ಬಿನ್ ಶೇತ್ಕಿಯಾದ ಜಮೀನುಗಳ ರಸ್ತೆ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಪಾಲಿಸುವಂತೆ ನ್ಯಾಯವಾದಿಗಳು ಹಾಗೂ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ಶ್ರೀ ನಾಗನಂದ ಐ.ಬಂಟ್ ಜೊತೆಗೆ ಉಮೇಶ್ ನಾಯ್ಕ್ ವಕೀಲರು ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದರು.


04 Sep 2024, 11:07 pm, 477 reads

ಅಂಕೋಲಾ : ಪುರಸಭೆಯ ಮುಖ್ಯ ಅಧಿಕಾರಿ ಹೆಚ್. ಅಕ್ಷತಾ ಹಾಗೂ ನೂತನ ಪುರಸಭೆಯ ಅಧ್ಯಕ್ಷರಾದ ಸೂರಜ್ ನಾಯ್ಕ್ ಅವರಿಗೆ ಏಕ ನಿವೇಶನ ರಸ್ತೆಯ ಹಸ್ತಾಂತರದ ಬಗ್ಗೆ ಪುರಸಭೆಯಿಂದ ಅನುಸರಿಸಬೇಕಾದ ಕ್ರಮದ ಬಗ್ಗೆ ನ್ಯಾಯವಾದಿಗಳು ನಾಗನಂದ ಐ ಬಂಟ.ಹಾಗೂ ಉಮೇಶ್ ನಾಯ್ಕ್ ವಕೀಲರು ಮನವಿಯನ್ನು ಸಲ್ಲಿಸಿದ್ದರು.

ಸಾರ್ವಜನಿಕರ ಪರವಾಗಿ ವಕೀಲರು ಸಲ್ಲಿಸಿದ ಮನವಿಯಲ್ಲಿ ವಿಷಯಗಳು ಈ ಕೆಳಗಿನಂತಿದೆ.

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬಿನ್ ಶೇತ್ಕಿ ಜಮೀನು ಗಳಿಗೆ ಈ ಸ್ವತ್ತು ದಾಖಲಾತಿಯನ್ನು ಪಡೆಯುವುದು ಹಾಲಿ ನಿಯಮದಂತೆ ಕಡ್ಡಾಯವಾಗಿರುತ್ತದೆ. ಸದ್ರಿ ಈ ಸ್ವತ್ತು ದಾಖಲೆಯನ್ನು ಪಡೆಯುವಾಗ ಏಕ ನಿವೇಶನ ಅನುಮೋದನೆ ಸಂದರ್ಭದಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ ಇಲಾಖೆಯವರುರಸ್ತೆ ಹಸ್ತಾಂತರ ಪತ್ರವನ್ನು ಬರೆಸಿಕೊಂಡು ನಗರ ಯೋಜನೆ ಇಲಾಖೆಯ ವರದಿಯಂತೆ ಜಮೀನನ್ನು ರಸ್ತೆ ಸಲುವಾಗಿ ಕಾಯ್ದಿರಿಸುವ ಕ್ರಮವು ಹಲವು ದಿನಗಳಿಂದ ನಡೆದುಕೊಂಡು ಬಂದಿರುತ್ತದೆ. ಸಾರ್ವಜನಿಕರು ನಗರ ಯೋಜನೆ ಇಲಾಖೆಯ ಲೇ ಔಟ್ ವರದಿಯಂತೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ ಇಲಾಖೆಗೆ ರಾಜ್ಯಪಾಲರ ಹೆಸರಿನಲ್ಲಿ ರಸ್ತೆ ಬಗ್ಗೆ ತಮ್ಮ ಜಮೀನನ್ನು ಹಸ್ತಾಂತರ ಪತ್ರವನ್ನು ಬರೆದುಕೊಡುವುದರ ಮೂಲಕ ಹಸ್ತಾಂತರಿಸುತ್ತಿದ್ದರು. ಅಲ್ಲದೇ ಅಭಿವೃದ್ದಿ ಶುಲ್ಕವನ್ನೂ ಸಹ ಭರಣ ಮಾಡುತ್ತಿದ್ದರು. ಆದರೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ರಿಟ್ ಅರ್ಜಿ ಸಂಖ್ಯೆ: 20205/2023 ನೇದರಲ್ಲಿ ಅದೇಶವನ್ನು ಹೊರಡಿಸಿ ಸದ್ರಿ ಹಸ್ತಾಂತರ ಪತ್ರವನ್ನು ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ ಇಲಾಖೆಯವರು ಪರಿಹಾರವನ್ನು ನೀಡದೆ ಜಮೀನನ್ನು ವಶಪಡಿಸಿಕೊಳ್ಳತಕ್ಕದ್ದಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ. 


ಆದ್ದರಿಂದ ಪುರಸಭೆ ಅಂಕೋಲಾದಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ಹಸ್ತಾಂತರ ಪ್ರಕ್ರಿಯೆಯನ್ನು ತಡೆಗಟ್ಟಬೇಕಾಗಿ ಮತ್ತು ಮುಂದಿನ ದಿನಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗಿ ಸಾರ್ವಜನಿಕರ ಪರವಾಗಿ ಏನಂತಿಸಿಕೊಳ್ಳುತ್ತೇನೆ. ಒಂದು ವೇಳೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ ಯಾವುದೇ ಜಮೀನು ಹಸ್ತಾಂತರ ಪ್ರಕ್ರಿಯೆ ನಡೆದಲ್ಲಿ ಅದು ನ್ಯಾಯಾಂಗ ನಿಂದನೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಾನ್ಯರಾದ ತಾವುಗಳು ಈ ಹಿಂದಿನ ಪ್ರಕ್ರಿಯೆಯನ್ನು ಕೈಬಿಟ್ಟು ಸಾರ್ವಜನಿಕರಿಗೆ ಈ ಸ್ವತ್ತು ದಾಖಲಾತಿಗಳನ್ನು ವಿತರಿಸಬೇಕಾಗಿ ವಿನಂತಿಸಿದ್ದಾರೆ.



ವರದಿ: ಕಿರಣ ಚಂದ್ರಹಾಸ ಗಾಂವಕರ 



ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: