ಅಂಕೋಲಾ: ಮುಂದಿನ ಐದು ವರ್ಷಗಳ ಅವಧಿಗೆ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳ ಸಾಮಾನ್ಯ ಚುನಾವಣೆಗೆ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನವೆಂಬರ್ 23, 2026 ರಂದು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಈ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅಕ್ಟೋಬರ್ 9, 2026 ರಂದು ಪ್ರಕಟಿಸಲಾಗಿದ್ದ ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದ ಬಳಿಕ ಈ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 53 ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಮತ್ತು 12 ತಾಲ್ಲೂಕುಗಳ 118 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಯಾಗಿದೆ.
ಅಂಕೋಲಾ ವ್ಯಾಪ್ತಿಯ ಜಿ.ಪಂ. ಕ್ಷೇತ್ರಗಳು (5):
ಅಗಸೂರು: ಹಿಂದುಳಿದ ವರ್ಗ “ಬ”
ಅವರ್ಸಾ: ಸಾಮಾನ್ಯ
ಭಾವಿಕೇರಿ: ಸಾಮಾನ್ಯ
ಶೇಟಗೇರಿ: ಸಾಮಾನ್ಯ
ಬೆಳಸೆ: ಸಾಮಾನ್ಯ (ಮಹಿಳೆ)
ಅಂಕೋಲಾ ತಾ.ಪಂ. ಕ್ಷೇತ್ರಗಳು (9):
1-ಅಗಸೂರು: ಸಾಮಾನ್ಯ
2-ಅವರ್ಸಾ: ಸಾಮಾನ್ಯ (ಮಹಿಳೆ)
3-ಬೆಳಂಬಾರ: ಸಾಮಾನ್ಯ (ಮಹಿಳೆ)
4-ಬೇಲೆಕೇರಿ: ಸಾಮಾನ್ಯ
5-ಬೆಳಸೆ: ಹಿಂದುಳಿದ ವರ್ಗ “ಅ”
6-ಭಾವಿಕೇರಿ: ಹಿಂದುಳಿದ ವರ್ಗ “ಅ” (ಮಹಿಳೆ)
7-ಹಿಲ್ಲೂರು: ಅನುಸೂಚಿತ ಪಂಗಡ (ಮಹಿಳೆ)
8-ಸಗಡಗೇರಿ: ಸಾಮಾನ್ಯ
9-ಶೇಟಗೇರಿ: ಅನುಸೂಚಿತ ಜಾತಿ (ಮಹಿಳೆ)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಸರ್ಕಾರದ ಪದನಿಮಿತ್ತ ಉಪ ಕಾರ್ಯದರ್ಶಿ ಅವರು ಈ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದಾರೆ.


