ಅಂಕೋಲಾ ತಾಲೂಕಿನ ಕನಸೆಗದ್ದೆ ನಿವಾಸಿ ಹಾಗೂ ಸಕ್ರಿಯ ಸಮಾಜ ಸೇವಾ ಕಾರ್ಯಕರ್ತರಾದ ಶ್ರೀ ವಿಜಯ್ ಕುಮಾರ್ ಯಶವಂತ ನಾಯ್ಕ ಅವರ ನಿಸ್ವಾರ್ಥ ಸೇವೆಗೆ ಮಹತ್ವದ ಗೌರವ ಒಲಿದುಬಂದಿದೆ. ಅಫಜಲಪುರದಲ್ಲಿ 19/07/2026 ರಂದು ನಡೆದ ‘ವಿಶ್ವದರ್ಶನ’ ಕನ್ನಡ ದಿನಪತ್ರಿಕೆಯ 7ನೇ ರಾಜ್ಯ ಮಟ್ಟದ ಭಾವೈಕ್ಯತಾ ಸಮ್ಮೇಳನದಲ್ಲಿ ಇವರಿಗೆ ಪ್ರತಿಷ್ಠಿತ “ಶ್ರೇಷ್ಠ ಜೀವ ಮಾನವ” ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾಜ ಸೇವಾ ಕ್ಷೇತ್ರದಲ್ಲಿ ಅವರು ಮಾಡಿರುವ ಅನನ್ಯ ಸಾಧನೆ, ಸಮಾಜಮುಖಿ ಚಿಂತನೆ ಮತ್ತು ಸಮರ್ಪಣಾ ಭಾವವನ್ನು ಗುರುತಿಸಿ ವಿಶ್ವದರ್ಶನ ದಿನಪತ್ರಿಕೆ ವತಿಯಿಂದ ಪತ್ರಿಕಾ ಸಂಪಾದಕರಾದ ಡಾ.ಎಸ್ ಎಸ್ ಪಾಟೀಲ್ ಅವರ ನೇತ್ರತ್ವದಲ್ಲಿ ಈ ಮಹತ್ತರ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ.

ಸಮಾಜದ ಏಳಿಗೆಗಾಗಿ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ವಿಜಯ್ ಕುಮಾರ್ ಅವರು, ತಮ್ಮ ಸೇವಾ ಕಾರ್ಯಗಳ ಮೂಲಕ ಹಲವರ ಪಾಲಿಗೆ ಆಶಾಕಿರಣವಾಗಿದ್ದಾರೆ.ವಿವಿಧ ಪೂಜ್ಯರು, ಗಣ್ಯರು, ಹಾಗೂ ಸಮಾಜ ಸೇವಕರ ಸಮ್ಮುಖದಲ್ಲಿ ಜರುಗಿದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಂಕೋಲಾ ತಾಲೂಕಿನ ಗ್ರಾಮೀಣ ಭಾಗವಾದ ಕನಸೆಗದ್ದೆಯಂತಹ ಊರಿನಿಂದ ಬೆಳೆದು ಬಂದು, ತಮ್ಮ ಸೇವೆಯ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಇವರ ಸಾಧನೆ ಇಡೀ ತಾಲೂಕಿಗೆ ಕೀರ್ತಿ ತಂದಿದೆ.ಪ್ರಶಸ್ತಿ ಪುರಸ್ಕೃತ ವಿಜಯ್ ಕುಮಾರ್ ಯಶವಂತ ನಾಯ್ಕ ಅವರ ಈ ಸಾಧನೆಗೆ ಸ್ಥಳೀಯ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಊರಿನ ಜನತೆ ಹಾಗೂ ಸ್ನೇಹಿತರು ಅಪಾರ ಹರ್ಷ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಸಮಾಜ ಸೇವೆ ಮೂಡಿಬರಲಿ ಎಂದು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


