(ಅಂಕೋಲಾ ): ಶಾಸಕ ಸತೀಶ್ ಸೈಲ್ ಮ್ಯಾಂಗನೀಸ್ ಪ್ರಕರಣದಲ್ಲಿ ಜೈಲು ಸೇರಿದ್ದು, ಮುಂದಿನ ಕಾನೂನು ಹೋರಾಟ ನಡೆಸುತ್ತಿದ್ದಾರೆ . ಇದರ ನಡುವೆ ಅಂಕೋಲಾದಲ್ಲಿ ಸೈಲ್ ಅವರ ಅಭಿಮಾನಿ ಬಳಗವು ದೇವರ ಮೊರೆ ಹೋಗಿದ್ದಾರೆ .ಹೌದು ತಮ್ಮ ಜನ ನಾಯಕನಿಗೆ ಮುಂದಿನ ಕಾನೂನು ಹೋರಾಟದಲ್ಲಿ ಜಯಸಿಗಲಿ ಆದಷ್ಟು ಬೇಗ ಬಂಧನ ಮುಕ್ತ ವಾಗಲಿ ಎಂದೂ ಅಂಕೋಲದ ಶಾಂತದುರ್ಗ, ಆರ್ಯದುರ್ಗ,ಮಹಾಮಾಯ, ವೆಂಕಟರಮಣ ಹಾಗೂ ಯಲ್ಲಾಪುರದ ಗಂಟೆ ಗಣಪತಿ ಸನ್ನಿಧಿಯಲ್ಲಿ ಪೂಜೆಯನ್ನು ನೆರವೇರಿಸಿದ್ದಾರೆ.
ನಂತರ ಕಾಂಗ್ರೆಸ್ ನಾಯಕ ಪುರುಷೋತ್ತಮ ನಾಯ್ಕ ಮಾತನಾಡಿ " ನಮಗೆ ಎಂದಿಗೂ ಸತೀಶ ಸೇಲ್ ನಮ್ಮ ಹೆಮ್ಮೆಯ ನಾಯಕ ಅವರಿಗೆ ಬಂದಿರುವ ಕಷ್ಟ ದೂರವಾಗಿ ಮತ್ತೆ ಕ್ಷೇತ್ರದ ಜನರ ಸೇವೆ ಮಾಡಲು ಬಂದೆ ಬರುತ್ತಾರೆ " ಎಂದು ತಮ್ಮ ಅಭಿಮಾನ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಸುಜಾತ ಗಾಂವ್ಕರ್, ಪುರುಷೋತ್ತಮ್ ನಾಯ್ಕ, ಅಭಿನಂದನ್ ಖಾರ್ವಿ, ಸುರೇಶ್ ನಾಯ್ಕ , ಜಗದೀಶ್ ಖಾರ್ವಿ ಹಾಗೂ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಕಾಸ ವಾಹಿನಿ ವರದಿ