ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ಚಾಲ್ತಿಯಲ್ಲಿರುವ ವ್ಯಕ್ತಿಗೆ ಪೋಲಿಸ್ ವೆರಿಫಿಕೇಷನ್ ಲೆಟರ್ ನೀಡಿರುವ ಶಂಕೆ : ನೊಂದ ಮಹಿಳೆಯಿಂದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು.


14 Aug 2024, 01:44 pm, 1593 reads

ಕರ್ನಾಟಕದಲ್ಲಿ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಉದ್ಯೋಗ, ಪಾಸ್ಪೋರ್ಟ್, ಮತ್ತು ಇತರ ಸರ್ಕಾರಿ& ಖಾಸಗಿ ಸೇವೆಗಳಿಗೆ ಅಗತ್ಯ ವಿರುವ ದಾಖಲೆಗಳನ್ನು ಪರಿಶೀಲಿಸಲು ಮುಖ್ಯವಾಗಿದೆ. ಆದರೆ ಅಂಕೋಲದಲ್ಲಿ ಒಂದು ಪ್ರಕರಣ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ಈ ವೆರಿಪಿಕೇಶನ್ ನೀಡಲಾಗಿದೆ ಎಂಬ ಶಂಕೆ ಉಂಟಾಗಿದೆ.

ನೊಂದ ಮಹಿಳೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಅಂಕೋಲಾ ಪೊಲೀಸ್ ಠಾಣೆ ವಿರುದ್ಧ ದೂರು ನೀಡಲು ಕಾರಣವೇನು? ಏನಾಗಿತ್ತು ಪ್ರಕರಣ?

ಅಂಕೋಲಾ ತಾಲೂಕಿನ ಬೇಲಿಕೇರಿ ಗ್ರಾಮದ ಬೋಗ್ರಿ ಗದ್ದೆ ನಿವಾಸಿಗಳಾದ ಗೀತಾ ವಿನಾಯಕ ನಾಯ್ಕ ಎಂಬುವರು ತಮ್ಮ ಪಕ್ಕದ ನಿವಾಸಿಯೊಬ್ಬ ಸಾರ್ವಜನಿಕ ಗ್ರಾಮ ಪಂಚಾಯತ್ ಕುಡಿಯುವ ಬಾವಿಯ ನೀರನ್ನು ತರಲು ಹೋದಾಗ್ ಅವಾಚ್ಯ ಶಬ್ದಗಳಿಂದ ಬಯ್ಯೋದು ಕೊಲೆ ಬೆದರಿಕೆ ಮುಂತಾದ ಕಾರಣಗಳಿಂದ ಅಂಕೋಲಾ ಪೊಲೀಸ್ ಠಾಣೆಗೆ ದೂರನ್ನು 2022 ರಲ್ಲಿ ಸಲ್ಲಿಸಿದರು. ಸದರಿ ದೂರನ್ನು ಪೊಲೀಸರು ಸ್ವೀಕೃತಿ ತೆಗೆದುಕೊಂಡು NC ಮಾಡಿ ಕಳುಹಿಸಿದ್ದರು. ಹೀಗೆ ನೀರಿಗಾಗಿ ಮುಂದುವರೆದ ಜಗಳದಿಂದಾಗಿ ತೀರಾ ವಿಕೋಪಕ್ಕೆ ಹೋಗಿ ಜೀವ ಭಯದಿಂದ ಮಹಿಳೆ ಮಾನ್ಯ ಜೆಎಂಎಫ್‌ಸಿ ಅಂಕೋಲಾ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸುವಂತಾಯ್ತು . ಸದರಿ ದೂರನ್ನು ಮಾನ್ಯ ನ್ಯಾಯಾಲಯವು ಅಂಗೀಕರಿಸಿ ಅಂಕೋಲಾ ಪೊಲೀಸ್ ಠಾಣೆಗೆ ಮಹಿಳೆಯ ದೂರನ್ನು ಸ್ವೀಕರಿಸಿಕೊಂಡು ಪ್ರಕರಣವನ್ನು ದಾಖಸಿಕೊಳ್ಳಲು ಆದೇಶ ಮಾಡಿತ್ತು. ಆರೋಪಿಗಳ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0035/2023 ಹಾಗೂ ಐಪಿಸಿ ಕಲಂ 560.34.504.323.324 ರಡಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ವಿಚಾರಣೆ ಅಂಕೋಲಾ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುತ್ತದೆ.


ಮುಂದುವರೆದ ಜಗಳದಿಂದಾಗಿ ಮಹಿಳೆ ಮಾಡಿದ್ದೇನು?

ಸಾರ್ವಜನಿಕ ಕುಡಿಯುವ ನೀರಿಗೆ ಅಡ್ಡಪಡಿಸುತ್ತಿರುವ ಕುರಿತು ಮಹಿಳೆ ನ್ಯಾಯಕ್ಕಾಗಿ ಬೆಲೇಕೆರಿ ಪಂಚಾಯಿತಿ ಸುತ್ತಿದಳು. ಆರೋಪಿಯು ಮಹಿಳೆಯ ವಿರುದ್ಧ ತನ್ನ ಹಗೆತನವನ್ನು ಇನ್ನೆಷ್ಟು ಸಾಧಿಸಲು ಹೊರಟಿದ್ದ ಎನ್ನಲಾಗಿದೆ . ಈ ಮಧ್ಯೆ ಆರೋಪಿ ತನ್ನ ಕೋಪದ ಬರದಲ್ಲಿ ಗೀತಾ ರವರನ್ನು ಉದ್ದೇಶಿಸಿ ತಾನು ಸಿಬರ್ಡ್ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ತನ್ನನ್ನು ಏನು ಮಾಡಲಿಕ್ಕೆ ಸಾಧ್ಯ ಇಲ್ಲ ಪೋಲಿಸ್ ಇಲಾಖೆ ನನ್ನ ವಕೀಲರು ಹೇಳಿದಂತೆ ಕೇಳುತ್ತಾರೆ ಎಂದು ಬೀಗ ತೊಡಗಿದ್ದ. ಆರೋಪಿಯ ಈ ಮಾತನ್ನೇ ಕೇಳಿ ಅಸ್ತ್ರವಾಗಿರಿಸಿಕೊಂಡ ಮಹಿಳೆ ತನ್ನ ವಕೀಲರ ಮೂಲಕ ಪ್ರಕರಣ ಚಾಲ್ತಿಯಲ್ಲಿದ್ದರೂ ಕ್ರಿಮಿನಲ್ ಪ್ರಕರಣವುಳ್ಳ ಹಾಗೂ ಪ್ರಕರಣ ಚಾಲ್ತಿಯಲ್ಲಿರುವ ತನ್ನ ಮನೆಯ ಹತ್ತಿರದ ತಾನು ಪ್ರಕರಣದ ಹೂಡಿದ್ದ ಆರೋಪಿಯ ವಿರುದ್ಧ ಸಿಬರ್ಡ್ ನೌಕಾ ನೆಲೆಯ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದು, ಭಾರತೀಯ ಅಂಚೆ ಮೂಲಕ ಕಳುಹಿಸಿದ ಈ ಪತ್ರ ನೌಕ ನೆಲೆಯ ಅಧಿಕಾರಿಗಳಿಗೆ ಯಾವುದೋ ಕಾರಣದಿಂದ ತಲುಪದೇ ವಾಪಾಸ್ಸಾಗಿದೆ.

ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಮಹಿಳೆಗೆ ಪೊಲೀಸ್ ವೆರಿಫಿಕೇಷನ್ ಮಾಹಿತಿ ದೊರಕಿಸಲು ವಿಫಲರಾದ ಅಂಕೋಲಾ ಪೊಲೀಸ್ ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿ:

ಗೀತಾ ವಿನಾಯಕ ನಾಯ್ಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಅಂಕೋಲದಲ್ಲಿ ನೀಡಿರುವ ಪೊಲೀಸ್ ವೆರಿಫಿಕೇಷನ್ ಬಗ್ಗೆ ವಿವರವಾದ ಮಾಹಿತಿಯನ್ನು ಕೋರಿದ್ದಾಳೆ .ಆದರೆ ಮಹಿಳೆ ಈ ರೀತಿಯಾಗಿ ಯಾಕೆ ಅರ್ಜಿ ಸಲ್ಲಿಸಿದಲು ಎಂಬ ಗೊಂದಲಕ್ಕೆ ಬಿದ್ದ ಅಧಿಕಾರಿಗಳು ನಿಖರವಾದ ವಿಷಯವನ್ನು ಪೋಲಿಸ್ ಸಿಬ್ಬಂದಿ ಮಹಿಳೆಯ ಆಪ್ತ ಮೂಲಗಳಿಂದ ಮಾಹಿತಿ ತಿಳಿದುಕೊಂಡಿದ್ದಾರೆ . ಜೊತೆಗೆ ತಮ್ಮಿಂದ ತಪ್ಪುಗಳಾಗಿದೆ, ಕ್ರಿಮಿನಲ್ ಪ್ರಕರಣವುಳ್ಳ ವ್ಯಕ್ತಿಗಳಿಗೆ ಕಣ್ ತಪ್ಪಿನಿಂದ ಪೋಲಿಸ್ ವೆರಿಫಿಕೇಷನ್ ನೀಡಲಾಗಿದೆ. ಮತ್ತೆ 2024 ರಲ್ಲಿ ನೀವು ಆರೋಪಿಸಿದ ಕ್ರಿಮಿನಲ್ ಪ್ರಕರಣ ಚಾಲನೆಯಲ್ಲಿರುವ ವ್ಯಕ್ತಿಗೆ ಪೊಲೀಸ್ ವೆರಿಫಿಕೇಶನ್ ನೀಡುವುದಿಲ್ಲ. ಕೇವಲ ಇನ್ನೆರಡು ತಿಂಗಳು ಅಷ್ಟೇ ಎಂದು ಹೇಳಿ ಮಹಿಳೆಯನ್ನು 2023 ರ ಕೊನೆಯಲ್ಲಿ ಸಾಂತ್ವನ ಪಡಿಸಿದ್ದರು.

ಪೊಲೀಸಪ್ಪ ನ್ ಮಾತು ಕೇಳಿದ ಮಹಿಳೆಗೆ ಮುಂದೇನಾಯ್ತು?

ಪೊಲೀಸ್ ಪೇದೆಯು ಮಹಿಳೆಗೆ 2023 ರ ವರ್ಷ ಮುಗಿದ ನಂತರ ಆರೋಪಿಗೆ ಪೊಲೀಸ್ ವೆರಿಫಿಕೇಶನ್ ನೀಡುವುದಿಲ್ಲ ಎಂದು ಹೇಳಿದ್ದು, ಗಂಭೀರ ಅಪರಾಧದ ಕ್ರಿಮಿನಲ್ ಪ್ರಕರಣ ಚಾಲ್ತಿಯಲ್ಲಿರುವ ಆರೋಪಿಗೆ ಮತ್ತದೇ 2024 ನೇ ಸಾಲಿನಲ್ಲಿ ಕಾನೂನನ್ನು ಉಲ್ಲಂಘಿಸಿ ಪೋಲಿಸ್ ವೆರಿಫಿಕೇಷನ್ ನೀಡಿದ್ದಾರೆ.ಕಾನೂನನ್ನು ಉಲ್ಲಂಘಿಸಿ ಪೋಲಿಸ್ ವೆರಿಫಿಕೇಷನ ನೀಡಿದ್ದಾರೆ ಎಂದು ಅನುಮಾನ ಗೊಂಡು ಆ ಪೋಲಿಸ್ ಸಿಬ್ಬಂದಿಗೆ ವಿಚಾರಿಸಿದಾಗ 2024 ರ ಡಿಸೆಂಬರ್ ವರೆಗೂ ಆರೋಪಿಯ ಪೊಲೀಸ್ ವೆರಿಫಿಕೇಷನ್ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ. ಪೊಲೀಸರ ಮಾತು ನಂಬಿದ ಮಹಿಳೆ ಕೊನೆಗೂ ಆರೋಪಿಯ ಪ್ರಭಾವಕ್ಕೆ ಒಳಗಾಗಿ ಪೊಲೀಸ ವೆರಿಫಿಕೇಶನ್ ನೀಡಿರುವ ಆ ಪೊಲೀಸ್ ಪೇದೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾಳೆ.

ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು 

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳಿಗೆ ಸರಿಯಾಗಿ ವೆರಿಫಿಕೇಷನ್ ಮಾಡದೇ.. ಆರೋಪಿಯ ಪ್ರಭಾವಕ್ಕೆ ಒಳಗಾಗಿ ಪೊಲೀಸ್ ವೆರಿಫಿಕೇಷನ್ ನೀಡಿದ ಹಿನ್ನಲೆ ಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಹಾಗೂ ಆನ್ಲೈನ್ ಮೂಲಕ ಸುಳ್ಳು ಮಾಹಿತಿ ನೀಡಿ ಅಂಕೋಲಾ ಪೋಲೀಸ್ ಠಾಣೆಯಿಂದ್ ವೆರಿಫಿಕೇಶನ್ ಪಡೆದುಕೊಂಡ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಭಾರತೀಯ ಪೋಸ್ಟಲ್ ಅಂಚೆಯ ಮೂಲಕ ಗೀತಾ ನಾಯ್ಕ್ ದೂರೂ ಅರ್ಜಿಯನ್ನು ರವಾನಿಸಿದ್ದಾರೆ... ಮೇಲಾಧಿಕಾರಿಗಳು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ? ಫಲಿತಾಂಶ ಏನು ಬರುತ್ತದೆ ಎಂದು ಗೀತಾ ನಾಯ್ಕ ಎದುರು ನೋಡುತ್ತಿದ್ದಾಳೆ.

ವರದಿ:

ಕಿರಣ ಚಂದ್ರಹಾಸ ಗಾಂವಕರ

ಅಂಕೋಲಾ 



ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: