ಅಂಕೋಲಾದಲ್ಲಿ ಹಿಂದೂ ದೇವರ ಹೆಸರಿನಿಟ್ಟುಕೊಂಡು ನಡೆಸುತ್ತಿದ್ದ ಪೈನಾನ್ಸ್ ಮಾಲೀಕನಿಂದ ಗ್ರಾಹಕರಿಗೆ ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚಿಗೆ ಹಣ ನೀಡದೇ ವಂಚನೆ ಮಾಡಿದ ಆರೋಪ : ದಿಕ್ಕು ತೋಚದೇ ನ್ಯಾಯಕ್ಕಾಗಿ ತಾಲೂಕು ಕಾನೂನು ಸೇವಾ ಸಮಿತಿಯ ಮೊರೆ ಹೋದ ವೃದ್ಧ ಗ್ರಾಹಕರು : ನ್ಯಾಯಾಲಯದಿಂದ ನೋಟಿಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡ ಫೈನಾನ್ಸ್ ಮಾಲೀಕ.


08 Dec 2024, 11:03 am, 1058 reads

ಅಂಕೋಲಾ : ತಾಲೂಕಿನಲ್ಲಿ ಹಿಂದೂ ದೇವರುಗಳ ಹೆಸರಿಟ್ಟುಕೊಂಡು ವಿವಿದೋದ್ದೇಶಗಳ ಸೌಹಾರ್ದ ಸಹಕಾರ ನಿಯಮಿತ ನಡೆಸುತ್ತಿದ್ದ ಫೈನಾನ್ಸ್ ಮಾಲೀಕನಿಂದ ಸ್ಥಳೀಯ ವೃದ್ಧ ಗ್ರಾಹಕರೊಬ್ಬರ ಅವಧಿ ಮುಗಿದ್ದಿದ್ದ 24 ಲಕ್ಷ 19 ಸಾವಿರ ಮುದ್ದತ್ ಠೇವಣಿ ಹಾಗೂ ಪ್ರಾರಂಭದಿಂದ ಇಲ್ಲಿವರೆಗಿನ ಬಡ್ಡಿ ಹಣವನ್ನು ನೀಡದೇ ಸತಾಯಿಸಿ ವಂಚನೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಫೈನಾನ್ಸ ಮಾಲಿಕನಿಂದ ತೊಂದರೆಗಿಡಾದ ಗ್ರಾಹಕ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.


ಪ್ರಕರಣದ ಹಿನ್ನೆಲೆ : 

ಅಂಕೋಲಾ ತಾಲೂಕಿನ ಪಟ್ಟಣ ಪ್ರದೇಶದಲ್ಲಿ ಹಿಂದೂ ದೇವರ ಎರಡೆರಡು ಹೆಸರನ್ನು ನಾಮಫಲಕದಲ್ಲಿ ಇಟ್ಟುಕೊಂಡು ಸಹಕಾರಿ ಸಂಘವನ್ನು ಪಟ್ಟಣ ಪ್ರದೇಶದ ಗಲ್ಲಿಯೊಳಗೆ ನಡೆಸುತ್ತಿದ್ದ ಫೈನಾನ್ಸ್ ಮಾಲೀಕನು ಸ್ಥಳೀಯ ನಿವಾಸಿಗಳಿಗೆ ತಮ್ಮ ಸಹಕಾರಿ ಸಂಘದಲ್ಲಿ ಮುದ್ದತ ಠೇವಣಿ ಹಣ ಇಡುವಂತೆ ಕೇಳಿಕೊಂಡಾಗ ಹೇಗೋ ತಮ್ಮ ಹತ್ತಿರದಲ್ಲಿ ಫೈನಾನ್ಸ್ ಇರುವುದರಿಂದ ವ್ಯವಹಾರಕ್ಕೆ ಸುಲಭವಾಗುತ್ತದೆ ಎಂದು ನಂಬಿ ಸುಮಾರು 24 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಮುದ್ದತ್ ಠೇವಣಿಯಾಗಿ ವೃದ್ಧ ಗ್ರಾಹಕಿ ಹೂಡಿಕೆ ಮಾಡಿದ್ದಾರೆ.


ಮುದ್ದತ್ ಠೇವಣಿ ಅವಧಿ ಮುಗಿದ ನಂತರ ಸದರಿ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಕೇಳಿಕೊಂಡಾಗ ಸಹಕಾರಿ ಸಂಘದ ಅಧ್ಯಕ್ಷ ವ್ಯವಸ್ಥಾಪಕರು ಹಣ ಹಿಂತಿರುಗಿಸದೆ ವೃದ್ಧ ಗ್ರಾಹಕರಿಗೆ ಸತಾಯಿಸಿದ್ದಾರೆ. 

ಫೈನಾನ್ಸ್ ಮಾಲೀಕರಿಂದ ನೊಂದು ತಮಗೆ ನ್ಯಾಯ ಕೊಡಿಸುವಂತೆ ಬೆಳಗಾವಿಯ ಸಹಕಾರಿಯ ಪ್ರಾಂತೀಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದರಿ ಪ್ರಕರಣದಲ್ಲಿ ಪ್ರಾಂತೀಯ ವ್ಯವಸ್ಥಾಪಕರ ಮದ್ವಸ್ತಿಕೆ ಮಾಡಿದಂತೆ ಫೈನಾನ್ಸ್ ನ ಅಧ್ಯಕ್ಷ ಆ ಸಂದರ್ಭದಲ್ಲಿ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು ಸದರಿ ಹಣವನ್ನು 20-05-2024 ರೊಳಗೆ ಪೂರ್ತಿ ಹಣ ಮರುಪಾವತಿ ಮಾಡುವುದಾಗಿ ಒಪ್ಪಿಕೊಂಡು ಬಾಂಡ್ ಮೇಲೆ ಮುಚ್ಚಳಕ್ಕೆ ಪತ್ರ ಬರೆದು ಕೊಟ್ಟು , ಇಲ್ಲಿಯವರೆಗೆ ಹಣವನ್ನು ಹಿಂತಿರುಗಿಸದೇ ಇರುವ ಕಾರಣ ವೃದ್ಧ ಗ್ರಾಹಕಿ ಮಾನಸಿಕವಾಗಿ ಕುಗ್ಗಿ ಹೋಗಿ, ಔಷಧೋಪಚಾರಕ್ಕೆ ಹಣವಿಲ್ಲದೆ.. ವೃದ್ಯಾಪದಿಂದ ಹಾಸಿಗೆ ಹಿಡಿದಿದ್ದು. ವೃದ್ಯಾಪದಲ್ಲಿ ಬೇಕೆಂದು ಕಷ್ಟಪಟ್ಟು ಕೂಡಿಟ್ಟು ಹಣವನ್ನು ಹಿಂತಿರುಗಿಸದೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಫೈನಾನ್ಸ್ ನ ವಿರುದ್ಧ ತನ್ನ ಅತ್ತೆಯ ಪರವಾಗಿ ಸ್ಥಳೀಯ ನಿವಾಸಿಯು ದೂರನ್ನು ದಾಖಲಿಸಿದ್ದಾರೆ.. 

ಜೊತೆಗೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಅಂಕೋಲಾ ಘಟಕಕ್ಕೂ ತಮಗಾದ ಅನ್ಯಾಯದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.. 

ತಾಲೂಕು ಕಾನೂನು ಸೇವಾ ಸಮಿತಿಯಿಂದ ಫೈನಾನ್ಸ್ ಮಾಲೀಕನಿಗೆ ನೋಟಿಸ್ ಜಾರಿಯಾಗಿದ್ದು.. ಫೈನಾನ್ಸ್ ಮಾಲಿಕ ವಿಚಾರಣೆಗೆ ಬರದೇ ಗೈರಾಗಿದ್ದು ತಿಳಿದು ಬಂದಿದೆ.

ಫೈನಾನ್ಸ್ ಅಧ್ಯಕ್ಷ- ತಾಲೂಕು ಕಾನೂನು ಸೇವಾ ಸಮಿತಿಯ ಮೂಲಕ ವೃದ್ಧ ಗ್ರಾಹಕರಿಗೆ ಹಣವನ್ನು ಪೂರೈಸದೇ ವಂಚನೆ ಮುಂದುವರಿಸಿದಲ್ಲಿ , ನಿಮ್ಮ ವಿಕಾಸ ವಾಹಿನಿಯಲ್ಲಿ ಫೈನಾನ್ಸ್ ಮಾಲೀಕರ ದೋಖಾ ಮಾಡಿರುವ ಕುರಿತಾದ ಇಂಚಿಂಚು ವರದಿಯನ್ನು ಮುಂದಿನ ಭಾಗದಲ್ಲಿ ಪ್ರಕಟಿಸಲಾಗುತ್ತದೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 







ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: