ಅಂಕೋಲಾ ತಾಲೂಕಿನ ಕೆಳಗಿನ ಮಂಜುಗುಣಿ ಸಮುದ್ರ ತೀರದ ಮರಳು - ಹಗಲು ರಾತ್ರಿ ಎನ್ನದೇ ಅನ್ಯ ಊರಿಗೆ ಮಾರಾಟ : ಸೂಕ್ತ ಕ್ರಮ ಕೈಗೊಳ್ಳುವಂತೆ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘ ಮಂಜಗುಣಿ ಸದಸ್ಯರಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಕೆ.


16 Dec 2024, 02:15 pm, 732 reads

ಅಂಕೋಲಾ : ತಾಲೂಕಿನ ಹೊನ್ನೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಳಗಿನ ಮಂಜುಗುಣಿ ಸಮುದ್ರ ತೀರದಲ್ಲಿ ವಿಪರೀತ ಪ್ರಮಾಣದಲ್ಲಿ ಟಾಟಾ ಏಸ್ ರಿಕ್ಷಾ ಹಾಗೂ ಇನ್ನಿತರ ವಾಹನಗಳಲ್ಲಿ ಅನ್ಯ ಊರುಗಳಿಗೆ ಅಪರಿಚಿತ ವ್ಯಕ್ತಿಗಳು ಹಗಲು - ರಾತ್ರಿ ಏನ್ನದೇ ಮರಳನ್ನು ಮಾರಾಟ ಮಾಡುತ್ತಿದ್ದು. 

ಸದರಿ ಮರುಳುಗಾರಿಕೆ ನಡೆಸಿದ ಪ್ರದೇಶದಲ್ಲಿ ದೊಡ್ಡ ಹೊಂಡಗಳು ಬಿದ್ದು ಸಮುದ್ರ ನೀರು ಆವರಿಸಿಕೊಂಡಿದ್ದು. ಇದೇ ತರದ ಮರಳುಗಾರಿಕೆ ನಡೆಸಿದರೆ ಮೀನುಗಾರಿಕೆಯನ್ನು ನಂಬಿಕೊಂಡ ನೂರಾರು ಮನೆಗಳು ಮಳೆಗಾಲದಲ್ಲಿ ಕಡಲ ಕೊರತೆಯಿಂದ ಅಪಾಯಕ್ಕೊಳಗಾಗ ಬೇಕಾಗುತ್ತದೆ ಎಂದರು . 

ನದಿ ತೀರದ ಮರಳು 4 ಚಕ್ರದ ವಾಹನಗಳಲ್ಲಿ ಅನ್ಯ ಊರಿಗೆ ಮಾರಾಟ ವಾಗಲು ತಡೆಹಿಡಿಯ ಬೇಕು, ಕೆಲವು ಮರಳು ಸಾಗಿಸುವ ಟಾಟಾ ಏಸ್ ವಾಹನಗಳಿಗೆ ನೋಂದಣಿ ನಂಬರ ಇಲ್ಲದೇ ಇರುವುದು ನಾಡ ದೋಣಿ ಮೀನುಗಾರಿಕಾ ಸಂಘದ ಸದಸ್ಯರ ಗಮನಕ್ಕೆ ಬಂದಿದೆ. 



ಅಕ್ರಮ ಮರಳು ಸಾಗಿಸುವ ವಾಹನಗಳನ್ನು ಸಂಘದ ಸದಸ್ಯರೇ ಈ ಹಿಂದೆ ಹಿಡಿದು ಎಚ್ಚರಿಕೆ ನೀಡಿದರು ಬಗ್ಗದ ಮರಳು ದಂಧೆ ಕೊರರು ತಮ್ಮ ಅಕ್ರಮ ದಂದೆ ಯನ್ನು ವ್ಯಾಪಕವಾಗಿ ವಿಸ್ತರಿಸುತ್ತಾ ಹೋಗುತ್ತಿದ್ದಾರೆ. ಜೊತೆಗೆ ಇಲ್ಲಿನ ಬೀಟ್ ಪೊಲೀಸ್ ವ್ಯವಸ್ಥೆ ನಿದ್ದೆಗೆ ಜಾರಿರುವುದನ್ನು ಮಾನ್ಯ ತಾಲೂಕು ದಂಡಾಧಿಕಾರಿಗಳಾದ ಬಿ ಅನಂತ ಶಂಕರ್ ರವರಿಗೆ ಗಮನಕ್ಕೆ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರ ಸಂಘ (ರಿ ) ರವರು ತಂದರು ಜೊತೆಗೆ ಮನವಿಯನ್ನು ನೀಡಲಾಯಿತು. ಮಾನ್ಯ ತಹಶೀಲ್ದಾರರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಮುಂದುವರೆದು ಮೀನುಗಾರಿಕಾ ಸಂಘದ ಸದಸ್ಯರು ಹತ್ತಿರದ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಹಾಗೂ ಪಿಎಸ್ಐ ಉದ್ದಪ್ಪ ರವರಿಗೆ ಅಕ್ರಮ ಮರಳುಗಾರಿಕೆ ಬಗ್ಗೆ ಮನವಿ ನೀಡಿದರು. ಠಾಣೆಯ ಸಿಪಿಐ ಮತ್ತು ಪಿಎಸ್ಐ ಮನವಿಗೆ ಸ್ಪಂದಿಸಿ ಸಂಘದ ಸದಸ್ಯರಿಗೆ ತಮ್ಮ ಮೊಬೈಲ್ ನಂಬರನ್ನು ಕೊಟ್ಟು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೆ ಯಾವುದೇ ಅಂಜಿಕೆ ಇಲ್ಲದೆ ಯಾವುದೇ ಸಮಯದಲ್ಲಾದರೂ ತಾವುಗಳು ಕರೆ ಮಾಡಿ ನಾವು ನಿಮ್ಮ ಜೊತೆಯಲ್ಲಿ ಇದ್ದೇವೆ. ಅಕ್ರಮ ದಂಧೆ ಕೋರರ ಹೆಡೆಮುರಿ ಕಟ್ಟೋಣ ಎಂದು ಭರವಸೆಯ ಮಾತುಗಳನ್ನಾಡಿದರು.. 

ಸದರಿ ಮನವಿಯನ್ನು ನೀಡುವ ಸಂದರ್ಭದಲ್ಲಿ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಕಾ ಸಂಘದ ಅಧ್ಯಕ್ಷರು ಪ್ರಕಾಶ್ ವಿ ತಾಂಡೇಲ, ಉಪಾಧ್ಯಕ್ಷರು ಕೃಷ್ಣ ಪಿ ತಾಂಡೇಲ್, ಕಾರ್ಯದರ್ಶಿ ಅಕ್ಷಯ್ ಟಿ ತಾಂಡೇಲ್, ಸಹ ಕಾರ್ಯದರ್ಶಿ ರಾಜು ಡಿ ತಾಂಡೇಲ, ಸದಸ್ಯರಾದ ಸುದರ್ಶನ ತಾಂಡೇಲ್, ದೇವಿದಾಸ ತಾಂಡೇಲ್, ದತ್ತಾ ತಾಂಡೇಲ್, ಮನೋಹರ ತಾಂಡೇಲ್, ಸಂದೀಪ ತಾಂಡೇಲ್, ಶಾಂತರಾಮ ತಾಂಡೇಲ್, ಗಣಪತಿ ತಾಂಡೇಲ್ , ಬಾಲಕೃಷ್ಣ ತಾಂಡೇಲ್, ಪುಂಡಲಿಕ ತಾಂಡೇಲ್, ಸಂತೋಷ ತಾಂಡೇಲ್, ಪ್ರಮುಖರು ಉಪಸ್ಥಿತರಿದ್ದರು.


ವರದಿ: ಕಿರಣ ಚಂದ್ರಹಾಸ ಗಾಂವಕರ 







ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: