ಅಂಕೋಲಾ- ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ಬಿನಾ ಬಾರಿನ ಅನತಿ ದೂರದಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ಕಟ್ಟುತ್ತಿದ್ದು.. ಸದರಿ ಕಟ್ಟಡದ ಪಕ್ಕದಲ್ಲಿ ಗುಡಿಗಾರ ಗಲ್ಲಿಗೆ ಸಂಪರ್ಕಿಸುವ ಪುರಸಭೆ ರಸ್ತೆ ಇದ್ದು , ಕಳೆದ 3-4 ತಿಂಗಳಿಂದ ಈ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಬಂದ ಮಾಡಿ ಕಾನೂನನ್ನು ಉಲ್ಲಂಘಿಸಿದ ಘಟನೆ ನಡೆದಿದ್ದು
ಖಾಸಗಿ ಕಟ್ಟಡದ ಮಾಲೀಕನು ತಾನು ಕಟ್ಟಡಕ್ಕೆ ತಂದಿರುವ ಜಲ್ಲಿಕಲ್ಲುಗಳನ್ನು ರಸ್ತೆಯ ಮಧ್ಯ ಭಾಗದಲ್ಲಿ ಅಡ್ಡಲಾಗಿ ದಾಸ್ತಾನು ಮಾಡಿ. ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಪುರಸಭೆಯ ನಿಯಮವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ವತ್ತನ್ನು ದುರ್ಬಳಕೆ ಮಾಡಿಕೊಂಡು ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ವಿರುದ್ಧ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ವ್ಯಾಪಕ ಟೀಕೆಗಳು- ಆಕ್ರೋಶ ವ್ಯಕ್ತವಾಗಿತ್ತು.
ವಿಕಾಸ ವಾಹಿನಿಯಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಅರ್ಧ ಗಂಟೆಯಲ್ಲಿ ಜೆಸಿಬಿ ಅನ್ನು ತಂದು ರಸ್ತೆಗೆ ಹಾಕಿರುವ ಜಲ್ಲಿ ಕಲ್ಲುಗಳನ್ನು ಕುಲ್ಲಾಪಡಿಸಿದ್ದು ಸಂಚಾರಕ್ಕೆ ಮುಕ್ತವಾಗಿದೆ.
.
ವರದಿ: ಕಿರಣ ಚಂದ್ರಹಾಸ ಗಾಂವಕರ