ಕಾರವಾರ : ದಿನಾಂಕ 10-11-2024 ರಂದು ಬೆಳಗಿನ ಜಾವ ಕಾರವಾರದ ಸಂತೆ ಮಾರ್ಕೆಟ್ ನಲ್ಲಿ ತರಕಾರಿಗಳನ್ನು ತಂದು ವ್ಯಾಪಾರಕ್ಕೆ ಬಂದಿದ್ದ ಮುಸ್ಲಿಂ ವ್ಯಾಪಾರಿ ಒಬ್ಬ ಕಾರವಾರದ ಪಿಕಳೆ ರೋಡ್ ನಲ್ಲಿ ಮಾರಾಟಕ್ಕೆ ತಂದಿದ್ದ ತರಕಾರಿಗಳಿಗೆ ತನ್ನ ಎಂಜಲನ್ನು ಪದೇ ಪದೇ ಉಗಿಯುತ್ತಿದ್ದು. ಸದರಿ ವ್ಯಾಪಾರಿಯನ್ನು ಗಮನಿಸುತ್ತಿದ್ದ ಸಾರ್ವಜನಿಕರು ವಿಡಿಯೋ ಮಾಡಿ ಸಾಕಷ್ಟು ಗ್ರೂಪ್ಗಳಿಗೆ ಹರಿ ಬಿಟ್ಟಿದ್ದಾರೆ..
ಈ ವಿಡಿಯೋ ಎಲ್ಲೆಡೆ ವೈರಲಾಗುತ್ತಿದ್ದು, ಸಾರ್ವಜನಿಕರು ಮುಸ್ಲಿಂ ವ್ಯಾಪಾರಿಯು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬಂದು ಹಿಗ್ಗಾ ಮುಗ್ಗ ಜಾಡಿಸಿದ್ದಾರೆ ಎಂದು ತಿಳಿದು ಬಂದಿದೆ . ನಂತರ ವ್ಯಾಪಾರಿಯನ್ನು ಕಾರವಾರದ ನಗರ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಲಾಗಿದೆ . ಈ ಘಟನೆಯಿಂದ ಕಾರವಾರದ ಜನ ಬೆಚ್ಚಿಬಿದ್ದಿದ್ದಾರೆ .
ಪಿಕಳೆ ರೋಡ್ ನಲ್ಲಿ ಮುಸ್ಲಿಂ ವ್ಯಾಪಾರಿ ತರಕಾರಿಗಳ ಮೇಲೆ ಎಂಜಲು ಉಗಿದು ಮಾರಾಟ ಮಾಡುತ್ತಿದ್ದ ಈ ಪ್ರಕರಣವು ಕಾರವಾರ ಹಾಗೂ ಅಂಕೋಲದಲ್ಲಿಯೂ ಕೂಡ ಪ್ರಾಮಾಣಿಕ ಮುಸ್ಲಿಂ ವ್ಯಾಪಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಂಭವವಿದೆ. ಮುಸ್ಲಿಂ ವ್ಯಾಪಾರಿಯ ತರಕಾರಿಗಳ ಮೇಲೆ ಎಂಜಲವನ್ನು ಉಗಿದು ಮಾರಾಟ ಮಾಡುತ್ತಿರುವ ಕೃತ್ಯದ ಹಿಂದಿನ ಉದ್ದೇಶವನ್ನು ಕಾರವಾರ ಪೊಲೀಸ್ ಇಲಾಖೆ ತನಿಖೆಯಿಂದ ಸಾರ್ವಜನಿಕರಿಗೆ ತಿಳಿಸಬೇಕಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ