ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನಲ್ಲಿ ದಿನಾಂಕ 9-12-2024ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ಹಿತ್ತಾಳೆಯ ಲೋಹದ ದೇವರ ಮೂರ್ತಿಗಳು-47, ಕಲ್ಲುಗುಂಡುಗಳು-5 ಹಾಗೂ ಮನೆಯಲ್ಲಿದ್ದ ಹಳೆಯ ನೊಕಿಯಾ ಮೊಬೈಲ್-1 ನ್ನು ಕಳುವು ಮಾಡಿಕೊಂಡು ಹೋಗಿರುವ ಕುರಿತು ಶ್ರೀ ವಿಠ್ಠಲ ತಂದೆ ವಾಸು ಬಾಂದಿ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು . ಅಂಕೋಲಾ ಪೊಲೀಸ್ ಠಾಣಾಧಿಕಾರಿಗಳು ಠಾಣೆಯ ಗುನ್ನಾ ನಂ: 214/2024 ಕಲಂ: 331(3) 331(4) 305 ಬಿ.ಎನ್.ಎಸ್-2023 ನೇದರಂತೆ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣವನ್ನು ನಮ್ಮ ಅಂಕೋಲಾ ಪೊಲೀಸರು ತಮ್ಮ ಮೇಲಾಧಿಕಾರಿಗಳ ಸಹಕಾರದೊಂದಿಗೆ 24 ಗಂಟೆಯೊಳಗೆ ಬಂಧಿಸಿ ತಮ್ಮ ದಕ್ಷತೆಯನ್ನು ಮೆರೆದಿದ್ದಾರೆ.
ಸದರಿ ಪ್ರಕರಣದಲ್ಲಿ 6 ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 3 ಐಷಾರಾಮಿ ಕಾರು. 1 ಸ್ಕೂಟಿ.16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಪ್ರಕರಣದ ಆರೋಪಿಗಳಾದ 1) ಜಿ. ಶ್ರೀನಿವಾಸ ತಂದೆ ಗುರುಸ್ವಾಮಿ ಪ್ರಾಯ: 41 ವರ್ಷ, ವೃತ್ತಿ: ಕೆ.ಪಿ.ಸಿ.ಯಲ್ಲಿ ನೌಕರ ಸಾ: ಪಿ6 17/4, ಕೆಪಿಸಿ ಕಾಲೋನಿ, ಕದ್ರಾ
2) ಅಶೋಕ ತಂದೆ ಹನುಮಂತಪ್ಪ ಬಂಡಿವಡ್ಡರ ಪ್ರಾಯ: 26 ವರ್ಷ, ವೃತ್ತಿ:ಮಶೀನ್ ಕೆಲಸ. ಸಾ: ಟೋಲ್‌ನಾಕಾ ಹತ್ತಿರ, ಲಕ್ಷ್ಮೀಗಿರಿ, ಧಾರವಾಡ ಹಾಲಿ: ಸುಜುಕಿ ಶೋರೂಮ್ ಹತ್ತಿರ ಚಿತ್ತಾಕುಲಾ, ಕಾರವಾರ
3) ಮೌಲಾಲಿ ತಂದೆ ಮಹ್ಮದ ಅಜಾದ ಸೈಯದ ಪ್ರಾಯ: 30 ವರ್ಷ, ವೃತ್ತಿ: ಕೂಲಿ ಸಾ: ರಾಜೀವನಗರ, ಕದ್ರಾ ಕಾರವಾರ
4) ಮುಬಾರಕ ತಂದೆ ಇಬ್ರಾಹಿಂ ಶೇಖ್ ಪ್ರಾಯ: 26 ವರ್ಷ, ವೃತ್ತಿ: ಚಾಲಕ ಸಾ: ವೈಟ್‌ಪೀಲ್ಡ್, ಬೆಂಗಳೂರು, ಹಾಲಿ: ರಾಜೀವನಗರ, ಕದ್ರಾ, ಕಾರವಾರ
5) ಎ.ಎಸ್. ಶೇಖ್ ಶರೀಫ್ ತಂದೆ ಎ.ಎಸ್. ಅಬ್ದುಲ್ ರಹೀಮ್ ಪ್ರಾಯ:36 ವರ್ಷ, ವೃತ್ತಿ: ಕ್ಯಾಬ್ ಡ್ರೈವರ್. ಸಾ: ತಿಗರಪಾಳ್ಯಾ, ಗಣೇಶ ಟೆಂಪಲ್ ಹತ್ತಿರ, ವೈಟ್‌ಫೀಲ್ಡ್, 5ನೇ ಕ್ರಾಸ್, ಬೆಂಗಳೂರು
6) ಭುರಖಾನ ತಂದೆ ಮೆಹಬೂಬಖಾನ. ಪ್ರಾಯ: 22 ವರ್ಷ, ವೃತ್ತಿ: ರೆಡಿಯಮ್ ಕಟ್ಟಿಂಗ್ ಸಾ: ಮಂಡಿಮೊಹಲ್ಲಾ, ಫೀರದೋಸ್ ಫಂಕ್ಷನ ಹಾಲ್ ಹತ್ತಿರ, ಮೈಸೂರು ಈ ಮೇಲಿನ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.
ಶ್ರೀ ಎಮ್. ನಾರಾಯಣ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ಹಾಗೂ ಶ್ರೀ ಎಮ್.ಜಗದೀಶ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಉತ್ತರ ಕನ್ನಡ ಜಿಲ್ಲೆ ಕಾರವಾರ ಶ್ರೀ ಗಿರೀಶ ಎಸ್.ವಿ. ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರವಾರ ಉಪವಿಭಾಗ ಕಾರವಾರ ರವರುಗಳ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಶೇಖರ ಮಠಪತಿ ರವರ ನೇತೃತ್ವದಲ್ಲಿ. ಶ್ರೀ ಉದ್ದಪ್ಪ ದರೆಪ್ಪನವರ ಪಿ.ಎಸ್.ಐ.(ಕಾ&ಸು) ಹಾಗೂ ತನಿಖಾಧಿಕಾರಿಯಾದ ಕುಮಾರಿ ಜಯತ್ರಿ ಪ್ರಭಾಕರ ಪಿ.ಎಸ್.ಐ.(ತನಿಖೆ-01) ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ 1314. ಮಹಾದೇವ ಸಿದ್ದಿ, ಸಿ.ಹೆಚ್.ಸಿ 1471 ಅಂಬರೀಶ ನಾಯ್ಕ, ಸಿ.ಹೆಚ್.ಸಿ 763 ಪ್ರಶಾಂತ ನಾಯ್ಕ, ಸಿಪಿಸಿಗಳಾದ ಶ್ರೀಕಾಂತ ಕಟಬರ, ಮನೋಜ ಡಿ, ಆಸಿಫ್ ಆರ್ ಕೆ. ರೋಹಿದಾಸ ದೇವಾಡಿಗ, ಶಿವಾನಂದ ನಾಗರದಿನ್ನಿ, ಜೀಪ ಚಾಲಕರಾದ ಎ.ಹೆಚ್.ಸಿ 90 ಸತೀಶ ನಾಯ್ಕ, ಎಪಿಸಿ 74 ರವಿ ಹಡಪದ ಹಾಗೂ ಕಾರವಾರ ಗ್ರಾಮೀಣ ಠಾಣೆಯ ಸಿಪಿಸಿ 1950 ಹನುಮಂತ ಸರೀಕರ ಇವರುಗಳ ತಂಡ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಕುಖ್ಯಾತ ಕಳ್ಳರನ್ನು ಭೇಟೆ ಆಡಿದ್ದಾರೆ. ಅಂಕೋಲಾ ಪೋಲೀಸರ ಚುರುಕಿನ ಕಾರ್ಯಾಚರಣೆಗೆ ಅಂಕೋಲದ ಜನತೆಯು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಮೇಲಾಧಿಕಾರಿಗಳಿಂದಲು ಅಂಕೋಲಾ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಪ್ರಸಂಸ್ಥೆಯ ಸುರಿಮಳೆ :
ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೃತ್ಯ ನಡೆದ 24 ಗಂಟೆಯ ಒಳಗಾಗಿ ಪ್ರಕರಣವನ್ನು ಬೇದಿಸಿದ್ದು, ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀ ಎಮ್. ನಾರಾಯಣ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡಜಿಲ್ಲೆ ಕಾರವಾರ ಹಾಗೂ ಶ್ರೀ ಎಮ್.ಜಗದೀಶ
ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಉತ್ತರ ಕನ್ನಡಜಿಲ್ಲೆ ಕಾರವಾರ.
ಶ್ರೀ ಗಿರೀಶ ಎಸ್.ವಿ. ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರವಾರ ಉಪವಿಭಾಗ ರವರು ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ