ಅಂಕೋಲಾ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟ: ಅಧ್ಯಕ್ಷ- ಸಾಮಾನ್ಯ ವರ್ಗ : ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


06 Aug 2024, 03:45 pm, 296 reads

ಅಂಕೋಲಾ: ಅಂಕೋಲಾ ಪುರಸಭೆಯು ಹಲವು ದಿನಗಳಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಲ್ಲದೆ ಜನಪ್ರತಿನಿಧಿಗಳ ಆಡಳಿತ ನಿಶಬ್ದವಾಗಿದ್ದು . ಇಂದು ಎರಡನೇ ಬಾರಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದ್ದು ಅಧ್ಯಕ್ಷ- ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ಎಂಬ ಮೀಸಲಾತಿ ಪ್ರಕಟವಾಗಿದೆ..... ಅಂಕೋಲಾ ಪುರಸಭೆಯು ಅಭಿವೃದ್ಧಿಯಡಿಗೆ ಸಾಗುತ್ತಿದ್ದು ಅದನ್ನು ಮುನ್ನಡೆಸಲು ಯೋಗ್ಯವಾದ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದು ಅತ್ಯಮೂಲ್ಯವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ......


ಎರಡು ಪಕ್ಷಗಳ ಸಮಾಬಲ

ಅಂಕೋಲಾ 23 ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ ಹುಲಿದೇವರವಾಡ ವಾರ್ಡ್ ನ ಸದಸ್ಯರಾದ ಜಗದೀಶ ನಾಯಕ ಅವರು ನಿಧನ ಹೊಂದಿದ್ದರಿಂದ ಪ್ರಸ್ತುತ ಪುರಸಭೆಯಲ್ಲಿ 22 ಸದಸ್ಯರಿದ್ದು 9 ಕಾಂಗ್ರೆಸ್ ಬೆಂಬಲಿತರು ಹಾಗೂ 9 ಬಿಜೆಪಿ ಬೆಂಬಲಿತರು ಮತ್ತು ನಾಲ್ಕು ಪಕ್ಷೇತರ ಸದಸ್ಯರುಗಳಿದ್ದು ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನ ಯಾರ ಕೈ ಸೇರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: