ಅಂಕೋಲಾ : ಪುರಸಭೆಯ ಹುಲಿದೇವರವಾಡ ವಾರ್ಡ್ ನ ನೂತನ ಸದಸ್ಯರಾಗಿ ಕಾಂಗ್ರೆಸ್ ಅಭ್ಯರ್ಥಿ ಅನಂದಗಿರಿಯ ನಾಗಪ್ಪ ಗೌಡರವರು (286) ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಈ ಹಿಂದೆ ಪುರಸಭೆಯ ಹುಲಿದೆವರವಾಡ ವಾರ್ಡಿನ ಚುನಾಯಿತ ಸದಸ್ಯರಾದ ಜಗದೀಶ ನಾಯಕ (ಜಗದೀಶ್ ಮಾಸ್ತರ್) ರವರ ನಿಧನ ನಂತರ ಪುರಸಭೆಯಲ್ಲಿ ಹುಲಿದೆವರವಾಡದ ಸದಸ್ಯರ ಖುರ್ಚಿ ಖಾಲಿಯಾಗಿತ್ತು.
ಹುಲಿದೆವರವಾಡ ವಾರ್ಡಿನ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯನ್ನು ದಿನಾಂಕ 23-11-2024 ರಂದು ನಡೆಸಲಾಗಿತ್ತು. ಚುನಾವಣೆಯನ್ನು ಹುಲಿದೆವರವಾಡದ ಸರಕಾರಿ ಕಿರಿಯಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಬಿಜೆಪಿ ಇಂದ ಹುಲಿದೇವರವಾಡದ ಮಂಗೇಶ ಗೌಡ ಹಾಗೂ ಕಾಂಗ್ರೆಸ್ ನಿಂದ ಅನಂದಗಿರಿಯ ನಾಗಪ್ಪ ಗೌಡ ರವರು ಸ್ಪರ್ಧಿಸಿದ್ದರು. ಈ ಚುನಾವಣೆಯು ಬಹಳ ರೋಚಕತೆಗೆ ತಿರುಗಿದ್ದು ಕೊನೆಗೂ ಕಾಂಗ್ರೆಸ್ಸಿನ ಅಭ್ಯರ್ಥಿ ನಾಗಪ್ಪ ಗೌಡ ಗೆದ್ದು ಬೀಗಿದ್ದಾರೆ..
ವರದಿ: ಸುಪ್ರಿಯಾ ವಿಷ್ಣು ನಾಯ್ಕ