ಅಂಕೋಲಾದಲ್ಲಿ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಓರ್ವ ನಡೆಸಿದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ತಾಲೂಕಿನ ಜನರನ್ನು ಬೆಚ್ಚಿಬಿಳಿಸಿತ್ತು.
ಮುಂಬೈ ಮೂಲದ ಕಂಪನಿಗೆ 35 ಎಕರೆ ಭೂಮಿಯನ್ನು ತಾಲೂಕಿನ ಕೇಣಿ ಪ್ರದೇಶದಲ್ಲಿ ಕೊಡಿಸುವುದಾಗಿ ನಂಬಿಸಿ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅಂಕೋಲಾದ ಅಜಿತ ನಾಯಕ, ಗುರುಪ್ರಸಾದ ರೇವಣಕರ್, ತಿರುಪತಿ ಸ್ವಾಮಿ, ಎಂಬುವರ ಮೇಲೆ ಜೆ ಎಸ್ ಡಬ್ಲ್ಯೂ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇಂಚಾರ್ಜ್ ರವರಾದ ಶ್ರೀ ಭರ್ಮಪ್ಪ ಉಡಚಪ್ಪ ಕುಂಟಗೇರಿ ದಿನಾಂಕ 30/10/2024 ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಂಕೋಲಾ ಪೊಲೀಸರ ತೀವ್ರ ತನಿಖೆ 11 ಆರೋಪಿಗಳು ನ್ಯಾಯಾಂಗ ಬಂದನಕ್ಕೆ :
ಅಂಕೋಲಾ ಪೋಲೀಸರು 8 ಕೋಟಿ ವಂಚನೆಯ ಪ್ರಕರಣವನ್ನು ತನಿಖೆ ಕೈಗೊಂಡಿದ್ದು . 11 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ 19/12/2024 ರಾತ್ರಿ ನೀಡಲಾಗಿದೆ.
ಭಾರಿ ತಿಮಿಂಗಲ ಅಜಿತ ನಾಯಕ ಕೋಟಿಗಟ್ಟಲೆ ಹಣವನ್ನು ಕೊಳ್ಳೆ ಹೊಡೆಯುವ ಉದ್ದೇಶವನ್ನು ಇಟ್ಟುಕೊಂಡು ತಾನು ಚಾಣಕ್ಯತನ ದಿಂದ ಹಿಂದುಳಿದ ಬಡ ಕುಟುಂಬದ ಯುವಕರನ್ನು ಹೆಚ್ಚಾಗಿ ಬಳಸಿಕೊಂಡು ಕಂಪನಿಯ ಕಡೆಯಿಂದ ಕೋಟ್ಯಾಂತರ ಹಣವನ್ನು ಯುವಕರ ಖಾತೆಗೆ ನೇರವಾಗಿ ಜಮಾ ಮಾಡಿಕೊಂಡು ನಂತರ ಸದರಿ ಹಣವು ಖಾತೆಗೆ ಬಂದ ಮೇಲೆ ಹಣವನ್ನು ನಗದು ರೂಪದಲ್ಲಿ ವಿಥ್ ಡ್ರಾ ಮಾಡಿಕೊಂಡು ಅಜಿತ ನಾಯಕ ತನ್ನ ಆಪ್ತರನ್ನ ಕುರಿಗಳನ್ನಾಗಿ ಮಾಡಿ ಮೇವನ್ನು ಸರಿಯಾಗಿ ನೀಡದೇ ಕಾನೂನಿನ ಕುಣಿಕೆಯಲ್ಲಿ ಅಮಾಯಕ ಯುವಕರನ್ನ ಸಿಕ್ಕಿಸಿ ಅತಿಯಾಗಿ ನಂಬಿದ ಯುವಕರ ಪಾಲಿನ ವಾಸ್ತವಿಕ ಜಗತ್ತಿನ ರಿಯಲ್ ಖಳನಾಯಕನಾಗಿದ್ದಾನೆ.
8 ಕೋಟಿ ವಂಚನೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಗೆಳೆಯರ ಮತ್ತು ಸಂಬಂಧಿಕರ ಖಾತೆಗೆ ಹಣ ಜಮಾ ಆಗಿತ್ತೇ : ಹೊರ ಜಿಲ್ಲೆಯಿಂದ ವಿಚಾರಣೆಗೆ ಬಂದು ಹೋದ ಪೊಲೀಸ್ ಅಧಿಕಾರಿ ಯಾರೂ ? .
ಈ ಪ್ರಕರಣ ಭಾರಿ ಕುತೂಹಲವನ್ನು ಉಂಟು ಮಾಡಿದ್ದು. ಪ್ರಕರಣದ ಮುಖ್ಯ ಆರೋಪಿಯು ತನ್ನ ಒಡನಾಟ ಇರುವ ಪೊಲೀಸ್ ಗೆಳೆಯರಿಗೂ ಆಪ್ತ ಸಂಬಂಧಿಕರಿಗೂ ಲಕ್ಷಾಂತರ ಹಣವನ್ನು ಜಮಾ ಮಾಡಿದ್ದಾನೆ ಎಂದು ಬಲಮೂಲಗಳಿಂದ ಮಾಹಿತಿ ಬಂದಿದೆ..
ಈಗಾಗಲೇ ಹೊರ ಜಿಲ್ಲೆಯಿಂದ ಪೊಲೀಸ್ ಅಧಿಕಾರಿ ಒಬ್ಬರು ವಿಚಾರಣೆಗೆ ಹಾಜರಾಗಿ ಪುನಹ ತಮ್ಮ ಕೇಂದ್ರ ಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪೊಲೀಸ್ ಅಧಿಕಾರಿಯ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ ಎಂದು ವಿಶ್ವಾಸಾರ್ಯ ಮೂಲಗಳಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ 11 ಜನರ ನ್ಯಾಯಾಂಗ ಬಂಧನವಾಗಿದ್ದು .ಒಟ್ಟು 47 ಮುಂದಿ ಯು ಸಿಲುಕಿ ಹಾಕಿಕೊಂಡಿದ್ದು. ಇನ್ನುಳಿದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
8 ಕೋಟಿ ವಂಚನೆಯ ಆರೋಪದ ಪ್ರಕರಣದಲ್ಲಿ ಮುಖ್ಯ 3ಜನ ಆರೋಪಿ ತಲೆಮರೆಸಿಕೊಂಡಿದ್ದು, 11 ಜನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಆರೋಪಿಗಳ ವಿವರ ಈ ಕೆಳಗಿನಂತಿದೆ .
1) ಸುನೀಲ ತಂದೆ ಸುಭಾಷ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ।। ಬೊಬ್ರುವಾಡಾ, ಅಂಕೋಲಾ
2) ಸುದೀಪ ತಂದೆ ಅಶೋಕ ನಾಯ್ಕ, ಪ್ರಾಯ-23 ವರ್ಷ, ನಿರುದ್ಯೋಗಿ, ಸಾ। ಲಕ್ಷೇಶ್ವರ, ಕುಂಬಾರಕೇರಿ, ಅಂಕೋಲಾ
3) ಪ್ರದೀಪ ತಂದೆ ಉದಯ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ॥ ಕೋಟೇವಾಡಾ. ಅಂಕೋಲಾ
4) ಚೇತನ ತಂದೆ ರಾಜು ನಾಯ್ಕ, ಪ್ರಾಯ-24 ವರ್ಷ, ಉದ್ಯೋಗ-ಮೆಕ್ಯಾನಿಕ್, ಸಾ॥ ಗಣಪತಿಗಲ್ಲ. ಅಂಕೋಲಾ
5) ಕಾರ್ತಿಕ ತಂದೆ ನಾರಾಯಣ ನಾಯಕ, ಪ್ರಾಯ-38 ವರ್ಷ, ವೃತ್ತಿ-ವ್ಯವಹಾರ, ಸಾ॥ 'ಈಶ' ನಿವಾಸ. ವಂದಿಗೆ ಈಶ್ವರ ದೇವಸ್ಥಾನ ಹತ್ತಿರ, ಅಂಕೋಲಾ
6) ಕಿರಣ ತಂದೆ ಜಯವಂತ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಸುಪರವೈಸರ್. ಸಾ॥ ಹಳದಿಪುರ. ಅಗ್ರಹಾರ, ಹೊನ್ನಾವರ
7) ನವೀನ ರಮೇಶ ಪ್ರಭು, ಪ್ರಾಯ-40 ವರ್ಷ, ವೃತ್ತಿ-ಬಟ್ಟೆ ಅಂಗಡಿ ಕೆಲಸ, ಸಾ॥ ಶಾಲೆಹಿತ್ತಲ್, ಹೊನ್ನಾವರ
8) ಮಣೀಶ ತಂದೆ ಗೌರೀಶ ನಾಯಕ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ॥ ಬಾವಿಕೇರಿ,
9) ಶ್ರೇಯಸ್ ತಂದೆ ಶೈಲೇಶ ಶೇಲ್ಕರ್, ಪ್ರಾಯ-19 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ॥ ಕೃಷ್ಣಾಪುರ, ಬಾಳೆಗುಳಿ, ಅಂಕೋಲಾ
10) ವಿಶ್ವೇಶ್ವರ ಆನಂದು ಬಂಟ್, ಪ್ರಾಯ-20 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಬೇಳಾಬಂದರ, ತಾ।। ಅಂಕೋಲಾ
11) ಶಶಿಕಾಂತ ತಂದೆ ಸತೀಶ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ॥ ಹುಲದೇವರವಾಡಾ,
ಅಂಕೋಲಾ
ಇವರಿಗೆ ಕಲಂ.35(3) ಬಿ.ಎನ್.ಎಸ್.ಎಸ್-2023 ಅಡಿಯಲ್ಲಿ ನೋಟಿಸ್ ಜ್ಯಾರಿ ಮಾಡಿ ತನಿಖೆಯಲ್ಲಿ ಹಾಜರಪಡಿಸಿಕೊಂಡು ವಿಚಾರಣೆಯಿಂದ ದಿನಾಂಕ :19-12-2024 ರಂದು ಮದ್ಯಾಹ್ನ 12-30 ಗಂಟೆಗೆ ದಸ್ತಗೀರಿ ಮಾಡಿ ಮಾನ್ಯ ನ್ಯಾಯಾಲಯದಲ್ಲಿ ಹಾಜರಪಡಿಸಲಾಗಿದೆ. ಹಾಗೂ ಆರೋಪಿತರಿಂದ 7 ಚೆಕ ಬುಕಗಳನ್ನು ಹಾಗೂ 01 ಪಾಸ್ ಬುಕನ್ನು ಜಪ್ತ ಮಾಡಿದ್ದು ಇರುತ್ತದೆ. ಸದ್ರಿ ದಸ್ತಗೀರಿಯಾದ 11 ಆರೋಪಿತರ ಬ್ಯಾಂಕ್ ಅಕೌಂಟನ್ನು ಈಗಾಗಲೇ ಫ್ರೀಡ್ಜ್ ಮಾಡಿ ದಾಖಲಾತಿಗಳನ್ನು
ಪೊಲೀಸರು ಸಂಗ್ರಹಿಸಿದ್ದಾರೆ .
ಕ್ರಿಮಿನಲ್ ಆರೋಪ ಇರುವ ವ್ಯಕ್ತಿಗಳಿಗೆ ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳ ಸ್ನೇಹ ವರದಾನ ವಾಯಿತೇ?
ಸದರಿ ಪ್ರಕರಣದ ಪ್ರಮುಖ ಆರೋಪಿಯಾದ ಅಜಿತ್ ನಾಯಕ ಕೆಲವು ಪೊಲೀಸರ ಜೊತೆ ಪಾರ್ಟಿಗಳಲ್ಲಿ. ಕೆಲವು ಸಭೆ ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು . ಕೆಲವು ಪೊಲೀಸ್ ಅಧಿಕಾರಿಗಳ ಜೊತೆ ಆಗಾಗ ಕಾಣಿಸುತ್ತಿದ್ದ ವಿಶ್ವಾಸವನ್ನು ಗಳಿಸುತ್ತಿದ್ದ ಎನ್ನ ಲಾಗಿದ್ದು.. ಪೋಲಿಸ್ ಅಧಿಕಾರಿಗಳ ಒಡನಾಟ ನೋಡಿದ ಕೆಲವು ಮೂರ್ಖ ಯುವಕರು ಒಂದಾದ ನಂತರ ಒಂದು ಕುರಿ ಸಾಲಾಗಿ ಅಜಿತ್ ನಾಯಕನ ಬಲಗೆ ಬಿದ್ದು ಕಂಬಿ ಎಣಿಸುವಂತಾಗಿದೆ..
ಪೊಲೀಸರಿಗೆ ಮಂಗ ಮಾಡಿದ ಅಜಿತ ನಾಯಕನಿಗೆ ನಾವ್ಯಾವ ಲೆಕ್ಕ : ಗೋಳು ತೋಡಿಕೊಂಡ ನ್ಯಾಯಾಂಗ ಬಂಧನದಲ್ಲಿದ ವ್ಯಕ್ತಿಯ ಅಳಲು
ಸದರಿ ಪ್ರಕರಣದಲ್ಲಿ 2 ಜನ ಹೊನ್ನಾವರದ ಮೂಲದ ವ್ಯಕ್ತಿಗಳು ನ್ಯಾಯಾಂಗ ಬಂಧನದಲ್ಲಿದ್ದು ಇವರು ಹೊರ ಜಿಲ್ಲೆಯಿಂದ ವಿಚಾರಣೆಗೆ ಬಂದು ಹೋದ ಪೋಲಿಸಪ್ಪನ ಆತ್ಮೀಯ ಸ್ನೇಹಿತರು ಎಂದು ಹೇಳಲಾಗುತ್ತಿದೆ..
ಸದರಿ ಪ್ರಕರಣ ನ್ಯಾಯಯುತವಾಗಿ ತನಿಖೆ ನಡೆಸಿದಲ್ಲಿ ಅಜಿತ ನಾಯಕನಿಂದ ಹಣ ಹಾಕಿಸಿಕೊಂಡ ಕೆಲವು ಜನ ಭ್ರಷ್ಟ ಪೊಲೀಸ್ ಅಧಿಕಾರಿಗಳು ಜೈಲಿನಲ್ಲಿ ಮುದ್ದೆ ಸಾರು ತಿನ್ನುವಂತಾಗಲಿದೆ ಎಂದು ಸಾರ್ವಜನಿಕ ವಲಯದಿಂದಾಗಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದೆ .
ಈಗಾಗಲೇ ನ್ಯಾಯಂಗ ಬಂಧನದಲ್ಲಿರುವ 11 ಜನರ ಪೈಕಿ ಕೆಲವು ಆರೋಪಿತರಿಗೆ ಅಜಿತ ನಾಯಕನ ಪ್ರೀತಿಯ ಪೊಲೀಸಪ್ಪನಿಗೆ ಲಕ್ಷಾಂತರ ಹಣ ಜಮಾ ಮಾಡಿದ್ದಾರೆ ಎಂಬ ಬಗ್ಗೆ ತಿಳಿದಿದ್ದು . ಪೊಲೀಸಪ್ಪನಿಗೆ ಮೋಸ ಮಾಡಲು ಹೋದಾತ ಅಜಿತ ನಾಯಕನಿಗೆ ನಾವ್ಯಾವ ಲೆಕ್ಕ. ನಮ್ಮನ್ನು ನಂಬಿಸಿ ಟೋಪಿ ಹಾಕಿಬಿಟ್ಟ ಎಂದು ಅವಲತ್ತುಕೊಂಡಿದ್ದಾನ್ನೆ
ಆರೋಪಿ ಅಜಿತ ನಾಯಕ ತಲೆಮರೆಸಿಕೊಂಡು. ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿ ನಂತರ ಹೈಕೋರ್ಟ್ ನಲ್ಲಿ ಸಲ್ಲಿಸಿದ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ ಎಂದು ಮಾಹಿತಿ ಇದೆ.
ಇನ್ನು 11ಜನ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ವಿಚಾರಣೆ ನಾಳೆ ದಿನಾಂಕ್ 21/12/2024 ರಂದು ಮಾನ್ಯ ಅಂಕೋಲಾ ಸಿವಿಲ್ ನ್ಯಾಯಾಲಯದಲ್ಲಿದ್ದು , ಆರೋಪಿಗಳಿಗೆ ಜಾಮೀನು ಸಿಗುತ್ತದೆಯೋ ಅಥವಾ ಇಲ್ಲ ಎಂದು ಕಾದು ನೋಡಬೇಕಾಗಿದೆ.
ಇನ್ನು ಸರಿಸುಮಾರು 36ಜನರ ಪತ್ತೆಗಾಗಿ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಅವರ ನಿರ್ದೇಶನದಲ್ಲಿ .ಅಂಕೋಲಾ ಪೊಲೀಸ್ ಠಾಣೆಯ ಹಿರಿಯ- ಕಿರಿಯ ಅಧಿಕಾರಿಗಳು ಪತ್ತೆಕಾರ್ಯ ಆರಂಭಿಸಿದ್ದು ತನಿಖೆಯು ವೇಗವನ್ನು ಪಡೆದುಕೊಂಡಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ