ಅಂಕೋಲಾ : ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಪೀಠವು ತನ್ನ ರಿಟ್ ಪಿಟಿಷನ್ ನಲ್ಲಿ ಬಿನ್ ಶೇತ್ಕಿಯಾದ ಜಮೀನು ಗಳಿಗೆ ಈ ಸ್ವತ್ತು ಪಡೆಯುವ ಸಂದರ್ಭ ದಲ್ಲಿ ನಗರ ಯೋಜನೆ ಇಲಾಖೆಯ ಲೇಔಟ್ ವರದಿಯಂತೆ ನಗರಸಭೆ ಪುರಸಭೆ ಅಥವಾ ಪಟ್ಟಣ ಪಂಚಾಯತ್ ನವರು ರಸ್ತೆ ಹಸ್ತಾಂತರವನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರಿಂದ ರಸ್ತೆ ಹಸ್ತಾಂತರವನ್ನು ಉಚಿತವಾಗಿ ಮಾಡಿಕೊಳ್ಳದಂತೆ, ಆದೇಶವನ್ನು ಹೊರಡಿಸಿದೆ ಎಂದು ನ್ಯಾಯವಾದಿ ಹಾಗೂ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ಶ್ರೀ ನಾಗನಂದ ಐ ಬಂಟ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಇಂದು ತಿಳಿಸಿರುತ್ತಾರೆ.
ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಪೀಠ ತನ್ನ ರಿಟ್ ಆದೇಶದಲ್ಲಿ ಯಾವುದೇ ಪರಿಹಾರವನ್ನು ನೀಡದೆ, ಏಕ ನಿವೇಶನ ಅನುಮೋದನೆ ಸಂದರ್ಭದಲ್ಲಿ ರಸ್ತೆಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ಆ ಮಾಲೀಕರಿಗೆ ಪರಿಹಾರವನ್ನು ನೀಡಿಯೇ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳತಕ್ಕದ್ದು. ಎಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಪೀಠ ರಿಟ್ ಸಂಖ್ಯೆ :25205/2023 ನೇದರಲ್ಲಿ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ. ಆದ್ದರಿಂದ ಅಂಕೋಲಾ ಪುರಸಭೆ ಸೇರಿದಂತೆ ರಾಜ್ಯದ ನಗರ ಸಭೆ,ಪಟ್ಟಣ ಪಂಚಾಯಿತಿಗಳು ಈ ಸ್ವತ್ತು ವಿತರಿಸುವಾಗ ಬಿನ್ ಶೇತ್ಕಿ ಲೇ ಔಟ್ ಅನುಮೋದನೆ ಸಂದರ್ಭದಲ್ಲಿ ಉಚಿತವಾಗಿ ಜಮೀನನ್ನು ಸ್ವಾದಿನ ಪಡಿಸಿಕೊಳ್ಳುವ ಪ್ರಕ್ರಿಯೆ ಕೊನೆಗೊಳ್ಳಬೇಕಿದೆ. ಒಂದು ವೇಳೆ ಹಿಂದಿನ ಪ್ರಕ್ರಿಯೆ ಮುಂದುವರೆದಲ್ಲಿ ಅದು ನ್ಯಾಯಾಂಗ ನಿಂದನೆ ಆಗಲಿದೆ. ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ನ್ಯಾಯವಾದಿ ಹಾಗೂ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ನಾಗಾನಂದ ಐ ಬಂಟ್ ಈ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ. ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಮನವಿ ನೀಡುವುದಾಗಿ ಅವರು ತಿಳಿಸಿದ್ದಾರೆ..
ವರದಿ : ಕಿರಣ ಚಂದ್ರಹಾಸ ಗಾಂವಕರ