ಅಂಕೋಲಾ: ಅಂಕೋಲಾ ತಾಲೂಕಿಗೆ 2024ರ ಫೆಬ್ರವರಿ ತಿಂಗಳಿನಲ್ಲಿ ಅಧಿಕಾರವಹಿಸಿಕೊಂಡಿದ್ದ ಸಿ.ಪಿ.ಐ ಶ್ರೀಕಾಂತ ತೋಟಗಿ ಅವರಿಗೆ ಅಂಕೋಲಾ ತಾಲೂಕಿನಿಂದ ಬೆಂಗಳೂರಿಗೆ ವರ್ಗಾವಣೆ ಆದೇಶ ಆಗಿದ್ದು, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿ.ಪಿ.ಐ ಶ್ರೀಕಾಂತ ತೋಟಗಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಅಂಕೋಲಾದಲ್ಲಿ ನಡೆಯುತ್ತಿರುವ ಅಕ್ರಮ ಮಟಕಾ ದಂದೆಗೆ ಕಡಿವಾಣ ಹಾಕುವುದರ ಮೂಲಕ ದಕ್ಷ ಅಧಿಕಾರಿ ಎನಿಸಿಕೊಂಡಿದ್ದ ಸಿಪಿಐ ಶ್ರೀಕಾಂತ ತೋಟಗಿ ಇವರ ಸೇವಾ ಅವಧಿಯಲ್ಲಿ ಅಂಕೋಲಾದಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್ ಬಿದಿತ್ತು. ಅಂಕೋಲದಲ್ಲಿ ಕೆಲಸ ಮಾಡಿದ ಸೇವಾ ಅವಧಿ ಕಡಿಮೆ ಇದ್ದರೂ ಅಂಕೋಲಾದ ಪ್ರಜ್ಞಾವಂತ ನಾಗರಿಕರ ಮನಸ್ಸಿನಲ್ಲಿ ಈ ಅಧಿಕಾರಿ ನೆಲೆಉರಿದ್ದಾರೆ.
ಇದೀಗ ಅಂಕೋಲಾಕ್ಕೆ ಚಂದ್ರಶೇಖರ ಮಠಪತಿ ಸಿ.ಪಿ.ಐ ಧಾರವಾಡ ಮಹಿಳಾ ಠಾಣೆಯಿಂದ ವರ್ಗಾವಣೆಯಾಗಿ ಅಂಕೋಲಾ ಠಾಣೆಯಲ್ಲಿ 1/09/2024 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ಇದ್ದು ಕಾದು ನೋಡಬೇಕಾಗಿದೆ.
ಇವತ್ತಿನ ಸಿಪಿಐ ಶ್ರೀಕಾಂತ್ ತೋಟಗಿ ಇವರ ಬಿಳ್ಕೊಡುಗೆ ಸಮಾರಂಭದಲ್ಲಿ ಕಾಂಗ್ರೆಸನ ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಜಾತ ಗಾಂವಕರ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ, ಹಾಗೂ ಪ್ರಮುಖರಾದ ಸುರೇಶ ನಾಯ್ಕ,ಪ್ರದೀಪ್ ನಾಯಕ, ಮಂಜುನಾಥ ನಾಯ್ಕ ಮುಂತಾದವರು ಉಪಸಿತರಿದ್ದರು.
ವಿಕಾಸ ವಾಹಿನಿ ವರದಿ