ಅಂಕೋಲಾದ ಪುರಸಭೆಯ ರಸ್ತೆಯು ಖಾಸಗಿಯವರ ಪಾಲಾಯಿತೇ.? ಸಾರ್ವಜನಿಕರ ರಸ್ತೆಯಲ್ಲಿ ಜಲ್ಲಿಕಲ್ಲುಗಳನ್ನು ದಾಸ್ತಾನು ಮಾಡಿದನೇ ಪುರಸಭೆ ಸದಸ್ಯೆಯ ಪತಿರಾಯ.?!!


04 Dec 2024, 09:23 am, 1217 reads

ಅಂಕೋಲಾ- ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ಬಿನಾ ಬಾರಿನ ಅನತಿ ದೂರದಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ಕಟ್ಟುತ್ತಿದ್ದು. ಸದರಿ ಕಟ್ಟಡದ ಪಕ್ಕದಲ್ಲಿ ಗುಡಿಗಾರ ಗಲ್ಲಿಗೆ ಸಂಪರ್ಕಿಸುವ ಪುರಸಭೆ ರಸ್ತೆ ಇದ್ದು . ಕಳೆದ 3-4 ತಿಂಗಳಿಂದ ಈ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಬಂದ ಮಾಡಿ ಕಾನೂನನ್ನು ಉಲ್ಲಂಘಿಸಿದ ಘಟನೆ ನಡೆದಿದೆ. 

ಖಾಸಗಿ ಕಟ್ಟಡದ ಮಾಲೀಕನು ತಾನು ಕಟ್ಟಡಕ್ಕೆ ತಂದಿರುವ ಜಲ್ಲಿಕಲ್ಲುಗಳನ್ನು ರಸ್ತೆಯ ಮಧ್ಯ ಭಾಗದಲ್ಲಿ ಅಡ್ಡಲಾಗಿ ದಾಸ್ತಾನು ಮಾಡಿ. ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಪುರಸಭೆಯ ನಿಯಮವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ವತ್ತನ್ನು ದುರ್ಬಳಕೆ ಮಾಡಿಕೊಂಡು ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ವಿರುದ್ಧ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ವ್ಯಾಪಕ ಟೀಕೆಗಳು- ಆಕ್ರೋಶ ವ್ಯಕ್ತವಾಗಿದೆ. 

ಖಾಸಗಿ ಕಟ್ಟಡದ ನಿರ್ಮಾಣದ ವಸ್ತುಗಳನ್ನು ರಸ್ತೆಯಲ್ಲಿ ಸುರಿದು,ಸಾರ್ವಜನಿಕ ರಸ್ತೆಯನ್ನು ಸಂಪೂರ್ಣವಾಗಿ 3-4 ತಿಂಗಳಿಂದ ಬಂದ್ ಮಾಡಿದ್ದು, ಸಂಬಂದಿಸಿದ ಪುರಸಭೆ ಅಧಿಕಾರಿಗಳು ಇಲ್ಲಿಯವರೆಗೆ ಜಾಣ ನಿದ್ರೆಗೆ ಜಾರಿ.ಸಮಸ್ಯೆಯನ್ನು ಪರಿಹರಿಸಲು ಯಾವುದೇ ತ್ವರಿತ ಕ್ರಮ ತೆಗೆದುಕೊಳ್ಳದೇ ಸಂಪೂರ್ಣವಾಗಿ ವಿಫಲರಾಗಿದ್ದಾರೆ. 

ಸಾರ್ವಜನಿಕ ರಸ್ತೆಗಳನ್ನು ತಡೆಹಿಡಿಯುವುದು ಭಾರತೀಯ ಕಾನೂನು ಪ್ರಕಾರ ಉಲ್ಲಂಘನೆಯಾಗಿದೆ. ಕರ್ನಾಟಕ ಪುರಸಭೆ ಕಾಯಿದೆ, 1976, ಸೆಕ್ಷನ್ 288 ಪ್ರಕಾರ, ಯಾವುದೇ ವ್ಯಕ್ತಿಯು ಅಥವಾ ಸಂಸ್ಥೆಯು ಸಾರ್ವಜನಿಕ ರಸ್ತೆಯ ಮೇಲೆ ಅನುಮತಿ ಇಲ್ಲದೆ ಸಾರ್ವಜನಿಕರು ಓಡಾಡಲು ಅಡ್ಡಿ ಮಾಡುವುದು ಅಥವಾ ದುರ್ಬಳಕೆ ಮಾಡುವುದು ಅಕ್ರಮವಾಗಿದೆ. 


ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 283 ಪ್ರಕಾರ, ಸಾರ್ವಜನಿಕ ಸ್ಥಳದ ಅಕ್ರಮ ದಾಸ್ತಾನು. ಕಬಳಿಕೆ, ಅಪಾಯ, ಅಥವಾ ತೊಂದರೆ ಉಂಟುಮಾಡುವ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತದೆ. 

ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಗುಡಿಗಾರ ಗಲ್ಲಿಯ ಸಾರ್ವಜನಿಕ ರಸ್ತೆಯ ಮೇಲೆ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ದಾಸ್ತಾನು ಮಾಡಿರುವ ಜಲ್ಲಿ ಕಲ್ಲುಗಳಿಂದ ರಸ್ತೆ ಬಂದ್ ಆಗಿ ಸಾರ್ವಜನಿಕರಿಗೆ ಓಡಾಡಲು ಸಮಸ್ಯೆ ಆಗುತ್ತಿರುವ ಕುರಿತು ಮಾಹಿತಿ ನೀಡಿದಾಗ, ಪುರಸಭೆ ಮುಖ್ಯ ಅಧಿಕಾರಿಗಳು ಲಿಖಿತ ವಾಗಿ ದೂರನ್ನು ನೀಡುವಂತೆ ಸೂಚಿಸಿದ್ದಾರೆ. ಜೊತೆಗೆ ತಮ್ಮ ಸಿಬ್ಬಂದಿಯನ್ನು ಕರೆದು ಖಾಸಗಿ ವ್ಯಕ್ತಿಗಳಿಗೆ ಸೂಚನೆ ನೀಡಿ ಜಲ್ಲಿ ಕಲ್ಲುಗಳನ್ನು ತೆರೆವುಗೊಳಿಸಿ ರಸ್ತೆ ಯನ್ನು ಕುಲ್ಲಾಪಡಿಸುವಂತೆ ಸೂಚಿಸಿದ್ದಾರೆ. 

ಸದರಿ ಸಾರ್ವಜನಿಕ ರಸ್ತೆಯನ್ನು ಜಲ್ಲಿಕಲ್ಲುಗಳನ್ನು ಹಾಕಿ ಬಂದ್ ಮಾಡಿರುವ ಆ ಕಟ್ಟಡದ ಮಾಲೀಕರು ಪ್ರಭಾವಿ ಪುರಸಭೆಯ ಹಾಲಿ ಸದಸ್ಯೆಯ ಪತಿರಾಯ ಎಂದು ತಿಳಿದು ಬಂದಿದೆ. 

ಸಾರ್ವಜನಿಕ ಸ್ವತ್ತಿನ ದುರ್ಬಳಕೆಯನ್ನು ತಡೆಯಲು ಪುರಸಭೆ ಕಾನೂನುಗಳು ಅನುಷ್ಠಾನದಲ್ಲಿ ಇದ್ದರು ಕೂಡ ಪುರಸಭೆ ಮುಖ್ಯ ಅಧಿಕಾರಿಗಳು ಸಾರ್ವಜನಿಕರ ದೂರು ಬಂದೊಡನೆ ತಮ್ಮ ಜವಾಬ್ದಾರಿಯನ್ನು ಅರಿತು ಕೂಡಲೇ ತಾವು ಸ್ಥಳದ ಪರಿಶೀಲನೆ ನಡೆಸದೇ ಇರುವುದು ಜೊತೆಗೆ ಕಾನೂನು ಉಲ್ಲಂಘಿಸಿದ ಪ್ರಭಾವಿ ಪುರಸಭೆಯ ಸದಸ್ಯೆಯ ಪತಿಯ ಕಟ್ಟಡದ ಮಾಲೀಕನಿಗೆ ಸೂಕ್ತ ಕ್ರಮ ಜರುಗಿಸದೇ . Ac ರೂಮ್ ಒಳಗೊಂಡ ಕಚೇರಿಯಲ್ಲಿ ಕುಳಿತು ತಮ್ಮ ಅಧಿನ್ ಸಿಬ್ಬಂದಿಗಳಿಗೆ ದೂರು ಬಂದ ಸ್ಥಳಕ್ಕೆ ಹೋಗಿ ಬನ್ನಿ ಎಂದು ಕಳುಹಿಸಿ ಕೊಟ್ಟಿದ್ದು. ರಸ್ತೆ ಗೆ ಜಲ್ಲಿ ಹಾಕಿದ ಸ್ಥಳದಲ್ಲಿ ಹುಲ್ಲುಕಡ್ಡಿಯು ಈ ಅಧಿಕಾರಿಗಳಿಂದ ಅಲ್ಲಾಡಿಸದೇ ಇರುವ ಕಾರಣ . ನಮ್ಮಿ ಅಧಿಕಾರಿಗಳ ದಕ್ಷತೆ- ಕಾರ್ಯಕ್ಷಮತೆಯನ್ನು ಎತ್ತಿ -ಎತ್ತಿ ತೋರಿಸುತ್ತದೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 






ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: