮೇಲೆ FIR ದಾಖಲಾದ ತಕ್ಷಣವೇ ನಿಮ್ಮ ನೆಚ್ಚಿನ ವಿಕಾಸ ವಾಹಿನಿಯಲ್ಲಿ ಇಂಚಿಂಚು ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.ಸುದ್ದಿಯನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಲೇಖನ:
ಕಿರಣ್ ಚಂದ್ರಹಾಸ ಗಾಂವಕರ
ಅಂಕೋಲಾ
