ಅಂಕೋಲಾ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ತುಂಡಾದ ಕಬ್ಬಿಣದ ಎಂಗಲ್ ಪಟ್ಟಿ... ಪ್ರಯಾಣಿಕರ ಜೀವಕ್ಕೆ ಆಪತ್ತು... ತುರ್ತು ಕ್ರಮ ಕೈಗೊಳ್ಳದ ಸಾರಿಗೆ ಸಂಸ್ಥೆಯ ಅಧಿಕಾರಿಗಳು.


28 Aug 2024, 07:34 pm, 519 reads

ಅಂಕೋಲಾ: ಅಂಕೋಲಾದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಿದ ಕಬ್ಬಿಣದ ಎಂಗಲ್ ಪಟ್ಟಿ ಮಧ್ಯ ಭಾಗದಲ್ಲಿ ಮುರಿದು ಬಿದ್ದಿದೆ. ಮುರಿದು ಬಿದ್ದ ಜಾಗದಲ್ಲಿ ಹೊಂಡ ಬಿದ್ದಿದೆ. ಪ್ರತಿನಿತ್ಯ ಸಾವಿರಾರು ಬಸಗಳು ಪ್ರವೇಶ  ದ್ವಾರದ ಕಬ್ಬಿಣದ ಎಂಗಲ ಪಟ್ಟಿಯ ಮೇಲೆ ಸಾಗಬೇಕಾಗುತ್ತದೆ. ಈ ಕಬ್ಬಿಣದ ಎಂಗಲ್ ಪಟ್ಟಿಯ ಸಾಮರ್ಥ್ಯ ಕಡಿಮೆ ಇದ್ದು,ಹಲವಾರು ಬಾರಿ ಮುರಿದು ಹೋಗುತ್ತಿದೆ.. ಮುರಿದು ಬಿದ್ದಾಗ ಗುತ್ತಿಗೆ ಪಡೆದ ಏಜೆನ್ಸಿ ಅವರು ಬಂದು ತುಕ್ಕು ಹಿಡಿದ ಕಬ್ಬಿಣಕ್ಕೆ ವೆಲ್ಡಿಂಗ್ ಮಾಡಿ ತುರ್ತು ದುರಸ್ತಿ ಮಾಡಿ ಹೋಗುತ್ತಿದ್ದಾರೆ ಹೊರತು ಹೊಸ ಕಬ್ಬಿಣದ ಎಂಗಲ್ ಪಟ್ಟಿಯನ್ನು ಹಾಕಲು ನಿರ್ಲಕ್ಷ ವಹಿಸುತ್ತಿದ್ದಾರೆ.


ಇಂದು ಬೆಳಗಿನ ಜಾವ ಕಬ್ಬಿಣದ ಎಂಗಲ್ ಪಟ್ಟಿ ಮುರಿದು ಹೋಗಿದ್ದು ರಾತ್ರಿ ಸಮೀಪಿಸಿದರು ಕೂಡ ಯಾವನೇ ಒಬ್ಬ ಅಧಿಕಾರಿಗಳು ದುರಸ್ತಿಗೆ ತುರ್ತು ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಬಸ್ ಗಳು ಯಾವುದೇ ವಾಹನಗಳು ಪಲ್ಟಿಯಾಗಿ ಸಾವು ನೋವು ಸಂಭವಿಸಿದರೆ ಅದಕ್ಕೆ ಅಂಕೋಲಾ ಘಟಕದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನೇರ ಹೊಣೆ ಹೊರಬೇಕಾಗುವುದೆಂದು ಸಾರ್ವಜನಿಕರು ಕಿಡಿಕಾರಿದ್ದಾರೆ.


ವಿಕಾಸ ವಾಹಿನಿ ವರದಿ 



ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: