ಅಂಕೋಲಾ: ಕಳೆದ ಮಂಗಳವಾರ ಅಂಕೋಲಾ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಿದ್ದ ಕಬ್ಬಿಣದ ಎಂಗಲ್ಪಟ್ಟಿಯು ಮುರಿದ ಬಗ್ಗೆ ಅಪಾಯವಾಗುವ ಮುನ್ಸೂಚನೆ ಬಗ್ಗೆ ವಿಕಾಸ ವಾಹಿನಿ ಸೇರಿದಂತೆ ಅನೇಕ ಮಾಧ್ಯಮಗಳು ಸುದ್ದಿಯನ್ನು ಬಿತ್ತಾರ ಮಾಡಿದ್ದವು.
ಆದರೆ ದಪ್ಪ ಚರ್ಮದ ಅಂಕೋಲಾ ಸಾರಿಗೆ ಘಟಕದ ಅಧಿಕಾರಿಗಳು ಸದರಿ ಗುತ್ತಿಗೆಯನ್ನು ನಿರ್ವಹಿಸಿದ ಗುತ್ತಿಗೆದಾರರನ್ನು ಸದರಿ ಜಾಗಕ್ಕೆ ಕರೆಸಿ ಕಬ್ಬಿಣದ ಎಂಗಲ್ಪಟ್ಟಿಯನ್ನು ತೆಗೆದು ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಮತ್ತದೇ ನಿರ್ಲಕ್ಷವನ್ನು ತೋರಿದ್ದಾರೆ..
ಒಂದು ವೇಳೆ ಕಬ್ಬಿಣದ ಎಂಗಲ್ ಪಟ್ಟಿಯಿಂದ ಸಾವು ನೋವು ಸಂಬವಿಸಿದರೆ ಅಂಕೋಲಾ ಹೊತ್ತಿ ಉರಿಯುವುದರಲ್ಲಿ ಸಂದೇಹವಿಲ್ಲ. ಅಂಕೋಲಾ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.