ಹೊಸಳ್ಳಿಯಲ್ಲಿ ಭರ್ಜರಿ ಯಶಸ್ಸು ಕಂಡ ಕಬಡ್ಡಿ ಪಂದ್ಯಾವಳಿ..


10 Dec 2024, 09:42 am, 218 reads

ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಅಯೋಜಿಸಿದ್ದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯು ಭರ್ಜರಿ ಯಶಸ್ಸು ಕಂಡಿದೆ. 

ಡಿಸೆಂಬರ್ 7ರ ಸಂಜೆ ಆರಂಭವಾದ 65 ಕೆಜಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಭಾನು ಜಿ.ಪಿ. ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಉತ್ತರಕನ್ನಡ ಜಿಲ್ಲೆ ಅದರಲ್ಲೂ ವಿಶೇಷವಾಗಿ ಯಲ್ಲಾಪುರ ತಾಲೂಕಿನಲ್ಲಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆ ತರುವಂತದ್ದು ಎಂದರು. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ದರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಂದ್ಯಾವಳಿಯ ಪ್ರಥಮ ಬಹುಮಾನ ನಗದು ಹಣವನ್ನು ಗ್ರಾಮ ಪಂಚಾಯತ್ ಹಾಲಿ ಸದಸ್ಯರಾದ ರೆಹಮತ್ ಅಬ್ಬಿಗೇರಿ ಹಾಗೂ ಟ್ರೋಫಿಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಸುನಿಲ ಕಾಂಬಳೆ ಪ್ರಾಯೋಜಿಸಿದ್ದರು. 

ದ್ವಿತೀಯ ಬಹುಮಾನದ ನಗದು ಹಣವನ್ನು ಯಲ್ಲಾಪುರ ಅರಣ್ಯ ವಿಭಾಗ ಹಾಗೂ ಟ್ರೋಫಿಯನ್ನು ಗ್ರಾಮ್ ಪಂಚಾಯತ್ ಸದಸ್ಯರಾದ ನಯನಾ ಶೆಂಡಗೆ ಪ್ರಾಯೋಜಿಸಿದ್ದರು. ತೃತೀಯ ಬಹುಮಾನದ ನಗದು ಹಣವನ್ನು ದೊಡ್ಲ ಡೈರಿ ಲಿಮಿಟೆಡ್ ಅವರು ಹಾಗೂ ಟ್ರೋಫಿಯನ್ನು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಪ್ರವರ್ತಕ ಅನಿಲ ಸಿದ್ದಿ ಪ್ರಾಯೋಜಿಸಿದ್ದರು. 

ಚತುರ್ಥ ಬಹುಮಾನದ ನಗದನ್ನು ಉ.ಕ ಜಿಲ್ಲಾ ಕಾಂಗ್ರೆಸ್ ಸೇವಾದಳ ಎಲ್ಲಾಪುರದ ಬ್ಲಾಕ್ ಅಧ್ಯಕ್ಷ ವಸಂತ ಕೂಗನವರ ಹಾಗೂ ಟ್ರೋಪಿಯನ್ನು ಎಚ್ ಕೆ ಜಿ ಎನ್ ಟೈಲ್ಸ್ ಟ್ರೇಡರ್ಸ್ ಅವರು ಪ್ರಾಯೋಜಿಸಿದ್ದರು. ಈ ವೇಳೆ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಉಪಸ್ಥಿರಿದ್ದವರಿಗೆ ಕಬ್ಬಡಿ ಕಮಿಟಿ ಹೊಸಳ್ಳಿ ವತಿಯಿಂದ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. 



ವಿಜೇತರು: 

ಪ್ರಥಮ - ಮುಂಡಗೋಡ ತಾಲೂಕಿನ ಮೈನಳ್ಳಿ ದ್ವಿತೀಯ - ಹಾಂಗ್ಯೋ ಬಾಯ್ಸ್ ಹೊಸಳ್ಳಿ ,ತೃತೀಯ - ಹಳಿಯಾಳ ತಾಲೂಕಿನ ಭಾಗವತಿ ,ಚತುರ್ಥ - ದೇಶಪಾಂಡೆ ನಗರ ಕೋಳಿಕೇರಿ ಪಂದ್ಯಾವಳಿಯಲ್ಲಿ ಯಲ್ಲಾಪುರ ಅರಣ್ಯ ಭಾಗದ ಎಸಿಎಫ್ ಭಾಗ್ಯಶ್ರೀ ಬಿರಾದರ್, ವಲಯ ಅರಣ್ಯ ಅಧಿಕಾರಿ ಅಜಯ್ ನಾಯ್ಕ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಗೀತಾ ಕೋಕರೆ, ಆರಕ್ಷಕ ಸಿಬ್ಬಂದಿ ರಾಘವೇಂದ್ರ ಮೂಳೆ, ಪ್ರಮುಖರಾದ ರೆಹಮತ್ ಅಬ್ಬಿಗೇರಿ, ದೊಡ್ಲಾ ಡೈರಿ ಲಿಮಿಟೆಡ್ ಎಚ್.ಆರ್. ಪ್ರಕಾಶ್, ಹಾಂಗ್ಯೋ ಐಸ್ ಕ್ರಿಮ್ಸ್ ಡಿಸ್ಪ್ಯಾಚ್ ಮ್ಯಾನೇಜರ್ ವೀರ್ ಕುಮಾರ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ಜಗ್ಗು ಹುಂಬೆ, ಸುನಿಲ ಕಾಂಬಳೆ, ಬಾಬು ಜಾನಕರ್, ಕಲ್ಲಪ್ಪ ಹೋಳಿ, ಅರ್ಜುನ್ ಬೆಂಗೇರಿ, ಮೌಲಾಲಿ ಮುಜಾವರ್, ಮಂಜುನಾಥ ಕೊರವರ್, ಕೇಶವ ಕಾಂಬಳೆ, ಶಂಕರ ಕಾಂಬಳೆ, ಮೌಲಾಲಿ ಶೇಖ್, ನಾರಾಯಣ ಕಾಂಬಳೆ, ದುರ್ಗಪ್ಪ ದಂಡಾಪುರ, ಪ್ರಕಾಶ್ ಮಿಂಡೊಳ್ಳಿ ಹಾಗೂ ಹೊಸಳ್ಳಿ ಗ್ರಾಮದ ಗುರುಹಿರಿಯರು, ಯುವಕರು ಉಪಸ್ಥಿತರಿದ್ದರು. ಪಂದ್ಯಾವಳಿಯು ಸಾವಿರಾರು ವೀಕ್ಷಕರ ಕಣ್ಣಿಗೆ ಸಾಕ್ಷಿಯಾಗಿತ್ತು.

ದೊಡ್ಲ ಡೈರಿ ಕಿರವತ್ತಿಯ ಎಚ್ ಆರ್ ಹಾಗೂ ಸಹಾಯಕ ವ್ಯವಸ್ಥಾಪಕ ಪ್ರಕಾಶ್ ಡಿ., ಎಚ್ ಆರ್ ವಿನಾಯಕ್ ಜಿ., ಕ್ವಾಲಿಟಿ ಇನ್ಚಾರ್ಜರ್ ಸಾಯಿ ಬಾಬು ವೈ. ಸೇರಿದಂತೆ ಇತರೆ ಸಿಬ್ಬಂದಿಗಳು ಬಹುಮಾನ ವಿತರಿಸಿ ಕ್ರೀಡಾಪಟುಗಳಿಗೆ ಅಭಿನಂದಿಸಿದರು.







ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: