ಅಂಕೋಲಾ : ತಾಲೂಕಿನ ಎಸ್.ಬಿ.ಐ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್ ಬದಲಿಸಿ 2 ಬೇರೆ ಬೇರೆ ಪ್ರಕರಣದಲ್ಲಿ ಒಟ್ಟು 77.000ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದ ಎರಡು ಪ್ರಕರಣದಲ್ಲಿ ಒಬ್ಬನೇ ಆರೋಪಿಯಾಗಿದ್ದ ವಂಚಕನನ್ನು ಅಂಕೋಲಾ ಪೊಲೀಸರು ಬೆಂಗಳೂರಿನಲ್ಲಿ ಬೇಟೆ ಯಾಡಿದ್ದಾರೆ.
ತುಮಕೂರು ಜಿಲ್ಲೆಯ ಮಾದೇನಹಳ್ಳಿ ಗ್ರಾಮದ ಬುಕಾಪಟ್ಟಣ, ಶಿರಾ ತಾಲೂಕಿನ ಅರುಣ ಕುಮಾರ್ ನನ್ನು ಬೆಂಗಳೂರಿನಲ್ಲಿ ಚುರುಕಿನ ಕಾರ್ಯಾಚರಣೆ ಮೂಲಕ ಅಂಕೋಲಾ ಪೋಲೀಸರು ಬಂಧಿಸಿದ್ದು ಠಾಣೆಯ ದಕ್ಷ ಅಧಿಕಾರಿಗಳ ಕಾರ್ಯವೈಕರಿಗೆ ಅಂಕೋಲಾ ತಾಲೂಕಿನ ಜನತೆಯು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಆರೋಪಿಯಿಂದ 25.000 ರೂ. ನಗದು ಹಣ, 1 ಮೊಬೈಲ್ ಫೋನ್ ಹಾಗೂ 1 ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. . ಆರೋಪಿತ ಕುಖ್ಯಾತ ಅಂತರ ಜಿಲ್ಲಾ ಕಳ್ಳನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಲು ಶ್ರೀ ಎಮ್. ನಾರಾಯಣ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡಜಿಲ್ಲೆ ಕಾರವಾರ ಹಾಗೂ ಶ್ರೀ ಎಮ್.ಜಗದೀಶ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಉತ್ತರಕನ್ನಡಜಿಲ್ಲೆ, ಕಾರವಾರ ಶ್ರೀ ಗಿರೀಶ ಎಸ್.ವಿ. ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರವಾರ ಉಪವಿಭಾಗ ಕಾರವಾರರವರುಗಳ ಮಾರ್ಗದರ್ಶನದಲ್ಲಿ ಹಾಗೂ ಅಂಕೋಲಾ ಪೋಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಶೇಖರ ಮಠಪತಿ ರವರ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಕುಮಾರಿ ಜಯಶ್ರೀ ಪ್ರಭಾಕರ.(ತನಿಖೆ-1) 2) ಶ್ರೀ ಉದ್ದಪ್ಪ ಧರೇಪ್ಪನವರ (ಕಾ.ಸೂ) ಮತ್ತು ಸಿಬ್ಬಂದಿಗಳಾದ 1] ಸಿ.ಹೆಚ್.ಸಿ- ಮಹಾದೇವ ಸಿದ್ದಿ 2] ಸಿ.ಎಚ್.ಸಿ 1471 ಅಂಬರೀಶ್ ನಾಯ್ಕ ಸಿಪಿಸಿಗಳಾದ. 3) ಆಸೀಪ್ ಆರ್.ಕೆ. 4)ಮನೋಜ ಡಿ, 5) ಶ್ರೀಕಾಂತ ಕಟಬರ 6)ರಯೀಸ ಬಾಗವಾನ ಹಾಗೂ ಉತ್ತರ ಕನ್ನಡ ಜಿಲ್ಲಾ ಸಿ.ಡಿ.ಆರ್ ಸೆಲ್ ನ ಸಿಬ್ಬಂದಿಯಾದ ಉದಯ ಗುನುಗಾ ಇವರುಗಳ ತಂಡ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಗಳು ಅಭಿನಂದಿಸಿ ಪ್ರಸಂಶನೆ ವ್ಯಕ್ತಪಡಿಸಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ