ತಮಿಳುನಾಡಿನ ಗಡಿ ಪ್ರದೇಶವಾದ ಹೊಸೂರ ನಲ್ಲಿ ಹಾಡುಹಗಲೇ, ಕೋರ್ಟ್ ಆವರಣದಲ್ಲಿ ವೃತ್ತಿನಿರತ ವಕೀಲರಾದ ಕಣ್ಣನ್ ಎಂಬುವವರನ್ನು ಬರ್ಬರವಾಗಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುಧ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಅಂಕೋಲಾ ವಕೀಲರ ಸಂಘದ ಸದಸ್ಯರು ಇಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ ಅಂಕೋಲಾ ರವರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಸಂಘದ ಅಧ್ಯಕ್ಷ ದೀಕ್ಷಿತ ನಾಯಕ, ಉಪಾಧ್ಯಕ್ಷೆ ಪ್ರತಿಭಾ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ, ಖಜಾಂಚಿ ಆರ್ ಟಿ ಗೌಡ, ಸಹ ಕಾರ್ಯದರ್ಶಿ ತೇಜಾ ಬಂಟ, ವಕೀಲರಾದ ಉಮೇಶ ನಾಯ್ಕ, ನಾಗಾನಂದ ಬಂಟ, ಬಿ.ಡಿ ನಾಯ್ಕ, ವಿನೋದ ಶಾನಭಾಗ, ಗುರು ನಾಯ್ಕ, ಬಿ.ಟಿ ನಾಯಕ, ನಾರಾಯಣ ನಾಯಕ, ಜಗದೀಶ ಹಾರವಾಢೇಕರ್, ಲಕ್ಷ್ಮೀದಾಸ ನಾಯ್ಕ, ಮೋನಿಷ, ಮಮತಾ ಕೆರೆಮನೆ, ಪ್ರಕೃತಿ ನಾಯಕ, ಸುರೇಶ ಬಾನಾವಳಿಕರ್, ಗಜಾನನ ನಾಯ್ಕ ,ಸಂತೋಷ ನಾಯ್ಕ,ಪ್ರಸನ್ನ ನಾಯ್ಕ, ಇದ್ದರು.ತಹಸೀಲ್ದಾರರಾದ ಅನಂತ ಶಂಕರ ಮನವಿಯನ್ನು ಸ್ವೀಕರಿಸಿದರು.