ಅಂಕೋಲಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ..


18 Sep 2024, 10:05 pm, 240 reads

2024-25ನೇ ಸಾಲಿನ ಅಂಕೋಲಾ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆರ್.ಪಿ.ಎಸ್.ಎಸ್ ಸೆಕೆಂಡರಿ ಸ್ಕೂಲ್ ಬೆಳಸೆ, ಅಂಕೋಲಾದ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗುಂಪು ಆಟಗಳಲ್ಲಿ ಹುಡುಗರ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಹುಡುಗರ 4×100 & 4×400 ರಿಲೆ ಪ್ರಥಮ, ಹುಡುಗಿಯರ 4×400 ರಿಲೆ ಪ್ರಥಮ. ವೈಯಕ್ತಿಕ ಹುಡುಗಿಯರ ವಿಭಾಗದಲ್ಲಿ ಚೈತ್ರಾ ಗೌಡ 3000ಮೀ ಓಟ & ನಡಿಗೆಯಲ್ಲಿ ಪ್ರಥಮ ಸ್ಥಾನ ಹಾಗೂ 1500ಮೀ.ಓಟದಲ್ಲಿ ದ್ವಿತೀಯ, ನಿವೇಕ್ಷಿ ಗೌಡ 400ಮೀ. ಓಟ & 800ಮೀ ಓಟ ಪ್ರಥಮ, ಮೌಲ್ಯ ಗೌಡ ಅಡೆತಡೆ ಓಟ ಪ್ರಥಮ & 100ಮೀ.ಓಟ ತೃತೀಯ, ನಂದಿತಾ ಗೌಡ 4೦೦ಮೀ ಓಟ ತೃತೀಯ ,ಹೇಮಾ ಗೌಡ 1500ಮೀ.ಓಟ ತೃತೀಯ, ವೈಯಕ್ತಿಕ ಹುಡುಗರ ವಿಭಾಗದಲ್ಲಿ ನಾಗರಾಜ ಗೌಡ 3000ಮೀ. ಓಟ , 800ಮೀ.ಓಟದಲ್ಲಿ ಪ್ರಥಮ & ಅಡೆತಡೆ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ, ವಿನೋದ ಗೌಡ 100ಮೀ. ಓಟ ಪ್ರಥಮ & ತ್ರಿವಿಧಜಿಗಿತ ದ್ವಿತೀಯ, ನಾಗೇಶ ವಾಣಿ 200ಮೀ. ಓಟ ಪ್ರಥಮ & 100ಮೀ.ಓಟ ದ್ವಿತೀಯ, ದೀಪಕ ಗೌಡ ನಡಿಗೆ ಪ್ರಥಮ,ಆದಿತ್ಯ ಗೌಡ ಎತ್ತರ ಜಿಗಿತ ಪ್ರಥಮ, ಚಂದನ ಗೌಡ ತ್ರಿವಿಧ ಜಿಗಿತ ಪ್ರಥಮ,ನಿತಿನ ಗೌಡ 1500ಮೀ.ಓಟ ದ್ವಿತೀಯ, ಶಾಂತಾ ಗೌಡ 3000ಮೀ.ಓಟ ತೃತೀಯ, ಮಂಜುನಾಥ ಬನೋಶಿ 800ಮೀ. ಓಟ ತೃತೀಯ. ಗುಂಪು ವಿಭಾಗದ ಬಾಲಕರು ಬಾಲಕಿಯರ ಖೋಖೋ ರನ್ನರ್ ಆಫ್ .ಟಿ ಜಿ ಟಿ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ವಿಘ್ನೇಶ್ವರ ಮಹಾಬಲೇಶ್ವರ ಗೌಡ ಪ್ರಥಮ, ಚೇತನಾ ಈಶ್ವರ ಗೌಡ 100ಮೀ. & 200ಮೀ.ಓಟ ಪ್ರಥಮ, ರೋಹಿತ್ ಯಶ್ವಂತ ಗೌಡ 600ಮಿ. ಓಟ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. 

ಸಾಧನೆಗೈದ ವಿದ್ಯಾರ್ಥಿಗಳಿಗೂ ಹಾಗೂ ತರಭೇತಿ ನೀಡಿದ ದೈಹಿಕ ಶಿಕ್ಷಕರಾದ ಸುಧೀರ ರಾವ್.ಕೆ. ಇವರಿಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಕಾಶ ಪ್ರಭು, ಕಾರ್ಯದರ್ಶಿಗಳು, ಸದಸ್ಯರು ಶಿಕ್ಷಕ ವೃಂದದವರು ಮತ್ತು ಊರ ನಾಗರಿಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: