ಅಂಕೋಲಾ : ಪುರಸಭೆಯ ಹುಲಿದೆವರವಾಡ ದ ಚುನಾಯಿತ ಸದಸ್ಯರಾದ ಜಗದೀಶ ನಾಯಕ (ಜಗದೀಶ್ ಮಾಸ್ತರ್) ರವರ ನಿಧನ ನಂತರ ಪುರಸಭೆಯಲ್ಲಿ ಹುಲಿದೇವರವಾಡ - ಗೌಡರಕೇರಿ - ಆನಂದಗಿರಿಯ ಸದಸ್ಯರ ಖುರ್ಚಿ ಖಾಲಿಯಾಗಿತ್ತು. ಇಂದು ಹುಲಿದೇವರವಾಡ - ಗೌಡರಕೇರಿ - ಆನಂದಗಿರಿ ವಾರ್ಡ್ ನ ಸದಸ್ಯ ಸ್ಥಾನಕ್ಕೆ ಮರು ಚುನಾವಣೆ ಯಶಸ್ವಿಯಾಗಿ ನಡೆಸಲಾಯಿತು.
ಚುನಾವಣೆಯನ್ನು ಹುಲಿದೆವರವಾಡದ ಸರಕಾರಿ ಕಿರಿಯಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಬಿಜೆಪಿ ಇಂದ ಮಂಗೇಶ ಗೌಡ ಹಾಗೂ ಕಾಂಗ್ರೆಸ್ ನಿಂದ ನಾಗಪ್ಪ ಗೌಡ ರವರು ಸ್ಪರ್ಧಿಸಿದ್ದರು. ಇಬ್ಬರು ಸಹ ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತೆ ಸರಾಸರಿ ಟಕ್ಕರ್ ಸ್ಪರ್ಧಿಗಳು ಎನ್ನುವ ಮಾತುಗಳು ಜನರಿಂದ ಕೇಳಲ್ಪಟ್ಟವು. ಯಾರು ಈ ಕುತೂಹಲಕಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.
ವರದಿ: ಸುಪ್ರಿಯಾ ವಿಷ್ಣು ನಾಯ್ಕ