ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ ನಾಮಧಾರಿ ಸಮಾಜದ ದಹೀಂಕಾಲ ಉತ್ಸವವು ಅತ್ಯಂತ ವಿಜೃಭಣೆಯಿಂದ ನೆರವೇರಿತು. ಮಂಗಳೂರು, ಉಡುಪಿ, ಅವರ್ಸಾದಿಂದ ವಿವಿಧ ಕಲಾ ತಂಡಗಳು ತಮ್ಮ ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಉತ್ಸವಕ್ಕೆ ರಂಗನ್ನು ತಂದವು. ದಹೀಂಕಾಲ ಉತ್ಸವದ ನಿಮಿತ್ತ ಭೂಮಿತಾಯಿ ಶ್ರೀಶಾಂತಾದುರ್ಗಾ ದೇವಿ, ಹಾಗೂ ದೊಡ್ಡ ದೇವರೆಂದೇ ಕರೆಯಲ್ಪಡುವ ಶ್ರೀವೆಂಕಟರಮಣ ದೇವರ ದೀಪ ಹಾಗೂ ಪುಷ್ಪಾಲಂಕೃತ ರಥಗಳು ರಥ ಬೀದಿಯಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬಂಡಿಬಜಾರ್ ವರೆಗೂ ಸಾಗಿದವು. ಹೀಗೆ ದೇವರ ರಥಗಳು ಸಾಗಿ ಬರುವ ರಸ್ತೆಯುದ್ದಕ್ಕೂ ವಿದ್ಯುತ್ ದೀಪದ ಸರಗಳಿಂದ ಶೃಂಗರಿಸಿದ್ದರು ಅಷ್ಟೇ ಅಲ್ಲದೆ ಆಕರ್ಷಕ ಮಹಾದ್ವಾರ, ತಳಿರು ತೋರಣಗಳಿಂದ ರಥ ಸಾಗಿಬರುವ ರಸ್ತೆಯು ನೋಡುಗರ ಕಣ್ಮನ ಸೆಳೆಯುತ್ತಿದ್ದವು.
ಯಾವ ಯಾವ ಕಲಾ ತಂಡಗಳು ಕಲಾ ಪ್ರದರ್ಶನ ಮಾಡಿದವು ನೋಡಿ...
ಭೂಮ್ತಾಯಿ ಶ್ರೀ ಶಾಂತಾದುರ್ಗ ಹಾಗೂ ದೊಡ್ಡ ದೇವರು ಶ್ರೀ ವೆಂಕಟರಮಣ ದೇವರ ರಥಗಳು ಸಾಗಿ ಬರುವ ದಾರಿಯುದ್ದಕ್ಕೂ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಕಲಾ ತಂಡಗಳು ತಮ್ಮ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಮುಂದೆ ಸಾಗಿದವು. ಮೊದಲನೆಯದಾಗಿ ತಿರುಪತಿ ವೆಂಕಟರಮಣ ದೇವರ ಸ್ತಬ್ಧ ಚಿತ್ರ, ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ, ಮೆರವಣಿಗೆಗೆ ಶುಭಾರಂಭವನ್ನು ಮಾಡಿದವು. ಮಂಗಳೂರಿನ ಶ್ರೀ ರಾಮ ಲೀಲಾಮೃತ , ಉಡುಪಿಯಿಂದ ಶ್ರೀ ಧೂಮವತಿ ಚಂಡೆ - ವಾಯ್ಲಿನ್, ಉಡುಪಿಯಿಂದ ವ್ಯಾಘ್ರ ಬೇಟೆ, ಗೊಂಬೆ ಕುಣಿತ, ಮಂಗಳೂರಿನ ಮಹಿಷಾಸುರ ಮರ್ಧಿನಿ, ಅವರ್ಸದ ದಕ್ಷ ಸಂಹಾರ, ಮಂಗಳೂರಿನ ಶ್ರೀ ಕೃಷ್ಣ ಲೀಲಾ ವಿನೋದ, ಅಂಕೋಲದ ಮಹಾಕಾಳಿ ದಿವ್ಯ ಸ್ವರೂಪ, ಉಡುಪಿಯ ಬ್ಲ್ಯಾಕ್ ಘೋಸ್ಟ್, ಅವರ್ಸದ ಅಯ್ಯಪ್ಪ ಸ್ವಾಮಿಯ ರಾಕ್ಷಸ ಸಂಹಾರ ರೂಪಕ, ಉಡುಪಿಯ ಫನ್ನಿ ಮಂಕಿ, ಉಡುಪಿಯ ಮಕ್ಕಳ ಸ್ಟಿಕ್ ಡ್ಯಾನ್ಸ್ ಗಳು ನೆರೆದಂತಹ ಜನರಿಗೆ ಮನೋರಂಜನೆಯನ್ನು ನೀಡುವ ಮೂಲಕ ಕಣ್ಮನ ಸೆಳೆದವು..
ತಾಲೂಕಿನ ನಾಮಧಾರಿ ಸಮಾಜದ ಅಧ್ಯಕ್ಷರು ಬಾಲಕೃಷ್ಣ ನಾಯ್ಕ, ಉಪಾಧ್ಯಕ್ಷರು ವಿಘ್ನೇಶ್ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಹಾಗೂ ನಾಮಧಾರಿ ಸಮಾಜದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು..
ವರದಿ: ಸುಪ್ರಿಯಾ ವಿಷ್ಣು ನಾಯ್ಕ