ಭಟ್ಕಳ ಪೊಲೀಸರ ದಂಡದ ಹಣ ಚಿನ್ನದ ವ್ಯಾಪಾರಿ ಖಾತೆಗೆ - ಭಟ್ಕಳ ಪಿಎಸ್ಐ ಮೇಲೆ ಸಾವಿರ ಪ್ರಶ್ನೆ...! ಎಂಬ ಸುದ್ದಿಗೆ ಸ್ಪಷ್ಟೀಕರಣ ನೀಡಿದ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು.


25 Aug 2024, 11:12 pm, 287 reads

ಭಟ್ಕಳ : ಭಟ್ಕಳದಲ್ಲಿ ಹೆಲ್ಮೆಟ್ ರಹಿತ ದಂಡದ ಮೊತ್ತ ಪೋಲಿಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪರಿಯ ಖಾತೆಗೆ ವರ್ಗಾವಣೆ ಆಗುತ್ತಿರುವ ಕುರಿತು ಮಾಧ್ಯಮಗಳು ಇಂದು ವರದಿಯನ್ನು ಬಿತ್ತರಿಸಿತ್ತು.. ಸದರಿ ವರದಿಯು ಸಂಚಲನವನ್ನು ಉಂಟು ಮಾಡಿತ್ತು, ಸಾರ್ವಜನಿಕರು ಹೆಲ್ಮೆಟ್ ಹಾಕದೆ ಸಂಚರಿಸುತ್ತಿರುವ ವಾಹನಗಳನ್ನು ಭಟ್ಕಳ ಪೊಲೀಸರು ಹಿಡಿದು ದಂಡ ಹಾಕಿ ರಶೀದಿಯಲ್ಲಿ ನಗದು ಎಂದು ನಮೂದಿಸಿದ್ದಾರೆ. ಆದರೆ ದಂಡದ ಹಣವನ್ನು ಆನ್ಲೈನ್ ಮೂಲಕ ಚಿನ್ನದ ವ್ಯಾಪಾರಿಯ ಖಾತೆಗೆ ಹಾಕಿಸಿದ್ದಾರೆ . ಇದರಲ್ಲಿ ಏನಾದರೂ ಮೋಸದಾಟವಿದೆಯೇ? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ಮಾಡುವಂತೆ ಸುದ್ದಿ ಬಿತ್ತರ ಮಾಡಲಾಗಿತ್ತು. ಈ ಸುದ್ದಿಯು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಸ್ಪಷ್ಟಿಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ.

ಸ್ಪಷ್ಟಿಕರಣ 

ದಿನಾಂಕ: 24-08-2024 ರಂದು ಬೆಳಿಗ್ಗೆ 10-31 ಗಂಟೆಗೆ ಭಟ್ಕಳ ಸಹರ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ಯಲ್ಲಪ್ಪ ಎಚ್.ಎಂ.ಪಿ.ಎಸ್. ಐ ತನಿಖೆ-01 ರವರು ವಾಹನ ಸಂಚಾರ ನಿಯದು ಉಲ್ಲಂಘನೆ ಮಾಡುವ ಸವಾರರ ಮೇಲೆ ಪ್ರಕರಣ ದಾಖಲಿಸುತ್ತಿರುವ ಸಂದರ್ಭದಲ್ಲಿ, ದ್ವಿ- ಚಕ್ರ ವಾಹನ ಸಂಖ್ಯೆ: ಕೆಎ 47 ಆರ್ 5517 ನೇದರ ಮೇಲೆ ಉದಯ ನಾಯ್ಕ ಇತನು ಹೆಲೈಟ್ ಇಲ್ಲದೇ ಬರುತ್ತಿರುವುದನ್ನು ನೋಡಿ ತಡೆದು ನಿಲ್ಲಿಸಿ ಮೋಟರ ವಾಹನ ಕಾಯ್ದೆ ಪ್ರಕಾರ : K/473/6614/537 RIDING WITHOUT HELMET CHALLAN BY CASH ನೀಡಿ 500-00 ದಂಡವನ್ನು ಪಾವತಿಸುವಂತೆ ತಿಳಿಸಿದ್ದು ಇರುತ್ತದೆ. ಉದಯ ನಾಯ್ಕ ಇತನ ಹತ್ತಿರ ನಗದು ಹಣ ಇಲ್ಲದೇ ಇರುವುದರಿಂದ ಆ ವೇಳೆಗೆ ಸದರಿ ಸ್ಥಳಕ್ಕೆ ಬಂದ ವಿನಾಯಕ ಮಾರುತಿ ಶೇಟ್ ಇತನು &ಉದಯ ನಾಯ್ಕ ಇಬ್ಬರೂ ಒಬ್ಬರಿಗೊಬ್ಬರು ಪರಿಚಯಸ್ಥರಿದ್ದು, ಉದಯ ನಾಯ್ಕ ಇತನು ತನ್ನ ಬಳಿ ನಗದು ಇಲ್ಲದಿರುವುದರಿಂದ ವಿನಾಯಕ ಮಾರುತಿ ಶೇಟ್ ಇತನ ಮೊಬೈಲ್ ನಂ: 7760339244 ನೇದಕ್ಕೆ ಪೋನ್ ಪೇ ಮಾಡಿದನು. ನಂತರ ವಿನಾಯಕ ಮಾರುತಿ ಶೇಟ್ ಇತನು ದಂಡದ ರೂಪದಲ್ಲಿ ನಗದು 500-00 ರೂ. ಯಲ್ಲಪ್ಪ ಎಚ್.ಎಂ.ಪಿ.ಎನ್.ಐ ರವರಿಗೆ ನೀಡಿದ್ದು ಇರುತ್ತದೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಟ್ರಾಫಿಕ್ ಚಲನ ದಂಡದ ಪಾವತಿಯನ್ನು ಡಿಜಿಟಲ್ ಯುಪಿಐ ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆ ಇದ್ದು, ಆದರೆ ಪಿಎಸ್‌ಐ ರವರು ನೇರವಾಗಿ ದಂಡದ ಹಣವನ್ನು ಯುಪಿಐ ಮೂಲಕ ಸ್ವೀಕರಿಸಿಕೊಳ್ಳದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.


ಈ ಕುರಿತು ಕುಲಂಕುಶವಾಗಿ ವಿಚಾರಣೆ ಮಾಡಿ ವರದಿ ನೀಡಲು ಡಿ.ಎಸ್.ಪಿ ಭಟ್ಕಳರವರಿಗೆ ಸೂಚಿಸಿದ್ದು, ವರದಿ ಬಂದ ನಂತರ ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಇಲಾಖಾ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು.ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 

ಅಂಕೋಲಾ 



ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: