ಅಂಕೋಲಾ: ಕಿರು ಸೇತುವೆಯೊಂದಕ್ಕೆ ಹಗ್ಗದ ಒಂದು ತುದಿ ಕಟ್ಟಿ , ಹಗ್ಗದ ಇನ್ನೊಂದು ತುದಿಯನ್ನು ನೇಣು ಮಾಡಿಕೊಂಡು ಕುತ್ತಿಗೆಗೆ ಬಿಗಿದುಕೊಂಡ ಯುವಕನೋರ್ವ ನೇಣಿಗೆ ಶರಣಾದ ಘಟನೆ ಅವರ್ಸಾದ ಅಜ್ಜಪ್ಪ ಶೇಟವಾಡಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಅವರ್ಸಾ ರಾಜೇಶ ಕೃಷ್ಣ ಗಾಂವಕರ (ಪಡ್ತೀ) ಪ್ರಾಯ 20 ವರ್ಷದ ಯುವಕ ಮೃತ ದುರ್ದೈವಿಯಾಗಿದ್ದು, ಈತನು ಯಾವುದೋ ಕ್ಷುಲ್ಲಕ ಕಾರಣಕ್ಕೆ ತಾಯಿಯ ಹತ್ತಿರ ಬೆಳಗಿನ ಜಾವ ಜಗಳವಾಡಿಕೊಂಡು ಮನೆಯಿಂದ ತೆರಳಿದ್ದು ಮೂಡಕಟ್ಟಾ – ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿ ,ಕುತ್ತಿಗೆಗೆ ನೇಣು ಬಿಗಿದುಕೊಂಡು ಮೇಲಿನಿಂದ ಜಿಗಿದು ಸಾವನೋಪ್ಪಿದಾನೆ .
ಬೆಳಿಗ್ಗೆ ಅದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಇವರ ತಂದೆಯು ಕೂಡ 8 ವರ್ಷಗಳ ಹಿಂದೆ ನೇಣು ಹಾಕಿಕೊಂಡು ಮನೆಯಲ್ಲಿ ಮೃತಪಟ್ಟಿದ್ದು..ತಂದೆ ಹಾದಿಯನ್ನೇ ಮಗ ಅನುಸರಿಸಿ ಚಿಕ್ಕ ವಯಸ್ಸಿನಲ್ಲಿ ದುರಂತ ಸಾವಿಗಿಡಾಗಿದ್ದಾನೆ. ಮೃತ ಯುವಕ ತನ್ನ ತಾಯಿ ಮತ್ತು ಎರಡು ಜನ ಸಹೋದರರನ್ನು ಅಗಲಿದ್ದಾನೆ.
ಸಿಪಿಐ ಚಂದ್ರಶೇಖರ ಮಠಪತಿ , ಪಿಎಸ್ಐ ಸುನೀಲ್ ಹುಲ್ಗೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಹಾಗೂ ಸ್ಥಳೀಯರು ಸಹಕರಿಸಿದರು. ಮೃತ ಯುವಕ ಚಿಕ್ಕ ವಯಸ್ಸಿನಲ್ಲಿ ಸರಾಯಿ ಚಟಕ್ಕೆ ದಾಸನಾಗಿದ್ದ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು.ಯುವಕನ ಸಾವಿಗೆ ನಿಖರ ಕಾರಣ ಪೊಲೀಸ್ ಇಲಾಖೆಯಿಂದ ತಿಳಿದು ಬರಬೇಕಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ