ಕುಮಟಾ ವಕೀಲರ ಸಂಘದ 2024-25 ನೇ ಸಾಲಿನ ಚುನಾವಣೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿ ಶ್ರೀ ಶ್ರೀಧರ ರಾಮಚಂದ್ರ ಶಾನಭಾಗ ರವರು ಅವಿರೋಧವಾಗಿ ಆಯ್ಕೆಯಾದರೂ.
ಉಪಾಧ್ಯಕ್ಷರಾಗಿ ಶ್ರೀ ಶ್ರೀನಿವಾಸ ಜನಾರ್ದನ ನಾಯ್ಕ ವಕೀಲರು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸತತ ಮೂರನೇ ಬಾರಿಗೆ ಕುಮಾರಿ ಮೀನಾಕ್ಷಿ ಉದಯ ನಾಯ್ಕ ವಕೀಲರು, ಅವಿರೋದ ಆಯ್ಕೆಯಾದರು .
ಸಹಕಾರ್ಯದರ್ಶಿ ಯಾಗಿ ಶ್ರೀಮತಿ ಸುಮಾ ಜಿ. ಗುನಗಾ ವಕೀಲರು,
ಖಜಾಂಚಿಯಾಗಿ ಶ್ರೀ ರಾಜಾರಾಮ ನಾಯ್ಕ ವಕೀಲರು, ಆಯ್ಕೆಯಾಗಿರುತ್ತಾರೆ.
ಈ ಚುನಾವಣೆಯ ಮೂಲಕ ವಕೀಲರ ಸಂಘದ ನಾಯಕತ್ವ ಮತ್ತು ನಿರ್ವಹಣೆಯ ಕ್ರಮವನ್ನು ನಿರ್ಧರಿಸಲಾಗುತ್ತದೆ ಮತ್ತು ವಕೀಲರ ಸಂಘದ ಸದಸ್ಯರ ಹಿತಾಸಕ್ತಿಗಳನ್ನು ಪ್ರತಿನಿಧಿಸಲಾಗುತ್ತದೆ. ಕುಮಟಾ ತಾಲೂಕಿನ ವಕೀಲರ ಸಂಘಕ್ಕೆ ಆಯ್ಕೆಯಾದ 2024-2025ನೇ ಸಾಲಿನ ವಕೀಲರಿಗೆ ಇನ್ನುಳಿದ ಹಿರಿಯ -ಕಿರಿಯ ವಕೀಲರು ಶುಭಾಶಯ ಕೋರಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ