ತಾಲೂಕು ಮಟ್ಟದ ಕ್ರೀಡಾಕೂಟ : ಇಂದಿರಾ ಗಾಂಧಿ ವಸತಿ ಶಾಲೆ ಉತ್ತಮ ಸಾಧನೆ..


19 Sep 2024, 09:19 am, 321 reads

ಅಂಕೋಲಾ : ತಾಲೂಕಿನ ಅಂಕೋಲಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹೊನ್ನೇಕೇರಿಯ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ.

ಪ್ರಾಥಮಿಕ ಬಾಲಕಿಯರ ವಿಭಾಗದ ಖೋ -ಖೋ ದಲ್ಲಿ ಪ್ರಥಮ ಸ್ಥಾನ,100 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಿಯಾ ಪ್ರಥಮ ಸ್ಥಾನ ಹಾಗೂ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ರೋಶನ್ ದ್ವಿತೀಯ ಸ್ಥಾನ,ಬಾಲಕರ ಪ್ರಾಥಮಿಕ ವಿಭಾಗದ ಯೋಗ ಸ್ಪರ್ಧೆಯಲ್ಲಿ ಬಾದಲ್ ಗೌಡ, ಪ್ರಥ್ವಿರಾಜ ಹರಿಕಂತ್ರ ಹಾಗೂ ಬಾಲಕಿಯರ ವಿಭಾಗದಲ್ಲಿ ದೀಪ್ತಿ ಅಂಗಡಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಟಿ.ಜಿ.ಟಿ ವಿಭಾಗದ ಯೋಗ ಸ್ಪರ್ಧೆಯಲ್ಲಿ ರುತಿಕಾ ಬಡಗಿ, ಪುನೀತ್ ಕುಸನೂರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲಕಿಯರ ಪ್ರೌಢ ವಿಭಾಗದ ಯೋಗ ಸ್ಪರ್ಧೆಯಲ್ಲಿ ನಮ್ರತಾ ನಾಯಕ , ಧನ್ಯಾ ಕಾಂಬ್ಳೆ , ಮಾನ್ಯಶ್ರೀ ಕರೆಪೂಜಾರ, ಅಕ್ಷತಾ ಹರಿಕಂತ್ರ ಬಾಲಕರ ವಿಭಾಗದಲ್ಲಿ ಭರತ ಗೌಡ, ಚೇತನ ಭೋವಿವಡ್ಡರ , ಅಮಿತ ನಾಯ್ಕ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.

ಪ್ರೌಢ ವಿಭಾಗದ ಬಾಲಕಿಯರ ವಿಭಾಗದ ಕಬ್ಬಡಿ ಸ್ಪರ್ಧೆಯಲ್ಲಿ ಪ್ರಥಮ , ಖೋ -ಖೋ ದಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ಪ್ರೌಢ ವಿಭಾಗದ ಯೋಗ ಸ್ಪರ್ಧೆಯಲ್ಲಿ ನಮ್ರತಾ ನಾಯಕ , ಧನ್ಯಾ ಕಾಂಬ್ಳೆ , ಮಾನ್ಯಶ್ರೀ ಕರೆಪೂಜಾರ, ಅಕ್ಷತಾ ಹರಿಕಂತ್ರ ಬಾಲಕರ ವಿಭಾಗದಲ್ಲಿ ಭರತ ಗೌಡ, ಚೇತನ ಭೋವಿವಡ್ಡರ , ಅಮಿತ ನಾಯ್ಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ತ್ರಿವಿಧ ಸ್ಪರ್ಧೆಯಲ್ಲಿ ಕರಣ ತೃತೀಯ ಸ್ಥಾನ ಪಡೆದುಕೊಂಡಿರುತ್ತಾನೆ.

ಈ ಎಲ್ಲಾ ಭಾಗವಹಿಸಿದ, ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಲಲಿತಾ ಗೌಡ ರವರಿಗೆ ಉತ್ತರ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಉಮೇಶ ವೈ ಕೆ, ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿನೋದ ಗಾಂವಕರ, ಬೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಪಾಲಕರು ಮತ್ತು ಪಾಲಕ ಪ್ರತಿನಿಧಿಗಳು ಅಭಿನಂದಿಸಿರುತ್ತಾರೆ.


ವಿಕಾಸ ವಾಹಿನಿ ವರದಿ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: