ಅಂಕೋಲಾ : ಹಳ್ಳಿಗಳಲ್ಲಿ ಹೆಚ್ಚಾಗಿ ಅಕ್ಕ ಪಕ್ಕದ ಮನೆಯವರು ಕಾಲುದಾರಿಗೆ ಕಲ್ಲನು ಹಾಕಿ ರಸ್ತೆಯನ್ನು ಬಂದ್ ಮಾಡುವುದು ನಂತರ ದೂರು ಬಂದೊಡನೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಕಲ್ಲನ್ನು ತೆರವುಪಡಿಸುವುದನ್ನು ದೃಶ್ಯ ಮಾಧ್ಯಮಗಳಲ್ಲಿ ಪತ್ರಿಕೆಯಲ್ಲಿ ಕೇಳಿರುತ್ತೀರಿ.
ಇದೇ ಪ್ರಥಮ ಭಾರಿ ಎನ್ನುವಂತೆ ಅಂಕೋಲಾ ಜನದಟ್ಟಣೆ ಇರುವ ಪ್ರಮುಖ ರಸ್ತೆಯ ಅಂಬಾರಕೋಡ್ಲಕ್ಕೆ ಸಾಗುವ ತಿರುವಿನಲ್ಲಿ ಮುಸ್ಲಿಂ ವ್ಯಾಪಾರಿ ಮಹಮ್ಮದ್ ಇಲಿಯಾಸ್ ಶೇಖ್ ಹುಸೇನ ಎನ್ನುವವರು ಜೀವನೋಪಾಯಕ್ಕಾಗಿ ಕಳೆದ 1973ನೇ ವರ್ಷದಿಂದ ನಡೆಸುತ್ತಿದ್ದ ತರಕಾರಿ ಅಂಗಡಿಗೆ ಡಿಸೆಂಬರ್ 17 ರಾತ್ರಿ12 ಗಂಟೆಗೆ ನುಗ್ಗಿದ ಐದಾರು ಕಿರಾತಕರು ತರಕಾರಿ ಅಂಗಡಿಯಲ್ಲಿದ್ದ ತರಕಾರಿ ತುಂಬಿದ್ದ ಬಾಕ್ಸ್ ಗಳನ್ನು ಚೆಲ್ಲಾಪಿಲ್ಲೆ ಯಾಗಿ ಎಸೆದು ನಂತರ ಆ ತರಕಾರಿ ಅಂಗಡಿಯನ್ನು ಗುರಿಯಾಗಿರಿಸಿಕೊಂಡು ಅಂಗಡಿಯ ಮುಂದೆಯೇ ಒಂದು ಲೋಡು ಕೆಂಪು ಚೀರೆ ಕಲ್ಲನ್ನು ಹಾಕಿ ಸ್ಥಳದಿಂದ ನಾಪತ್ತೆಯಾದ ಘಟನೆ ನಡೆದಿದೆ.
ಪೊಲೀಸ್ ವೈಫಲ್ಯ :
ಘಟನೆ ನಡೆದ ಸ್ಥಳದಿಂದ ಅಂಕೋಲಾ ಪೊಲೀಸ್ ಠಾಣೆ 500 ಮೀಟರ್ ಅಂತರದಲ್ಲಿದೆ . ಬೀಟ್ ಪೊಲೀಸ್ ವ್ಯವಸ್ಥೆ ಸಕ್ರಿಯವಾಗಿದ್ದರು. ರಾತ್ರಿ ತರಕಾರಿ ಅಂಗಡಿಯು ಚೆಲ್ಲಾಪಿಲ್ಲಿಯಾಗಿ ದ್ವಂಸ ಮಾಡಿ ನಂತರ ಒಂದು ಲೋಡು ಕೆಂಪು ಚಿರಕಲ್ಲು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸುರಿದು ಆರೋಪಿಗಳು ಸದರಿ ಜಾಗದಿಂದ ಕಾಲ್ಕಿತ ಮೇಲೆ ಪೊಲೀಸರ ವಾಹನ ಘಟನಾ ಸ್ಥಳಕ್ಕೆ ಬಂದಿದೆ . ಘಟನೆ ಸ್ಥಳದ ಅಕ್ಕಪಕ್ಕದಲ್ಲಿ ಸಿಸಿಟಿವಿಗಳಿದ್ದು ಅದನ್ನು ಪರಿಶೀಲಿಸದೇ ಸದರಿ ಗಂಭೀರವಾದ ಪ್ರಕರಣವನ್ನು ಪೊಲೀಸರು ಹಗುರವಾಗಿ ತೆಗೆದುಕೊಂಡಂತಿದೆ..
ನಡೆದಿರುವ ವಿದ್ಯಮಾನವನ್ನು ಗಮನಿಸಿದರೆ ಕೃತ್ಯ ನಡೆಸಿದ ಆರೋಪಿಗಳೊಂದಿಗೆ ಠಾಣೆಯ ಪೊಲೀಸ್ ಅಧಿಕಾರಿಗಳು ಕೈಜೋಡಿಸಿದ್ದಾರೆಯೇ ಎಂದು ಪ್ರಜ್ಞಾವಂತ ನಾಗರಿಕರು ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.
ರಸ್ತೆಯಲ್ಲಿ ಹಾಕಿರುವ ಒಂದು ಲೋಡು ಕೆಂಪು ಚಿರೆ ಕಲ್ಲು ತೆರವು :
ಡಿಸೆಂಬರ್ 17 ರ ರಾತ್ರಿ ಪಟ್ಟಣದ ಪ್ರಮುಖ ಪ್ರದೇಶದಲ್ಲಿ ಹಾಕಿರುವ ಕೆಂಪು ಚಿರೇಕಲ್ಲನ್ನು ಪೊಲೀಸರ ರಕ್ಷಣೆಯೊಂದಿಗೆ ಅಂಕೋಲಾದ ಪುರಸಭೆಯ ಅಧಿಕಾರಿಗಳು ಘಟನೆ ನಡೆದ 16 ತಾಸಿನ ನಂತರ ಪುರಸಭೆ ಕೆಲವು ಪ್ರಜ್ಞಾವಂತ ಜನಪ್ರತಿನಿಧಿಗಳ ಆಕ್ರೋಶದ ಪಲವಾಗಿ ಎಚ್ಚೆತ್ತುಕೊಂಡು ಜೆಸಿಬಿಯನ್ನು ಬಳಸಿ ಕಸವನ್ನು ತುಂಬುವ ಲಾರಿಯಲ್ಲಿಯೇ ಚಿರೆ ಕಲ್ಲನ್ನು ಸಾಗಿಸಿ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ... ಪುರಸಭೆ ಅಧಿಕಾರಿಗಳಿಗೆ ಪ್ರಜ್ಞಾವಂತ ಕೆಲವು ಜನಪ್ರತಿನಿಧಿಗಳು ಸಾತ್ ನೀಡಿದ್ದು ಒಳ್ಳೆ ಬೆಳವಣಿಗೆ ಎಂದು ಹೇಳಲಾಗುತ್ತಿದೆ.
ಪೋಲಿಸ ಠಾಣೆಯಲ್ಲಿ ನವಾಜ ಶೇಖ್ ಮತ್ತು ಇಬ್ರಾಹಿಂ ಶೇಖ್ ಮೇಲೆ ದೂರು :
ಡಿಸೆಂಬರ್ 17 ರಾತ್ರಿ 12 ಗಂಟೆಯ ಸುಮಾರಿಗೆ ನವಾಜ್ ಅಬ್ದುಲ್ಲ ಶೇಖ, ಇಬ್ರಾಹಿಂ ಮೊಹಮ್ಮದ್ ಶೇಖ್. ತನ್ನ ಜೊತೆ 5-6 ಜನರು ಸೇರಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡು ತನ್ನ ತರಕಾರಿ ಅಂಗಡಿಯನ್ನು ಮುರಿದು ಹಾಕಿರುತ್ತಾರೆ. ಲಾರಿಯಲ್ಲಿ ಒಂದು ಲೋಡ್ ಕೆಂಪುಕಲನ್ನು ತುಂಬಿಕೊಂಡು ತಂದು ಅಂಗಡಿಯ ಎದುರು ಬಿಸಾಕಿ ಹೋಗಿರುತ್ತಾರೆ.
ಜೊತೆಗೆ ಸಿವಿಲ್ ನ್ಯಾಯಾಲಯದಲ್ಲಿ ಅಂಗಡಿಯ ಕುರಿತು ವಿಚಾರಣೆ ಯಲ್ಲಿದ್ದು ನವಾಜ್ ಮತ್ತು ಇಬ್ರಾಹಿಂ ಜೊತೆಗೆ ಅಂಗಡಿಯ ಕುರಿತು ತಕರಾರು ಇದೆ. ಇತ್ಯಾದಿ ಎಂದು ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮೊಹಮ್ಮದ್ ಇಲಿಯಾಶ್ ಶೇಖ್ ಕುಟುಂಬ ಅಚನಕ್ಕಾದ ಬೆಳವಣಿಗೆಯಿಂದ ಜೀವ ಭಯದಿಂದ ನಲುಗಿದೆ.. ಮೈ ಕೊರೆಯುವ ಚಳಿಯಲ್ಲಿ ಅಂಗಡಿಯ ಹತ್ತಿರ ರಾತ್ರಿ 10 ಗಂಟೆಗೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.. ತಮ್ಮ ಜೀವಕ್ಕೆ ಅಪಾಯವಾದರೆ ದೂರಿನಲ್ಲಿ ನೀಡಿದ ವ್ಯಕ್ತಿಗಳು ನೇರ ಹೊಣೆ ಎಂದಿದ್ದಾರೆ.
ವೈಯಕ್ತಿಕ ದ್ವೇಷ ಸಾಧಿಸಲು ಹೋಗಿ ಸಾರ್ವಜನಿಕ ರಸ್ತೆಯ ಮೇಲೆ ಕಲ್ಲನು ಸುರಿದು ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಪತ್ತೆ ಹಚ್ಚದ ಅಧಿಕಾರಿಗಳ ದಕ್ಷತೆಯ ಬಗ್ಗೆ ತಾಲೂಕಿನ ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಅಧಿಕಾರಿಗಳಾದ ಸುರೇಖಾ,ಬೀರಣ್ಣ ನಾಯಕ, ರಾಥೋಡ, ಮಹಾಬಲೇಶ್ವರ ನಾಯ್ಕ, ಇನ್ನಿತರ ಅಧಿಕಾರಿಗಳು..
ಪುರಸಭೆ ಸದಸ್ಯರಾದ ಜಯಪ್ರಕಾಶ್ ನಾಯ್ಕ್, ವಿಶ್ವನಾಥ ನಾಯ್ಕ ಇನ್ನಿತರರು..
ಪೊಲೀಸ್ ಅಧಿಕಾರಿಗಳಾದ ಸಚಿನ ನಾಯಕ, ಒಮು ನಾಯ್ಕ್, ಎಸ್. ಎಸ್ ಗೌಡ ರವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು..
ವರದಿ: ಕಿರಣ ಚಂದ್ರಹಾಸ ಗಾಂವಕರ