ಅಂಕೋಲಾ ಸಾರಿಗೆ ಘಟಕದಲ್ಲಿ ವಿಘ್ನ ನಿವಾರಕ ವಿನಾಯಕನ ಆಗಮನದ ಮಹೋತ್ಸವ..


07 Sep 2024, 04:50 pm, 866 reads

ಅಂಕೋಲಾ:  ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದ ಅಂಕೋಲ ಘಟಕದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಂದು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ವಿಘ್ನ ನಿವಾರಕ ವಿನಾಯಕನನ್ನು ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯ ಸಾರಿಗೆ ಸಿಬ್ಬಂದಿಗಳು ಶ್ರದ್ದಾ, ಭಕ್ತಿ , ಸಂಭ್ರಮದಿಂದ ಘಟಕದಲ್ಲಿ ಬರಮಾಡಿಕೊಂಡರು. ವಿಘ್ನ ನಿವಾರಕನಿಗೆ ಪ್ರಥಮ ಪೂಜೆ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಯಿತು. ಪೂಜೆಯ ಸಂದರ್ಭದಲ್ಲಿ ವಿಶೇಷವಾಗಿ ಮೋದಕ, ಪಂಚಕಜ್ಜಾಯ, ಚಕ್ಕುಲಿ,ತೆಂಗಿನಕಾಯಿ, ಹೂವು, ಪತ್ರಿ, ಮುಂತಾದವುಗಳನ್ನು ಸಮರ್ಪಿಸಿದ್ದಾರೆ.

ಜೊತೆಗೆ ಅಂಕೋಲಾ ಘಟಕದ ವಿನಾಯಕನ ಕೃಪೆಯಿಂದ ಸಾರಿಗೆ ಘಟಕದ ವಾಹನಗಳು ಅಪಘಾತವಾಗದೆ ಸುರಕ್ಷಿತ ಕಾರ್ಯಾಚರಣೆಗೆ ಈ ದೇವರ ಆಶೀರ್ವಾದ ಸದಾ ಇರಲಿ.ವಿಘ್ನ ವಿನಾಶಕನ ಕೃಪೆಯಿಂದ ವಿಘ್ನ ಗಳನ್ನು ದೂರ ಮಾಡಿ ಸಮಸ್ತ ನಾಡಿನ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಲಾಯಿತು.


ಈ ಬಾರಿ ಅಂಕೋಲಾ ಸಾರಿಗೆ ಘಟಕದ ಶ್ರೀ ಮಹಾ ಗಣಪತಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮತಿ ಚೈತನ್ಯ ಅಗಳಗಟ್ಟಿ ( ಘಟಕ ವ್ಯವಸ್ಥಾಪಕರು ಅಂಕೋಲಾ. ) ಹಾಗೂ ಉತ್ಸವ ಸಮಿತಿಯ ಅಧ್ಯಕ್ಷತೆಯನ್ನು ದಿಲೀಪ ಜೆ. ನಾಯ್ಕ್ ಚಾಲಕರು,ಇವರು ವಹಿಸಿಕೊಂಡಿದ್ದಾರೆ. ಹಾಗೂ ಸದರಿ ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯಲ್ಲಿ ಸಾರಿಗೆ ಘಟಕದ 25ಕ್ಕು ಹೆಚ್ಚು ಸಿಬ್ಬಂದಿಗಳು ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡ್ದು ಅಚ್ಚುಕಟ್ಟಾಗಿ ಜೈ ಗಣೇಶನ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಕಲ್ಪ ತೊಟ್ಟಿದ್ದಾರೆ.ಸಾರಿಗೆ ಘಟಕದ ಸಾಕಷ್ಟು ಚಾಲಕ -ನಿರ್ವಾಹಕರು ತಮ್ಮ ಕೈಲಾದಷ್ಟು ಸೇವೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.


ಘಟಕದ ಬಸ್ ನಿರ್ವಹಕಿ ನಿಂಗರಾಜಮ್ಮ ಈ ಬಾರಿಯ ಗಣೇಶನ ಮೂರ್ತಿಯನ್ನು ಮಾಡಿಸಿಕೊಟ್ಟಿದ್ದಾರೆ. ಸತ್ಯನಾರಾಯಣ ಕಥೆಯನ್ನು ಪೂಜೆ ಪ್ರಸಾದವನ್ನು ನಾಗರಾಜ ಮತ್ತು ಪಲ್ಲವಿ ದಂಪತಿಗಳು ವಹಿಸಿಕೊಂಡಿದ್ದಾರೆ. ಸತ್ಯನಾರಾಯಣ ಕಥೆಯ ಅನ್ನಪ್ರಸಾದವನ್ನು ಅಂಕೋಲಾ ಘಟಕದ ಸಮಸ್ತ ಸಾರಿಗೆ ಸಿಬ್ಬಂದಿಗಳು ಕೈಜೋಡಿಸಿದ್ದಾರೆ. ತಮ್ಮ ಬಿಡುವಿಲ್ಲದ ಸಮಯದಲ್ಲೂ ಕೂಡ ತಮ್ಮ ಇತರೆ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯ ಬಸ್ಸಿನ ಕಾರ್ಯಾಚರಣೆಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಅಂಕೋಲಾ ಘಟಕದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಅನ್ನ ಸಂತರ್ಪಣೆಯನ್ನು ಹಮ್ಮಿಕೊಂಡು ಯಶಸ್ವಿಯ ಹಾದಿಯಲ್ಲಿ ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯನ್ನು ಮುನ್ನಡೆಸುತ್ತಿರುವ ಸಾರಿಗೆ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.


ವರದಿ: ಕಿರಣ ಚಂದ್ರಹಾಸ ಗಾಂವಕರ




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: