ಅಜ್ಜಿಕಟ್ಟಾ-ಹುಲಿದೇವರವಾಡ ಬಳಿ ಸಾರ್ವಜನಿಕರಿಂದ ಅಂಡರ್ ಪಾಸ್ ಗೆ ಬೇಡಿಕೆಯಿಟ್ಟು ಪ್ರತಿಭಟನೆ.. ಏಳು ವರ್ಷದಿಂದ ಮುಂದಿಟ್ಟ ಅಂಡರ್ ಪಾಸ್ ಬೇಡಿಕೆ ಈಡೇರುವುದು ಎಂದು..?


26 Nov 2024, 01:23 pm, 312 reads

ಅಂಕೋಲಾ : ಅಜ್ಜಿಕಟ್ಟಾ-ಹುಲಿದೇವರವಾಡ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಅಪಾಯಕಾರಿ ರಸ್ತೆಯನ್ನು ಅನ್ನು ಖಂಡಿಸಿ ಸಾರ್ವಜನಿಕರು ಅಂಡರ್ ಪಾಸ್ ಗಾಗಿ ಏಳು ವರ್ಷಗಳಿಂದ ಬೇಡಿಕೆ ಇಡುತ್ತ ಬಂದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಜಿಲ್ಲಾಡಳಿತ ದಿಂದ ಯಾವುದೇ ಫಲ ಸಿಕ್ಕಿಲ್ಲ. 

ಪ್ರತಿಭಾರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (NHAI) ಅಂಡರ್ ಪಾಸ್ ನ ಆಶ್ವಾಸನೆ ಸಿಕ್ಕಿದೆ ಬಿಟ್ಟರೆ, ಕಾರ್ಯರೂಪಕ್ಕೆ ಬಂದಿಲ್ಲ. ಆದರಿಂದ ಹುಲಿದೇವರವಾಡ ಮತ್ತು ಅಜ್ಜಿಕಟ್ಟಾ ಸಾರ್ವಜನಿಕರು ಇಂದು ಅಜ್ಜಿಕಟ್ಟಾ - ಹುಲಿದೆವರವಾಡದ ಬಳಿ ಪ್ರತಿಭಟನೆ ನಡೆಸಿದರು. 


ಅಂಡರ್ ಪಾಸ್ ನ ಅವಶ್ಯಕತೆ... 

ಅಜ್ಜಿಕಟ್ಟಾ-ಹುಲಿದೇವರವಾಡ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿದೆ, ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಇರುವ ಸಾರ್ವಜನಿಕರಿಗೆ ದಿನಂಪ್ರತಿ ಹೆದ್ದಾರಿ ಕ್ರಾಸ್ ಮಾಡುವುದೇ ಒಂದು ಸಾಹಸದ ಕೆಲಸ ಹಾಗೂ ತಲೆಬಿಸಿಯಾಗಿ ಪರಿಣಮಿಸಿದೆ. ಚಿಕ್ಕ ಮಕ್ಕಳು ಶಾಲೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುವುದು ಅಪಾಯಕಾರಿಯೂ ಆಗಿದೆ.

ಅವೈಜ್ಞಾನಿಕವಾಗಿರುವ, ಇಳಿಜಾರಿನಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯಿಂದ ಸಾಗುವ ಬೃಹತ್ ವಾಹನಗಳ ವೇಗವು ಹೇಳತೀರದು, ಹೀಗಿರುವಾಗ ಹಿರಿಯ ನಾಗರಿಕರಿಗೆ, ಚಿಕ್ಕ ಮಕ್ಕಳಿಗೆ, ಅಷ್ಟೇ ಅಲ್ಲದೆ ವಯಸ್ಕರಿಗೂ ಹೆದ್ದಾರಿ ಕ್ರಾಸ್ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಹೆದ್ದಾರಿ ಕ್ರಾಸ್ ಮಾಡುವಾಗ ಸ್ವಲ್ಪ ಎಡವಿದರೂ ಅಪಘಾತ ಕಟ್ಟಿಟ್ಟ ಬುತ್ತಿ..! 

ಆದರಿಂದ ಸಾರ್ವಜನಿಕರು ಇಂದು ಅಜ್ಜಿಕಟ್ಟಾ- ಹುಲಿದೇವರವಾಡ ಬಳಿ ಅಂಡರ್ ಪಾಸ್ ಗೆ ಬೇಡಿಕೆಯಿಟ್ಟು ಪ್ರತಿಭಟನೆ ಮಾಡಿದರು. ಇನ್ನೂ ಮುಂದಾದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)  ಹಾಗೂ ಜಿಲ್ಲಾಡಳಿತ ಈ ಅಪಾಯಕಾರಿ ರಸ್ತೆಯನ್ನು ಗಣನೆಗೆ ತೆಗೆದುಕೊಂಡು, ಸಾರ್ವಜನಿಕರ ಹಿತಾಸಕ್ತಿಗೆ ಒತ್ತುಕೊಟ್ಟು ಅಂಡರ್ ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡುತ್ತಾರೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.


ವರದಿ: ಸುಪ್ರಿಯಾ ವಿಷ್ಣು ನಾಯ್ಕ 





ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: