ಅಂಕೋಲಾ : ಹಸು ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸಂಗತಿ ನಡೆದಿದೆ. ದೇಸಿ ತಳಿಯ ಹಸು ಇದಾಗಿದ್ದು, ಮೂರು ಕರುಗಳೂ ಆರೋಗ್ಯವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವನಜಾ ಗಜಾನನ ಶೆಟ್ಟಿ ಎಂಬುವವರಿಗೆ ಸೇರಿದ ದೇಸಿ ತಳಿಯ ಹಸು ಕಳೆದ 20 ದಿನಗಳ ಹಿಂದೆ ಮೂರು ಕರುಗಳಿಗೆ ಜನ್ಮ ನೀಡಿದೆ.
ಹಸು ಹಾಗೂ ಕರುಗಳಿಗೆ ಪೂಜೆ ಮಾಡಿದ ವನಜಾ ಅವರು, ಹಸುವಿಗೆ ಲಕ್ಷ್ಮೀ ಎಂದು ಹೆಸರಿಟ್ಟಿದ್ದಾರೆ. ಮೂರು ಕರು ಹಾಕಿದ ಹಿನ್ನೆಲೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ವನಜಾ ಶೆಟ್ಟಿ ಅವರ ಕುಟುಂಬ ಭಾವಿಸಿದ್ದಾರೆ.
ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕಪಕ್ಕದ ಊರಿನವರು ಬಂದು ಕರುಗಳನ್ನ ನೋಡಿ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಹಸು ಒಂದೇ ಕರು ಹಾಕೋದು, ಆದರೆ ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಮೂರು ಕರುಗಳಿಗೆ ಜನ್ಮ ನೀಡುವುದು ತುಂಬಾ ವಿರಳ.
ತಮ್ಮ ಮನೆಯಲ್ಲಿ ಗೋಮಾತೆಯು 3 ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆಯನ್ನು ಮಾಹಿತಿ ಹಕ್ಕು ಕಾರ್ಯಕರ್ತ ಗಜಾನನ ಶೆಟ್ಟಿ ಯವರು ವಿಕಾಸ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ