ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದ ಅಂಕೋಲಾ ಘಟಕದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ವಿಘ್ನ ನಿವಾರಕ ವಿನಾಯಕನನ್ನು ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯ ಸಾರಿಗೆ ಸಿಬ್ಬಂದಿಗಳು ಶ್ರದ್ದಾ, ಭಕ್ತಿ, ಸಂಭ್ರಮದಿಂದ ಘಟಕದಲ್ಲಿ ಪ್ರತಿಷ್ಠಾಪಿಸಿ, ಮೊದಲ ದಿನದಿಂದ ಇಲ್ಲಿಯವರೆಗೆ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಇಂದು ಅಂತಿಮವಾಗಿ ರಾತ್ರಿ 7 ಗಂಟೆಗೆ ಶ್ರೀ ಗಣೇಶನ ಮೂರ್ತಿ ವಿಸರ್ಜನೆ ಮೆರವಣಿಗೆ ಅಂಕೋಲಾ ಮುಖ್ಯರಸ್ತೆಯಿಂದ ತೆರಳಿ ಕೊನೆಯಲ್ಲಿ ಕೇಣಿ ಹಳ್ಳದಲ್ಲಿ ಸಮಾಪ್ತಿಗೊಳ್ಳಲಿದೆ.
ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿಸಿದ ಸಾರಿಗೆ ಘಟಕದ ಗಣೇಶ ಸಮಿತಿಯವರು.
ಈ ಹಿಂದೆ ಸಾರಿಗೆ ಘಟಕದ ಹೋಗುವ ಡಾಂಬರು ರೋಡಿನಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿ ಸಾರ್ವಜನಿಕರು ಬಿದ್ದು ಗಾಯಗೊಳ್ಳುತ್ತಿದ್ದರು.. ಸಂಬಂಧಿಸಿದ ಇಲಾಖೆಯವರು ರಸ್ತೆಯನ್ನು ದುರಸ್ತಿ ಮಾಡದೆ ಅಸಡ್ಡೆಯನ್ನು ತೋರುತ್ತಿದ್ದರು.
ಇದನ್ನು ಮನ ಗಂಡ ಶ್ರೀ ಮಹಾ ಗಣಪತಿ ಗಣೇಶೋತ್ಸವ ಸಮಿತಿಯ ಸಾರಿಗೆ ಘಟಕದ ಎಲ್ಲಾ ಸಿಬ್ಬಂದಿಗಳು ಶ್ರೀ ಘಟಕ ವ್ಯವಸ್ಥಾಪಕರ ಬಳಿ ರಸ್ತೆಯಲ್ಲಿ ಬಿದ್ದಿರುವ ಹೊಂಡವನ್ನು ಮುಚ್ಚಿಸುವ ಬಗ್ಗೆ ಚರ್ಚಿಸಿ. ನಂತರ ತುರ್ತು ದುರಸ್ತಿಯನ್ನು ಮಾಡಿ ಕಾರ್ಯರೂಪಕ್ಕೆ ತಂದಿದ್ದಾರೆ. ಘಟಕದ ಸಾರಿಗೆ ಸಿಬ್ಬಂದಿಗಳ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ