ಇವನು ಪತ್ರಕರ್ತ, ಇವನ ಎದುರು ಹುಷಾರಾಗಿ ಮಾತಾಡಿ, ನಿಮ್ಮ ಬಗ್ಗೆ ಬರೆದು ಬಿಡ್ತಾನೆ ಹಾಗಂತ ಯಾರಾದರೂ ಗೆಳೆಯರು ನನ್ನನ್ನು ಇಂಟ್ರಡ್ಯೂಸ್ ಮಾಡುವಾಗ ನಿಮಗೇನು ಬಿಡಿ ಪತ್ರಕರ್ತರು ಟ್ರಾಫಿಕ್ ಪೊಲೀಸ್ ಹಿಡಿಯಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಲಂಚ ಕೇಳಲ್ಲ. ಎಲ್ಲಾ ಕಡೆಗೂ ನಿಮಗೆ ಫ್ರೀ , ಸುದ್ದಿ ಮಾಡುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ ಹಣ ಕೊಟ್ಟರೆ ಮಾಯವಾಗಿ ಬಿಡುತ್ತಾರೆ. ಇಂಥ ಘಟನೆಯಿಂದ ಮಾಧ್ಯಮಗಳು ಪತ್ರಕರ್ತರು ಹಿಗ್ಗಾ ಮುಗ್ಗ ಉಗಿಸಿಕೊಳ್ಳುವಾಗ ಒಂದು ರೀತಿಯಲ್ಲಿ ಇರಿಟೇಟ್ ಆಗುತ್ತದೆ.
ಕೆಲವೊಮ್ಮೆ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೋಗಿ ಪ್ರಾಮಾಣಿಕ ಪತ್ರಕರ್ತರು ಅದೆಷ್ಟೋ ಜನ ಹೊಡೆತವನ್ನು ತಿಂದಿದ್ದಾರೆ. ಸುಮಾರಷ್ಟು ಜನ ಸರಿ ಆಯ್ತು ಹೊಡೆತ ಬಿಳಬೇಕಿತ್ತು ಎನ್ನುತ್ತಾರೆ. ಮಾಧ್ಯಮದವರಿಗೆ ಬುದ್ಧಿ ಬರಬೇಕು ಅಂದ್ರೆ ಹೊಡೆತ ಬಿಳಬೇಕು ಅಂದವರು ತುಂಬಾ ಜನ ಇದ್ದಾರೆ. ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮದಲ್ಲಿ ಕೆಲಸ ಮಾಡುವ ಕೆಲವು ಪತ್ರಕರ್ತರಿಗೆ ತರಕಾರಿ ಮಾರುವನಿಗಿಂತ ಕಡಿಮೆ ಸಂಬಳ ಇದೆ. ಅದನ್ನು ಅವರು ಯಾರ ಬಳಿ ಹಂಚಿಕೊಳ್ಳುವುದಿಲ್ಲ .. ಆದರೆ ಇನ್ನು ಕೆಲವು ಪತ್ರಕರ್ತರು ಭ್ರಷ್ಟ ಅಧಿಕಾರಿಗಳ, ಅಕ್ರಮ ಚಟುವಟಿಕೆದಾರರ ಬಾಲವನ್ನು ಹಿಡಿದು ಹೊಗಳು ಭಟ್ಟರಾಗಿ ಅಂತಹುದೇ ಸುದ್ದಿಯನ್ನು ಮಾಡಿ -ಮಾಡಿ ಕೆಲವೇ ದಿನಗಳಲ್ಲಿ ಇಮಾರತ್ತುಗಳನ್ನು ನಿರ್ಮಿಸಿ ಮೆರೆದಾಡುವರನ್ನು ನೋಡಿದ್ದೀರಿ. ಇನ್ನು ಕೆಲವು ಜನ ಪತ್ರಕರ್ತರು ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಇಂದ ಹಿಡಿದು ಪಿಎಸ್ಐ ಹಾಗೂ ಸಿಪಿಐಗಳ ಅತಿಯಾದ ದೋಸ್ತಿಯನ್ನು ಬೆಳೆಸಿ . ಒಮ್ಮೊಮ್ಮೆ ಪೊಲೀಸ್ ಅಧಿಕಾರಿಗಳ ಮನೆಯಲ್ಲೂ ಕಾಣಸಿಗುತ್ತಾರೆ. ಪೊಲೀಸರ ಮಧ್ಯವರ್ತಿಗಳಾಗಿ ಅಕ್ರಮ ಮಟಕಾ, ಇನ್ನಿತರ ಹಲವು ಅಕ್ರಮ ಚಟುವಟಿಕೆಗಳ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಪತ್ರಕರ್ತರಿಂದ ಸಮಾಜಕ್ಕೆ ಮಾರಕವೇ ಹೊರತು ಯಾವುದೇ ಗುಣಾತ್ಮಕ ಬದಲಾವಣೆಗಳು ಸಾಧ್ಯವೇ ಇಲ್ಲ.
ಪತ್ರಕರ್ತರ ಸೋಗಿನಲ್ಲಿ ಅಂಕೋಲಾದ ಸಿಲೆಂಡರ್ ಏಜೆನ್ಸಿಯ ಮಾಲಿಕನಿಗೆ ಬೆದರಿಸುವ ಪ್ರಯತ್ನ ..? ಏನಿದು ಪ್ರಕರಣ, ಪೂರ್ತಿ ಸುದ್ದಿಯನ್ನು ಓದೋಣ ಬನ್ನಿ.
ಸುದ್ದಿಯ ಪ್ರಾರಂಭದಲ್ಲಿ ಪತ್ರಕರ್ತರ ಬಗ್ಗೆ ಸಮಾಜದಲ್ಲಿ ಕೇಳಿ ಬರುತ್ತಿರುವ ಆಪಾದನೆಯ ಬಗ್ಗೆ ನಾನು ಪ್ರಾರಂಭದಲ್ಲಿ ವಿವರಿಸಲಾಗಿದೆ . ಇದಕ್ಕೆ ಪೂರಕವಾಗುವಂತೆ ಕಳೆದ ಒಂದೆರಡು ದಿನಗಳ ಹಿಂದೆ ಬೆಂಗಳೂರಿನ ತಾನು ನ್ಯೂಸ್ ಮೀಡಿಯಾ ಕ್ರೈಂ ರಿಪೋರ್ಟರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಅಂಕೋಲಾದ ಪ್ರತಿಷ್ಠಿತ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ಅಂಕೋಲಾ ದಲ್ಲಿ ಸಿಲೆಂಡರ್ ಶೇಖರಣ ಘಟಕದಲ್ಲಿ ದಾಸ್ತಾನು ಮಾಡಿರುವ ಸಿಲಿಂಡರ್ ಬಗ್ಗೆ ಮಾಹಿತಿ ಕೇಳಿದ್ದಾರೆ.
ಯಾರೋ ಅಪರಚಿತ ವ್ಯಕ್ತಿಗಳು ಕರೆ ಮಾಡಿ ಸಿಲೆಂಡರ್ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದರೆ ಎಂತವರಿಗೂ ಕೋಪದ ಜೊತೆ ಗಾಬರಿಯಾಗದೇ ಇರಲಾರದು.. ಆ ಬೆಂಗಳೂರಿನ ಪತ್ರಕರ್ತನಿಗೆ ಉದ್ದೇಶಿಸಿ ಯಾಕೆ ನಿವು ನಮ್ಮ ಸಿಲಿಂಡರ್ ದಾಸ್ತಾನಿನ ಬಗ್ಗೆ ಮಾಹಿತಿ ಕೇಳುತ್ತಿದ್ದೀರಿ.ನಮ್ಮ ಬಳಿ ಎಲ್ಲ ದಾಖಲೆಗಳು ಸರಿಯಾಗಿ ಇದೆ. ನಾವು ಕಾನೂನು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದೇವೆ.ಬೇಕಿದ್ದರೆ ನೀವು ಅಂಕೋಲಾಗೆ ಬನ್ನಿ ನಿಮಗೆ ಎಲ್ಲಾ ದಾಖಲೆಗಳನ್ನು ತೋರಿಸುತ್ತೇವೆ ಎಂದು ಗ್ಯಾಸ್ ಏಜೆನ್ಸಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ.
ಎಲ್ಲಿಯ ಬೆಂಗಳೂರು ಎಲ್ಲಿಯ ಅಂಕೋಲಾ 500km ದೂರದಿಂದ ಬೆಂಗಳೂರಿನ ಪತ್ರಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿ ಕರೆ ಮಾಡಿದ್ದು ನೋಡುತ್ತಾ ಇದ್ದರೆ ಏನಾದ್ರೂ ಸಂಚು ನಡೆಸಿರಬಹುದೆಂದು ಊಹಿಸಿ ಕೆಲಕಾಲ ಕಳವಳಗೊಂಡು ಸಿಲೆಂಡರ್ ಏಜೆನ್ಸಿಯ ಸಿಬ್ಬಂದಿಯು ನೇರವಾಗಿ ನಡೆದಿರುವ ವಿದ್ಯಮಾನಗಳ ಬಗ್ಗೆ ವಿಕಾಸ ವಾಹಿನಿಯ ವರದಿಗಾರರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸದರಿ ಬೆಂಗಳೂರಿನ ಪತ್ರಕರ್ತಎಂದು ಹೇಳಿಕೊಳ್ಳುವ ಆ ವ್ಯಕ್ತಿಯ ಮೊಬೈಲ್ ನಂಬರನ್ನು ಪಡೆದುಕೊಂಡ ವಿಕಾಸ ವಾಹಿನಿ ವರದಿಗಾರರು ಕರೆ ಮಾಡಿದ್ದಾರೆ.. ಕರೆಯನ್ನು ಸ್ವೀಕರಿಸಿದ ಆ ವ್ಯಕ್ತಿಯು ಮೊದಲಿಗೆ ಸರ್, ನೀವು ಗ್ಯಾಸ್ ಏಜೆನ್ಸಿ ಅವರಾ ಎಂದು ಕರೆ ಸ್ವೀಕರಿಸಿದ ತಕ್ಷಣವೇ ಕೇಳಿದ್ದಾರೆ.ಬಹುಶಃ ಅವನು ಸಿಲೆಂಡರ್ ಮಾಲೀಕನು ಹೆದರಿಕೊಂಡು ಕರೆ ಮಾಡಿದ್ದಾನೆ ಅಂದುಕೊಂಡಿರಬಹುದು. ವಿಕಾಸ ವಾಹಿನಿ ವರದಿಗಾರನಾದ ನಾವು ಗ್ಯಾಸ್ ಏಜೆನ್ಸಿ ಅವರಲ್ಲ ಅಂಕೋಲಾ ಪತ್ರಿಕ ವರದಿಗಾರರು ಇದ್ದೇನೆ.ನೀವು ಅಂಕೋಲಾದ ಗ್ಯಾಸ್ ಏಜೆನ್ಸಿ ಬಗ್ಗೆ ಕೇಳುತ್ತಿದ್ದೀರಲ್ಲ ಏನು ನಿಮ್ಮ ಸಮಾಚಾರ ?ಎಂದು ಪ್ರಶ್ನೆ ಮಾಡಲು ನಿಂತಾಗ ಆ ಕಡೆಯಿಂದ ಬೆಂಗಳೂರಿನ ಪತ್ರಿಕೆಯವನು ಎಂದು ಹೇಳುವ ವ್ಯಕ್ತಿಯು ಉತ್ತರಿಸಿ ಸರ್ ಅಂಕೋಲಾ ಗ್ಯಾಸ್ ಏಜೆನ್ಸಿ ಮಾಲೀಕರು ನಿಯಮ ಬಾಹಿರವಾಗಿ ಸಿಲಿಂಡರ್ ಶೇಖರಣ ಘಟಕದಲ್ಲಿ ಹೆಚ್ಚಿನ ಸಿಲಿಂಡರನ್ನು ದಾಸ್ತಾನು ಮಾಡುತ್ತಿದ್ದಾರೆ . ಅದರ ಬಗ್ಗೆ ನಮಗೆ ಮಾಹಿತಿ ಇದೆ. ನಾವು ಮೂರು ದಿವಸ ಅಂಕೋಲಾದಲ್ಲಿ ಉಳಿದುಕೊಂಡು ರಹಸ್ಯ ಕಾರ್ಯಚರಣೆ ಮಾಡಿ ಹೋಗಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಆ ಸಿಲಿಂಡರ್ ಏಜೆನ್ಸಿ ಬಂದ್ ಆಗುತ್ತದೆ. ನಾವು ಗುಪ್ತವಾಗಿ ತನಿಖೆಯನ್ನು ಮಾಡಲು ಆ ಏಜೆನ್ಸಿಯ ಸಂಬಂಧಿಕರು ಮಾಹಿತಿ ನೀಡಿದ್ದಾರೆ .. ಆ ಸಿಲಿಂಡರ್ ಏಜೆನ್ಸಿ ವಿಡಿಯೋ ಕೂಡ ನಮ್ಮ ಬಳಿ ಇದೆ. ಎಂದು ಪ್ರತ್ಯುತ್ತರ ನೀಡಿದ್ದಾರೆ, ಮತ್ತು ಗ್ಯಾಸ್ ಏಜೆನ್ಸಿ ಮಾಲಿಕರಿಗೂ ಅವರ ಏಜೆನ್ಸಿ ಬಂದಾಗುವುದನ್ನು ತಿಳಿಸಿ ಎಂದು ಹೇಳಿದ್ದಾರೆ.
ನೋಡಿದ್ರಲ್ಲ ಸ್ವಾಮಿ ಬೆಂಗಳೂರಿನಿಂದ 500km ದೂರದ ಅಂಕೋಲಾಕ್ಕೆ ಬಂದು, ಮೂರು ದಿನ ರೂಮ್ನಲ್ಲಿ ಉಳಿದುಕೊಂಡು ಗ್ಯಾಸ್ ಏಜೆನ್ಸಿಯ ಅವ್ಯವಹಾರಗಳನ್ನು ಸಾವಿರಾರು ರೂಪಾಯಿ ಯನ್ನು ಆ ಪತ್ರಕರ್ತರು ಖರ್ಚು ಮಾಡಿ ಸ್ಪ್ರಿಂಗ್ ಆಪರೇಷನ್ ಮಾಡಿ ಹೋಗಿರುತ್ತಾರೆ ಎಂದರೆ ಅವರ ಷಡ್ಯಂತ್ರ ವಾದರು ಏನು.? ಇದರ ಹಿಂದೆ ಅವರ ಜೊತೆಗೆ ಸ್ಥಳೀಯ ಬೇರೆ ವ್ಯಕ್ತಿಗಳು ಕೂಡ ಸಾಮಿಲಾಗಿರಬಹುದು ಅಲ್ಲವೇ ಎಂದು ಅನಿಸದೇ ಇರಲಾರದು ... ಬೆಂಗಳೂರಿನಲ್ಲಿ ಅದೆಷ್ಟು ಗ್ಯಾಸ್ ಏಜೆನ್ಸಿ ಗಳು ಇದೆ ಅದನ್ನು ಬಿಟ್ಟು ದೂರದ ಅಂಕೋಲಾದ ಗ್ಯಾಸ್ ಏಜೆನ್ಸಿಯ ಹಿಂದೆ ಬಿದ್ದಿರುವುದು ಆ ಪತ್ರಕರ್ತರ ಸಮಾಜದ ಕಳಕಳಿ ಏನು ಎಂದು ಎದ್ದು ತೋರುತ್ತಿದೆ . ಅಂಕೋಲಾದಲ್ಲಿ ಪೋಲಿಸ್ ಇಲಾಖೆ, ಆಹಾರ ನಿರೀಕ್ಷಕರು ಇನ್ನು ಜೀವಂತವಾಗಿದ್ದಾರೆ. ಸಮಾಜ ಸುಧಾರಣೆ ಮಾಡುವ ಬೆಂಗಳೂರಿನ್ ಆ ಪತ್ರಕರ್ತ ಮಾಡಿದ ಸ್ಪ್ರಿಂಗ್ ಆಪರೇಷನ್ ಅನ್ನು ಸಂಬಂಧಿಸಿದ ಇಲಾಖೆಗೆ ಕೊಟ್ಟಿದ್ದರೆ ಅವರಿಗೆ ಶಹಭಾಸ್ ಏನ್ನಬಹುದಿತ್ತೇನೋ ಅದನ್ನು ಬಿಟ್ಟು ಸಿಲೆಂಡರ್ ಏಜೆನ್ಸಿ ಅವರಿಗೆ ಕರೆ ಮಾಡಿ ತಾವು ಮಾಡಿದ ಸ್ಪ್ರಿಂಗ್ ಆಪರೇಷನ್ ಬಗ್ಗೆ ಹೇಳಿರುವುದು ಆ ಪತ್ರಕರ್ತರು ವಸೂಲಿ ದಂದೆಗೆ ಇಳಿದಿರುವುದು ನಾಚಿಕೆಗೇಡಿನ ವಿಷಯವಾಗಿದೆ.
ಒಬ್ಬ ಮಾರಾಟವಾದ ಪತ್ರಕರ್ತ ನೂರು ಭಯೋತ್ಪಾದಕರಿಗೆ ಸಮ- ಎನ್ನುವದರ ಬದಲು ಮಾರಾಟವಾಗದ ಪತ್ರಕರ್ತ ನೂರು ಭ್ರಷ್ಟರನ್ನು ಮಟ್ಟ ಹಾಕಬಲ್ಲ ಎನ್ನುವಂತಾಗಬೇಕು.
ಆತ್ಮೀಯ ಓದುಗಾರರೇ ಮುಂದಿನ ಆಗು ಹೋಗುಗಳ ಬಗ್ಗೆ ಭಾಗ 2 ರಲ್ಲಿ ಸುದ್ದಿ ಪ್ರಕಟಿಸಲಾಗುವುದು.
ವರದಿ: ಕಿರಣ ಚಂದ್ರಹಾಸ ಗಾಂವಕರ