ಅಂಕೋಲಾ : ಪುರಲಕ್ಕಿಬೇಣಾದ ಶೇಡಗೇರಿಯಲ್ಲಿ ಕೊಂಕಣ ರೈಲ್ವೆ ಬಡಿದು ಕಾಡು ಹಂದಿ ಸಾವನ್ನಪ್ಪಿದೆ, ಈ ಘಟನೆ ತಡವಾಗಿ ಬೆಳಕಿಗೆಬಂದಿದೆ.
ಈ ದುರ್ಘಟನೆಯ ಬಗ್ಗೆ ವಿಕಾಸ ವಾಹಿನಿ ವರದಿಗಾರರಾದ ಸುಪ್ರಿಯಾ ವಿಷ್ಣು ನಾಯ್ಕ ರವರಿಗೆ ಸೆಪ್ಟೆಂಬರ್ 13ರ ಬೆಳಿಗ್ಗೆ ಸಾರ್ವಜನಿಕರೊಬ್ಬರಿಂದ ತಿಳಿದು ಬಂದಿದೆ, ವಿಷಯ ತಿಳಿದ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾಡು ಹಂದಿ ಸಾವನ್ನಪ್ಪಿರುವ ಘಟನೆ ಖಾತ್ರಿ ಪಡಿಸಿಕೊಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಆರ್.ಎಚ್ ನಾಯ್ಕ ರವರು ಹಾಗೆಯೇ ಚೇತನ್ ನಾಯ್ಕ ರವರು ಭೇಟಿ ನೀಡಿ ಕಾಡು ಹಂದಿ ಮೃತ ಪಟ್ಟು 2-3 ದಿನ ಕಳೆದಿದೆ, ಹಾಗೂ ಹಂದಿಯ ದೇಹ ಕೊಳೆಯುವ ಸ್ಥಿತಿಗೆ ತಲುಪಿದೆ ಆದರಿಂದ ಅದನ್ನು ಹತ್ತಿರವೇ ಖಾಲಿ ಪ್ರದೇಶದಲ್ಲಿ ಅಂತಿಮ ಸಂಸ್ಕಾರ ಮಾಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪಶು ವೈದ್ಯಾಧಿಕಾರಿ ಶ್ರೀನಿವಾಸ ಪಾಟೀಲ ರವರು ಕಾಡು ಹಂದಿಯ ಮ ರಣೋತ್ತರ ಪರೀಕ್ಷೆ ನಡೆಸಿದರು. ತದನಂತರ ಕಾಡು ಹಂದಿಯ ಅಂತಿಮ ಸಂಸ್ಕಾರ ಮಾಡಲಾಯಿತು. ಸ್ಥಳದಲ್ಲಿ ಉಪವಲಯ ಅರಣ್ಯಾಧಿಕಾರಿ ಆರ್. ಎಚ್. ನಾಯ್ಕ, ಗಾರ್ಡ್ ವೆಂಕಟ್ರಾಯ ನಾಯಕ, ಮಹೇಶ ಗಾಂವ್ಕರ, ಸುಧಾಕರ ನಾಯ್ಕ, ಸುಧಾಕರ ಗಾಂವ್ಕರ, ಗೊಣೆ ಗೌಡ, ಚೇತನ್ ನಾಯ್ಕ, ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.
ವರದಿ : ಸುಪ್ರಿಯಾ ವಿಷ್ಣು ನಾಯ್ಕ
ಅಂಕೋಲಾ