ಅಂಕೋಲಾ: ಶಿರೂರು ಗುಡ್ಡ ದುರಂತದಲ್ಲಿ ಮೃತರಾದ ಏಳು ಜನರಿಗೆ ತಲಾ ಎರಡು ಲಕ್ಷ ರೂಪಾಯಿ ಹಾಗೂ ಮನೆ ಕಳೆದುಕೊಂಡು ಗಾಯಗೊಂಡವರಿಗೆ ಹದಿನಾಲ್ಕು ಜನರಿಗೆ ತಲಾ ಒಬ್ಬರಿಗೆ ಐವತ್ತು ಸಾವಿರ ರೂಪಾಯಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ರವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪೃಕೃತಿ ವಿಕೋಪ ರಿಲೀಪ್ ಪಂಡನಿಂದ ಪಲಾನುಭವಿಗಳ ಬ್ಯಾಂಕ ಖಾತೆಗೆ ಹಣ ಜಮಾ ಆಗಿರುವುದಕ್ಕೆ ಅಂಕೋಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಕರೆದು ಪಲಾನುಭವಿಗಳ ಯಾದಿ ಪ್ರೆಸ್ ಗೆ ಬಿಡುಗಡೆ ಮಾಡಿ.ಈ ಹಣ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಲು ಕಾರಣಿಕರ್ತರು ಜನಪ್ರಿಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ರವರಿಗೆ ಅಂಕೋಲಾ ತಾಲೂಕಿನ ಜಿಲ್ಲೆಯ ನಾಗರಿಕರ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಧನ್ಯವಾದಗಳನ್ನು ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷರಾದ ರಾಜೇಂದ್ರ ನಾಯ್ಕ ಮಾತನಾಡಿ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ರವರಿಗೆ ಧನ್ಯವಾಗಳನ್ನು ಹೇಳಿ ಪತ್ರಿಕಾಗೋಷ್ಠಿಯಲ್ಲಿ ಫಲಾನುಭವಿಗಳ ಯಾದಿ ಬಿಡಗಡೆ ಮಾಡಿ ಮಾತನಾಡಿದರು.ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ಜಗಧೀಶ ನಾಯಕ ಮಾತನಾಡಿ ಸಂಸದ ಕಾಗೇರಿ ರವರ ಈ ಕಾರ್ಯಕ್ಕೆ ಧನ್ಯವಾದ ತಿಳಿಸಿದರು.ನಿಕಟಪೂರ್ವ ಮಂಡಲ ಅಧ್ಯಕ್ಷ ಸಂಜಯ ನಾಯ್ಕ.ಮಂಡಲ ಉಪಾಧ್ಯಕ್ಷರಾದ ಬಿಂದೇಶ ನಾಯಕ.ನಾಗೇಂದ್ರ ನಾಯ್ಕ ಕಲಬಾಗ,ಕೃಷ್ಣಕುಮಾರ ಮಹಾಲೆ,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ನಾಯ್ಕ,ಶ್ರೀಧರ ನಾಯ್ಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಾಮೋದರ ರಾಯ್ಕರ, ಓಬಿಸಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣಪತಿ ನಾಯ್ಕ ಹನುಮಟ್ಟಾ.ಮಂಡಲ ಕಾರ್ಯದರ್ಶಿ ನಾಗೇಶ ಕಿಣಿ, ಅಗಸೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ನಾರಾಯಣ ಹೆಗಡೆ, ಪತ್ರಿಕಾಗೊಷ್ಠಿಯಲ್ಲಿ ಉಪಸ್ಥಿತರಿದ್ದರು