ಅಂಕೋಲಾ: ಕರ್ಣಾಟಕ ವಿಶ್ವ ವಿದ್ಯಾಲಯ ಧಾರವಾಡದ 71ನೇ ಅಂತರ್ ಮಹಾವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದ 400 ಮೀ ಹರ್ಡ್ಲಲ್ಸ್ ಸ್ಪರ್ದೆಯಲ್ಲಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅನೀಸ್ ಸಂತೋಷ್ ನಾಯ್ಕ ಕಂಚಿನ ಪದಕಗಳಿಸಿದ್ದಾರೆ.
ಇತ್ತೀಚಿಗೆ ಜೆ.ಎಸ್.ಎಸ್. ಸಂಸ್ಥೆಯ ಆತಿಥ್ಯದಲ್ಲಿ ಧಾರವಾಡದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಹಿಂದೆಯೂ ವಿವಿಧ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ ಅನೀಶ್ ನಾಯ್ಕ ಮತ್ತೊಮ್ಮೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರಶಸ್ತಿಗಳಿಸಿ ಸಾಧನೆಗೈದಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ವಿದ್ಯಾ ನಾಯಕ, ಕವಿವಿ ಸಿಂಡಿಕೇಟ್ ಸದಸ್ಯ ಡಾ.ಶಿವಾನಂದ ನಾಯಕ, ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಶ್ವರಿ ಭಟ್, ಉಪನ್ಯಾಸಕರಾದ ಶ್ರೀಮತಿ ಸುಮಯ್ಯ ಸೈಯದ್, ನಾರಾಯಣ ಸ್ವಾಮಿ, ಡಾ. ಮಧೂರಶ್ರೀ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಮಹೇಶ ನಾಯಕ ಹರ್ಷ ವ್ಯಕ್ತಪಡಿಸಿದ್ದಾರೆ.